...
HomeStateDengue Awareness: ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ಆರೋಗ್ಯಾಧಿಕಾರಿ ನರಸಿಂಹಯ್ಯ

Dengue Awareness: ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ಆರೋಗ್ಯಾಧಿಕಾರಿ ನರಸಿಂಹಯ್ಯ

ಸ್ವಚ್ಛತೆ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ, ಶುಚಿತ್ವದ ಕಡೆ ಹೆಚ್ಚಿನ ಗಮನಹರಿಸಿದಾಗ ಮಾತ್ರ ರೋಗ ಮುಕ್ತ ಸಮಾಜ ನಿರ್ಮಾಣವಾಗುತ್ತದೆ ಹಾಗಾಗಿ (Dengue Awareness) ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಸಾರ್ವಜನಿಕರಲ್ಲಿ ಡೆಂಗ್ಯೂ ಹರಡುವಿಕೆಗೆ (Dengue Awareness) ಕಾರಣ ಹಾಗೂ ಅದರ ಗುಣಲಕ್ಷಣದ ಬಗ್ಗೆ ವಿವರಿಸಿ, ಡೆಂಗ್ಯೂ ಹರಡದಂತೆ ತಡೆಯೋಣ ಎಂದು ಹಿರಿಯ ಆರೋಗ್ಯ ನಿರೀಕ್ಷಕ ನರಸಿಂಹಯ್ಯ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ವಿರೋಧಿ ಮಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡೆಂಗ್ಯೂ ಜ್ವರ (Dengue Awareness) ಈಡೀಸ್ ಸೊಳ್ಳೆ ಕಡಿತ ದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮಲಗುವಾಗ ಮೈ ತುಂಬ ಬಟ್ಟೆ ಧರಿಸಬೇಕು, ಸೊಳ್ಳೆ ಬತ್ತಿಗಳನ್ನು ಉಪಯೋಗಿಸಬೇಕು, ಮನೆಯಲ್ಲಿ ಬಳಕೆಗಾಗಿ ಬಳಸುವ ನೀರಿನ ತಾಣಗಳನ್ನು ವಾರಕ್ಕೊಂದು ಬಾರಿ ತಪ್ಪದೇ ಖಾಲಿ ಮಾಡಬೇಕು, ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂಬ ಕುರಿತು ಅರಿವು ಮೂಡಿಸಿದರು.

ಡೆಂಗ್ಯೂ ಮಾರಣಾಂತಿಕ: ಡೆಂಗ್ಯೂ ರೋಗವು (Dengue Awareness)  ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಮಾಡಿಸಿ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆಯಬೇಕು. ಡೆಂಗ್ಯೂ ರೋಗವು (Dengue Awareness)  ಈಡೀಸ್ ಸೊಳ್ಳೆಗಳಿಂದ ಹರಡುತ್ತದೆ. ತಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿದಲ್ಲಿ ಸೊಳ್ಳೆಗಳ ಬೆಳವಣಿಗೆ ನಿಯಂತ್ರಿಸಿ ಡೆಂಗ್ಯೂ ಹಾಗೂ ಇತರೆ ಸೊಳ್ಳೆ ಜನಿತ ರೋಗಗಳಾದ ಚಿಕನ್ ಗೂನ್ಯ,ಆನೆ ಕಾಲು ರೋಗ, ಮಲೇರಿಯ ನಿಯಂತ್ರಿಸ ಬಹುದಾಗಿದೆ ಎಂದು ತಿಳಿಸಲಾಯಿತು.

ಲಾರ್ವಾ ಸಮೀಕ್ಷೆಗೆ ಸಹಕರಿಸಿ:  ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಟ್ಟಣ ಪಂಚಾಯಿತಿ, ಗ್ರಾಪಂ ಸಿಬ್ಬಂದಿ, ಆಶಾ ಹಾಗೂ ಅರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಪ್ರತಿ ಶುಕ್ರವಾರ ಡೆಂಗ್ಯೂ ನಿಯಂತ್ರಣಕ್ಕಾಗಿ (Dengue Awareness)  ಈಡೀಸ್ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ಕೈಗೊಳ್ಳಲಾಗಿದ್ದು. ತಮ್ಮ ಮನೆಗಳಿಗೆ ಭೇಟಿ ನೀಡುವ ಸಿಬ್ಬಂದಿಗೆ ಸಹಕಾರ ನೀಡಿ ಅವರ ಸೂಚನೆ ಅನುಸಾರ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ನಿಯಂತ್ರಣಕ್ಕಾಗಿ ವಿದ್ಯಾರ್ಥಿಗಳು, ಪೋಷಕರು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಆರ್. ಜಿ. ಸೋಮಶೇಖರ್, ಮೆಹಬೂಬ್ ಖಾನ್, ರಾಮಣ್ಣ ಮಾತನಾಡಿದರು. ಉಪನ್ಯಾಸಕರಾದ ಕೆ.ವರದರಜಾನ್, ನರೇಶ್, ಮಂಜುಭಾರ್ಗವಿ, ಅನಂತ್ ಕುಮಾರ್, ರಾಮಾಂಜಿನಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.