ಕಾಲ ಬದಲಾದಂತೆ ಕಳ್ಳರು ಕಳ್ಳತನ ಮಾಡಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಂದು ವಿಚಿತ್ರ (Women Thieves Viral Video) ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಜನ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು, ಯಾರೂ ಊಹಿಸದ ರೀತಿಯಲ್ಲಿ ಸ್ಟೀಲ್ ಪಾತ್ರೆಗಳನ್ನು ಮಾಯಂ ಮಾಡಿದ ಕಿಲಾಡಿ ಮಹಿಳೆಯರ ಗ್ಯಾಂಗ್ನ ಸಿಸಿಟಿವಿ ದೃಶ್ಯಾವಳಿಗಳು ಈಗ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಇವರು ಕಳ್ಳತನ ಮಾಡಿದ ಕದೀಮ ಐಡಿಯಾ ನೋಡಿ ನೆಟ್ಟಿಗರು ಜಬರ್ದಸ್ತ್ ಆಗಿ ಶಾಕ್ ಆಗಿದ್ದಾರೆ.
Women Thieves Viral Video – ಗ್ರಾಹಕರಂತೆ ಬಂದ ಕಿಲಾಡಿ ಗಿರಾಕಿಗಳು!
ಪ್ರಮುಖ ಸ್ಟೀಲ್ ಪಾತ್ರೆಗಳ ವ್ಯಾಪಾರ ಮಳಿಗೆಯೊಂದಕ್ಕೆ ಮೂವರು ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಬೇಕಾದ ಪಾತ್ರೆ ಹಾಗೂ ಇತರೆ ವಸ್ತುಗಳನ್ನು ಖರೀದಿಸಲು ಬಂದ ಸಾಮಾನ್ಯ ಗ್ರಾಹಕರಂತೆ ಇವರು ನಟಿಸಿದ್ದಾರೆ. ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿ ಇವರಿಗೆ ಬೇರೆ ಬೇರೆ ವಿನ್ಯಾಸದ ಪಾತ್ರೆಗಳನ್ನು ತೋರಿಸುತ್ತಾ, ಇತರ ಗ್ರಾಹಕರೊಂದಿಗೆ ಬ್ಯುಸಿಯಾಗಿದ್ದರು. ಇದೇ ಸಮಯವನ್ನು ಈ ಕಿಲಾಡಿ ಆಂಟಿಗಳ ಗ್ಯಾಂಗ್ ತಮಗೆ ಅನುಕೂಲಕರವಾಗಿ ಬಳಸಿಕೊಂಡಿದೆ.
ಸೀರೆ ನೆರಿಗೆಯೊಳಗೆ ದೊಡ್ಡ ಸ್ಟೀಲ್ ಪಾತ್ರೆ ಭದ್ರ!
ಈ ಮೂವರು ಮಹಿಳೆಯರಲ್ಲಿ ಒಬ್ಬಳು ಅಂಗಡಿ ಸಿಬ್ಬಂದಿಯನ್ನು ಮಾತುಗಳಲ್ಲಿ ಬ್ಯುಸಿ ಇಟ್ಟರೆ, ಮತ್ತೊಬ್ಬಳು ಅತ್ಯಂತ ಚಾಣಾಕ್ಷತನದಿಂದ ದೊಡ್ಡ ಸೈಜಿನ ಸ್ಟೀಲ್ ಪಾತ್ರೆಯೊಂದನ್ನು ಯಾರೂ ಗಮನಿಸದಂತೆ ತನ್ನ (Women Thieves Viral Video) ಎರಡೂ ಕಾಲುಗಳ ಮಧ್ಯೆ ಇಟ್ಟುಕೊಂಡು ಸೀರೆಯಿಂದ ಕವರ್ ಮಾಡಿಕೊಂಡಿದ್ದಾಳೆ!
ಆ ಬಳಿಕ ಏನೂ ತಿಳಿಯದವಳಂತೆ ತನ್ನ ಸೀರೆಯನ್ನು ಯಥಾಪ್ರಕಾರ ಸರಿಪಡಿಸಿಕೊಳ್ಳುತ್ತಾ ಅಲ್ಲಿಂದ ನೈಸ್ ಆಗಿ ಕಾಲ್ಕಿತ್ತಲು ಯತ್ನಿಸಿದ್ದಾಳೆ. ಈ ಇಡೀ ದೃಶ್ಯ ಅಂಗಡಿಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಸೀರೆ ಉಡುವ ಶೈಲಿಯನ್ನು ಕಳ್ಳತನಕ್ಕೆ ಆಸರೆಯಾಗಿ ಬಳಸಿಕೊಂಡ ಆಕೆಯ ತಲೆಬಿಸಿ ಐಡಿಯಾ ಕಂಡು ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. Read this also : ಮಾಲೀಕನನ್ನೆ ಯಾಮಾರಿಸಿ 16 ಲಕ್ಷ ಚಿನ್ನಾಭರಣ ಕದ್ದ ಕಿಲಾಡಿ ಕಳ್ಳಿಯರು….!
ಸಿಸಿಟಿವಿ ನೋಡಿ ಮಾಲೀಕನಿಗೆ ಹಾರ್ಟ್ ಅಟ್ಯಾಕ್ ಆಗೋಷ್ಟಿತ್ತಾ?
ಅಂಗಡಿಯಲ್ಲಿದ್ದ ಸ್ಟೀಲ್ ವಸ್ತುಗಳು ಕಡಿಮೆಯಾಗಿರುವುದನ್ನು (Women Thieves Viral Video) ಗಮನಿಸಿದ ಮಾಲೀಕರು ತಕ್ಷಣ ಸಿಸಿಟಿವಿ ಫುಟೇಜ್ ಪರಿಶೀಲಿಸಿದ್ದಾರೆ. ಆಗ ಈ ಕಿಲಾಡಿ ಆಂಟಿಗಳ ಅಸಲಿ ಬಣ್ಣ ಬಯಲಾಗಿದೆ. ಈ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಸದ್ಯ ವಿಡಿಯೋ (Video Here) ಸಖತ್ ವೈರಲ್ ಆಗುತ್ತಿದೆ.

ನೆಟ್ಟಿಗರ ಕಾಮೆಂಟ್ಗಳು:
- “ಕಳ್ಳತನ ಮಾಡಲು ಇಂತಹ ಟೆಕ್ನಿಕ್ ಬಳಸಲು ಹೇಗೆ ಸಾಧ್ಯ? ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ!” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
- ಇನ್ನು ಕೆಲವರು, “ಮಹಿಳೆಯರು ಸೀರೆ ಉಡುವುದನ್ನು ಕಳ್ಳತನಕ್ಕೂ ಎಷ್ಟು ಅದ್ಭುತವಾಗಿ ಬಳಸಿಕೊಂಡಿದ್ದಾರೆ ನೋಡಿ” ಎಂದು ವ್ಯಂಗ್ಯವಾಡಿದ್ದಾರೆ.
ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ (Women Thieves Viral Video) ಸಹ, ಅಷ್ಟು ಧೈರ್ಯವಾಗಿ ಹಾಗೂ ಚಾಣಾಕ್ಷತನದಿಂದ ಸ್ಟೀಲ್ ಪಾತ್ರೆಗಳನ್ನು ಮಾಯಂ ಮಾಡಿರುವುದು ಎಲ್ಲರನ್ನೂ ಬೆರಗುಗೊಳಿಸಿದೆ. ವ್ಯಾಪಾರಿಗಳೇ, ನಿಮ್ಮ ಅಂಗಡಿಗೂ ಇಂತಹ ಗ್ರಾಹಕರು ಬಂದರೆ ಸ್ವಲ್ಪ ಎಚ್ಚರದಿಂದಿರಿ!
