Viral Video : ಸಾವಿನ ದವಡೆಯಿಂದ ಪಾರಾದ ವ್ಯಕ್ತಿ, ಹೈವೋಲ್ಟೇಜ್ ತಂತಿ ಮುಟ್ಟುವ ಮುನ್ನವೇ ಎಂಟ್ರಿ ಕೊಟ್ಟ ರಿಯಲ್ ಹೀರೋ..!

ನಾವು ಮೊಬೈಲ್ ಗೇಮ್‌ಗಳಲ್ಲಿ ರೈಲಿನ ಮೇಲೆ ಓಡಾಡುವ ‘ಸಬ್‌ವೇ ಸರ್ಫರ್ಸ್’ (Subway Surfers) ಆಟವನ್ನು ನೋಡಿರುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಿಜಜೀವನದಲ್ಲಿ ನಡೆದಿದ್ದು, ನೋಡುವವರ ಎದೆಬಡಿತ ಹೆಚ್ಚಿಸಿತ್ತು. ಅದೃಷ್ಟವಶಾತ್, RPF ಪೇದೆಯೊಬ್ಬರ ಸಮಯಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಮೌಹಾರ್ ಫಾಟಕ್ (Mauhar Phatak) ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

RPF jawan climbing a train roof to rescue a man before he touches overhead high-voltage wires at Mauhar Phatak railway station - Viral Video

Viral Video – ಏನಿದು ಘಟನೆ?

ನಿಲ್ದಾಣದಲ್ಲಿ ನಿಂತಿದ್ದ ರೈಲೊಂದರ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಹತ್ತಿ ಕುಳಿತಿದ್ದಾನೆ. ರೈಲ್ವೆ ಹಳಿಗಳ ಮೇಲೆ ಹೈವೋಲ್ಟೇಜ್ ವಿದ್ಯುತ್ ತಂತಿಗಳು (Overhead electric wires) ಹಾದು ಹೋಗಿರುತ್ತವೆ ಎಂಬ ಅರಿವೂ ಇಲ್ಲದೆ, ಆತ ರೈಲಿನ ಟಾಪ್ ಮೇಲೆ ನಿರಾತಂಕವಾಗಿ ಓಡಾಡುತ್ತಿದ್ದ. ಇದನ್ನು ಕಂಡ ಪ್ರಯಾಣಿಕರು ಮತ್ತು ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಆತ ಏನಾದರೂ ಮಾಡಿ ವಿದ್ಯುತ್ ತಂತಿಯನ್ನು ಮುಟ್ಟಿದ್ದರೆ ಕ್ಷಣಾರ್ಧದಲ್ಲಿ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು. ಕೆಳಗೆ ನಿಂತಿದ್ದ ಜನರು ಎಷ್ಟೇ ಕೂಗಿಕೊಂಡರೂ ಆತ ಕೆಳಗೆ ಇಳಿಯುವ ಮನಸ್ಸು ಮಾಡಲಿಲ್ಲ. Read this also : ಲೇಡಿ ಸ್ನೇಕ್ ಕ್ಯಾಚರ್ ಧೈರ್ಯಕ್ಕೆ ಫಿದಾ ಆಯ್ತಾ ಹಾವು? ಬುಸುಗುಡುತ್ತಾ ಕೆನ್ನೆಗೆ ಕಚ್ಚಿದ ಭಯಾನಕ ವಿಡಿಯೋ ವೈರಲ್..!

Viral Video – ರಿಯಲ್ ಹೀರೋ ಎಂಟ್ರಿ!

ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿವಾಗುತ್ತಿದ್ದಂತೆಯೇ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಜವಾನರೊಬ್ಬರು ತಕ್ಷಣ ಕಾರ್ಯಪ್ರವೃತ್ತರಾದರು. ಸಿನಿಮೀಯ ರೀತಿಯಲ್ಲಿ ರೈಲಿನ ಟಾಪ್ ಏರಿದ ಪೇದೆ, ಆ ವ್ಯಕ್ತಿಯನ್ನು ಹಿಡಿಯಲು ರೈಲಿನ ಮೇಲೆಯೇ ಓಡಿದ್ದಾರೆ. ಈ ದೃಶ್ಯ ‘ಸಬ್‌ವೇ ಸರ್ಫರ್ಸ್’ ಆಟವನ್ನು ನೆನಪಿಸುವಂತಿತ್ತು. ಕೊನೆಗೂ ಆತನನ್ನು ಹಿಡಿದು, ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಪೇದೆ ಯಶಸ್ವಿಯಾದರು.

RPF jawan climbing a train roof to rescue a man before he touches overhead high-voltage wires at Mauhar Phatak railway station - Viral Video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Viral Video – ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ಒಂದು ನಿಮಿಷದ ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಪ್ರಾಣದ ಹಂಗು ತೊರೆದು ವ್ಯಕ್ತಿಯನ್ನು ರಕ್ಷಿಸಿದ RPF ಸಿಬ್ಬಂದಿಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇವರೇ ನಿಜವಾದ ಹೀರೋ,” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ರೈಲಿನ ಮೇಲೆ ಹತ್ತಿದ ವ್ಯಕ್ತಿ ಯಾರು? ಮತ್ತು ಆತ ಯಾಕೆ ಹೀಗೆ ವರ್ತಿಸಿದನು? ಎಂಬ ಬಗ್ಗೆ ರೈಲ್ವೆ ಇಲಾಖೆಯಿಂದ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಒಟ್ಟಿನಲ್ಲಿ, ಒಂದು ಸಣ್ಣ ತಪ್ಪು ನಡೆಯುತ್ತಿದ್ದರೂ ಅಲ್ಲಿ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು!

Leave a Comment

Your email address will not be published. Required fields are marked *

Scroll to Top