HomeEntertainmentವೈ.ಎಸ್.ಆರ್ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ಅಲ್ಲು ಅರ್ಜುನ್, ಟ್ರೆಂಡಿಂಗ್ ಆದ ವಿಡಿಯೋ, ಪೊಟೋಸ್…..!

ವೈ.ಎಸ್.ಆರ್ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ಅಲ್ಲು ಅರ್ಜುನ್, ಟ್ರೆಂಡಿಂಗ್ ಆದ ವಿಡಿಯೋ, ಪೊಟೋಸ್…..!

ಸದ್ಯ ಆಂಧ್ರಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ಕಾವು ಬಿಸಿಲಿನ ತಾಪಕ್ಕಿಂತ ಜೋರಾಗಿಯೇ ಇದೆ ಎನ್ನಬಹುದಾಗಿದೆ. ವೈ.ಎಸ್.ಆರ್‍.ಪಿ ಹಾಗೂ ಟಿಡಿಪಿ, ಜನಸೇನಾ ಪಕ್ಷಗಳು ಎನ್.ಡಿ.ಎ ಮೈತ್ರಿಕೂಟ ಸೇರಿಕೊಂಡಿದ್ದು, ಎರಡೂ ಬಣಗಳೂ ಭಾರಿ ಪೈಪೋಟಿ ಮಾಡುತ್ತಿವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಅಲ್ಲು ಅರ್ಜುನ್ ರವರು ಜನಸೇನಾ ಪಕ್ಷದ ಅಭ್ಯರ್ಥಿ ನಟ ಪವನ್ ಕಲ್ಯಾಣ್ ರವರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಇದೀಗ ಅವರು ಆಂಧ್ರಪ್ರದೇಶದ ನಂದ್ಯಾಲದಲ್ಲಿ ವೈ.ಸಿ.ಪಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದಾರೆ. ಈ ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ.

Allu Arjun in Nandyal 0

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಆಂಧ್ರಪ್ರದೇಶದ ಸಾರ್ವತ್ರಿಕ ಚುನಾವಣೆಯ ನಿಮಿತ್ತ ನಂದ್ಯಾಲದಲ್ಲಿ ಸದ್ದು ಮಾಡಿದ್ದಾರೆ. ವೈ.ಎಸ್.ಆರ್‍. ಕಾಂಗ್ರೇಸ್ ಪಾರ್ಟಿಯ ಎಂ.ಎಲ್.ಎ ಅಭ್ಯರ್ಥಿ ಶಿಲ್ಪಾ ರವಿ ಅಲ್ಲು ಅರ್ಜುನ್ ಸ್ನೇಹಿತರಾಗಿದ್ದು, ಅವರ ಪರ ಪ್ರಚಾರ ನಡೆಸಲು ನಂದ್ಯಾಲಗೆ ಹೋಗಿದ್ದಾರೆ. ಅಲ್ಲು ಅರ್ಜುನ್ ರವರನ್ನು ನೋಡೋಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಜನಸಾಗರವೇ ಹರಿದುಬಂದಿತ್ತು. ದೊಡ್ಡ ಮಾಲೆಯೊಂದಿಗೆ ಅಲ್ಲು ಅರ್ಜುನ್ ರವರಿಗೆ ಭವ್ಯ ಸ್ವಾಗತ ಕೋರಲಾಗಿತ್ತು. ಬಳಿಕ ಅಭ್ಯರ್ಥಿ ಶಿಲ್ವಾ ರವಿ ಮನೆಯಲ್ಲಿ ಅಲ್ಲು ಅರ್ಜುನ್ ಹಾಗೂ ಅವರ ಪತ್ನಿ ಸ್ನೇಹಾರಡ್ಡಿಯವರನ್ನು ಸ್ವಾಗತಿಸಿದರು.

Allu Arjun in Nandyal 2

ಇನ್ನೂ ಅಲ್ಲು ಅರ್ಜುನ್ ರವರನ್ನು ನೋಡಲು ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಶಿಲ್ಪಾ ರವಿ ಮನೆಯ ಬಳಿ ಜಮಾಯಿಸಿದ್ದರು. ಅಭಿಮಾನಿಗಳ ನಡುವೆ ತನ್ನ ಮಿತ್ರನ ಮನೆಗೆ ಹೋಗಲು ಅಲ್ಲು ಅರ್ಜುನ್ ಹರಸಾಹಸ ಪಡಬೇಕಾಯ್ತು ಎನ್ನಬಹುದು. ಇನ್ನೂ ಶಿಲ್ಪಾ ರವಿ ಮನೆಯ ಬಾಲ್ಕನಿ ಮೇಲಿಂದಲೇ ಅಭಿಮಾನಿಗಳಿಗೆ ಕೈ ಬೀಸಿ ಧನ್ಯವಾದ ತಿಳಿಸಿದರು. ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ನಂದ್ಯಾಲದಿಂದ ಎಂ.ಎಲ್.ಎ ಸ್ಥಾನಕ್ಕಾಗಿ ಶಿಲ್ಪಾ ರವಿಚಂದ್ರರೆಡ್ಡಿ ಸ್ಪರ್ಧೆ ಮಾಡಿದ್ದರು. ಆಗಲೂ ಅಲ್ಲು ಅರ್ಜುನ್ ಮಿತ್ರನಿಗಾಗಿ ಪ್ರಚಾರ ನಡೆಸಿದ್ದರು. ಬಳಿಕ ಭಾರಿ ಮೆಜಾರಿಟಿಯೊಂದಿಗೆ ಶೀಲ್ಪಾ ರವಿಚಂದ್ರರೆಡ್ಡಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ತನ್ನ ಸ್ನೇಹಿತನಿಗಾಗಿ ಮತ್ತೊಮ್ಮೆ ಬೆಂಬಲ ಸೂಚಿಸಲು ನಂದ್ಯಾಲಕ್ಕೆ ಬಂದಿದ್ದಾರೆ. ತನ್ನ ಮಿತ್ರನ ಕೈಹಿಡಿದು ತಮ್ಮ ಅಭಿಮಾನಿಗಳಿಗೆ ತೋರಿಸಿ ಬೆಂಬಲ ನೀಡುವಂತೆ ಹೇಳಿದ್ದಾರೆ.

Allu Arjun in Nandyal 3

ರಾಜಕೀಯ ಬೇರೆ, ಸ್ನೇಹ ಬೇರೆ ಎಂದು ನಂದ್ಯಾಲದಲ್ಲಿ ಅಲ್ಲು ಅರ್ಜುನ್ ತಮ್ಮ ಸ್ನೇಹಿತನಿಗೆ ಬೆಂಬಲ ನೀಡಿದ್ದಾರೆ. ಇನ್ನೂ ಅಭಿಮಾನಿಗಳು ಈ ಪೊಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಿದ್ದಾರೆ. #AlluArjunAtNandyal ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಟ್ರೆಂಡಿಂಗ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular