Alert : ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರೇ ಎಚ್ಚರ, ಮಗು ಎತ್ತಿಕೊಂಡು ಬಂದು ನಿಮ್ಮ ಪರ್ಸ್ ಎಗಿರಿಸುತ್ತಾರೆ ಎಚ್ಚರ…!

Alert – ಬಸ್‌ನಲ್ಲಿ ಪ್ರಯಾಣಿಸುವಾಗ ಹುಷಾರಾಗಿರಿ! ಕಳ್ಳರು ಅಂದ್ರೆ ಸಾಮಾನ್ಯವಾಗಿ ಪುರುಷರೇ ನೆನಪಾಗ್ತಾರೆ. ಆದ್ರೆ ಇತ್ತೀಚೆಗೆ ಪುರುಷರಿಗಿಂತಲೂ ಅಪಾಯಕಾರಿ ‘ಕಳ್ಳಿಯರು’ ಸಾರ್ವಜನಿಕ ಸಾರಿಗೆಯಲ್ಲಿ ಸಕ್ರಿಯರಾಗಿದ್ದಾರೆ. ಅದ್ರಲ್ಲೂ ವಿಶೇಷವಾಗಿ ಮಕ್ಕಳನ್ನ ಹಿಡಿದುಕೊಂಡು ಬರುವ ಕಳ್ಳಿಯರು ತುಂಬಾನೇ ಚಾಲಾಕಿ! ಅವರು ಮಗುವನ್ನ ಎತ್ತಿಕೊಂಡಿರೋದ್ರಿಂದ ಯಾರೂ ಅವರನ್ನ ಸಂಶಯಿಸೋದಿಲ್ಲ. ಭಿಕ್ಷುಕರು ಮಕ್ಕಳನ್ನ ಹಿಡಿದುಕೊಂಡು ಜನರ ಕರುಣೆ ಗಿಟ್ಟಿಸೋ ತರಾನೇ, ಇವ್ರೂ ಕಳ್ಳತನಕ್ಕೆ ಮಕ್ಕಳನ್ನ ಬಳಸಿಕೊಳ್ತಾರೆ.

Alert - Female thief using baby to steal from woman's vanity bag in crowded public bus – CCTV footage from Odisha

Alert – ರಶ್ ಇರೋ ಬಸ್ಸು – ಕಳ್ಳಿಯರ ಪಾಲಿಗೆ ವರ!

ಜನಸಂದಣಿ ಇರೋ ಬಸ್ಸುಗಳು ಇವ್ರ ಪಾಲಿಗೆ ವರದಾನ! ಬಸ್ಸು ರಶ್ ಇದ್ದಾಗ ಯಾರೂ ಯಾರನ್ನೂ ಗಮನಿಸೋದಿಲ್ಲ, ಎಲ್ಲರೂ ತಮ್ಮ ಪಾಡಿಗೆ ಇರ್ತಾರೆ. ಇನ್ನು ಈಗಿನ ಕಾಲದಲ್ಲಿ ಗರ್ಭಿಣಿಯರಿಗೆ, ವೃದ್ಧರಿಗೆ ಅಥವಾ ಮಕ್ಕಳನ್ನ ಹಿಡಿದುಕೊಂಡು ಬಂದವರಿಗೆ ಸೀಟು ಬಿಟ್ಟುಕೊಡುವ ಉದಾರತೆ ತುಂಬಾ ಜನರಲ್ಲಿ ಕಡಿಮೆ ಇರೋದೂ ಇವ್ರಿಗೆ ಪ್ಲಸ್ ಪಾಯಿಂಟ್. ಒಂದು ವೇಳೆ ನೀವ್ ಒಳ್ಳೆ ಮನಸ್ಸಿನವರಾಗಿದ್ದು ಸೀಟು ಬಿಟ್ಟುಕೊಟ್ಟರೂ, ಅದು ಅವ್ರಿಗೆ ಬೇಕಿಲ್ಲ! ಇಂಥ ಭಯಾನಕ ಕಳ್ಳಿಯೊಬ್ಬಳ ಕರಾಮತ್ತು ಬಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ, ವಿಡಿಯೋ ನೋಡಿ ಶಾಕ್ ಆಗ್ತೀರಾ!

Alert – ವ್ಯಾನಿಟಿ ಬ್ಯಾಗ್‌ನಿಂದ ಮೊಬೈಲ್, ಪರ್ಸ್ ಎಗರಿಸುವ ಚಾಕಚಕ್ಯತೆ!

ಸಾಮಾನ್ಯವಾಗಿ ಮಹಿಳೆಯರು ವ್ಯಾನಿಟಿ ಬ್ಯಾಗ್​ಗಳನ್ನ ಭುಜಕ್ಕೆ ನೇತುಹಾಕಿಕೊಂಡಿರುತ್ತಾರೆ. ಈ ಬ್ಯಾಗ್‌ಗಳು ಹಿಂಭಾಗದಲ್ಲಿರೋದೇ ಇವ್ರಿಗೆ ಅನುಕೂಲ. ಮಗು ಹಿಡಿದಿರೋ ಈ ಕಳ್ಳ ಅಮ್ಮಂದಿರು ನಿಧಾನವಾಗಿ ಹೇಗೆ ಪರ್ಸ್‌ನಿಂದ ಹಣ, ಮೊಬೈಲ್ ಕದಿಯುತ್ತಾರೆ ಅಂತ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ. ಕೈಯಲ್ಲಿ ಮಗು ಇರೋದ್ರಿಂದ, ಅದನ್ನ ಅತ್ತಿತ್ತ ಆಡಿಸಿದಂತೆ ಮಾಡಿ, ಬಸ್‌ನಲ್ಲಿರುವ ಯಾರಿಗೂ ಇವ್ರು ಏನು ಮಾಡ್ತಿದ್ದಾರೆ ಅಂತ ತಿಳಿಯೋದೇ ಇಲ್ಲ. ಬಸ್ ಜನಸಂದಣಿಯಿಂದ ತುಂಬಿದ್ದಾಗ, ಜನ ತಮ್ಮ ಪಾಡಿಗೆ ಇರ್ತಾರೆ, ಇನ್ನು ಬೇರೆಯವರ ಚಟುವಟಿಕೆಗಳನ್ನ ನೋಡೋಕೆ ಯಾರಿಗೆ ಸಮಯ ಸಿಗುತ್ತೆ? ಇದನ್ನೇ ಉಪಯೋಗಿಸಿಕೊಂಡು ಕಳ್ಳಿಯರು ಆರಾಮಾಗಿ ಪರ್ಸ್ ಎಗರಿಸ್ತಾರೆ!

Alert - Female thief using baby to steal from woman's vanity bag in crowded public bus – CCTV footage from Odisha

ವೈರಲ್ ವಿಡಿಯೋ ನೋಡಿ ಎಚ್ಚೆತ್ತುಕೊಳ್ಳಿ - Click Here

Alert – ಒಡಿಶಾದಲ್ಲಿ ನಡೆದ ಘಟನೆ

ಈ ವಿಡಿಯೋ ನೋಡಿದ ಮೇಲೆ ಮಹಿಳೆಯರಷ್ಟೇ ಅಲ್ಲ, ಪ್ರತಿಯೊಬ್ಬರೂ ಹೇಗೆ ಹುಷಾರಾಗಿ ಇರಬೇಕು ಅಂತ ತಿಳಿಯುತ್ತೆ. ಅಂದಹಾಗೆ, ಈ ಕಳ್ಳತನ ಕರ್ನಾಟಕದಲ್ಲಿ ನಡೆದಿದ್ದಲ್ಲ, ಬದಲಿಗೆ ಒಡಿಶಾದ ಬಾಲಸೋರ್‌ನಲ್ಲಿ ನಡೆದಿದೆ. ಅಲ್ಲಿನ ಸಿಟಿ ಬಸ್‌ನಲ್ಲಿ ಎದುರಿಗೆ ನಿಂತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಒಳಗೆ ಕೈ ಹಾಕಿ, ಮೊಬೈಲ್ ಅಥವಾ ಪರ್ಸ್ ಕದಿಯುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನದ ಸಂಪೂರ್ಣ ಘಟನೆ ಬಸ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಆ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ಮಹಿಳೆ ಮೊದಲು ಇನ್ನೊಬ್ಬ ಮಹಿಳೆಯ ಪರ್ಸ್ ಎಗರಿಸಿದ್ದಾಳೆ, ಆ ನಂತರ ಎದುರಿಗೆ ಇರೋ ಮಹಿಳೆಯ ಬ್ಯಾಗ್‌ನಿಂದ ಮೊಬೈಲ್ ತೆಗೆಯುತ್ತಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

Alert –  ಪೊಲೀಸ್ ಕ್ರಮ ಮತ್ತು ನಿಮ್ಮ ಸುರಕ್ಷತೆ: ನಿಮ್ಮ ಜವಾಬ್ದಾರಿ ಏನು?

ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಕಳ್ಳತನ ಮಾಡಿದ ಮಹಿಳೆಯನ್ನ ಬಂಧಿಸಿದ್ದಾರೆ. ಇಂತಹ ಘಟನೆಗಳು ಸಾರ್ವಜನಿಕ ಸಾರಿಗೆಯಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನ ಹುಟ್ಟುಹಾಕುತ್ತಿವೆ ಮತ್ತು ಪ್ರಯಾಣಿಕರಲ್ಲಿ ಭಯದ ವಾತಾವರಣವನ್ನ ಸೃಷ್ಟಿಸಿವೆ. ಇಂತಹ ಘಟನೆಗಳನ್ನ ಕಡಿಮೆ ಮಾಡಲು ಜನರು ಜಾಗರೂಕರಾಗಿರಬೇಕು ಅಂತ ಪೊಲೀಸರು ಮನವಿ ಮಾಡಿದ್ದಾರೆ.

Read this also : ಮೂವರು ಪತ್ನಿಯರು, 9 ಮಕ್ಕಳು: ಕುಟುಂಬ ಪೋಷಿಸಲು ಕಳ್ಳನಾದ ಅಪ್ಪ! ಬೆಂಗಳೂರಿನಲ್ಲಿ ವಿಚಿತ್ರ ಘಟನೆ…!

ನೆನಪಿರಲಿ: ವಿಶೇಷವಾಗಿ ಬಸ್ಸು ರಶ್ ಇದ್ದಾಗ ಮಹಿಳೆಯರು ತಮ್ಮ ಬ್ಯಾಗ್‌ಗಳನ್ನ ತಮ್ಮ ಎದುರಿಗೆ ಇಟ್ಟುಕೊಳ್ಳೋದು ಉತ್ತಮ. ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ನಿಂತಷ್ಟೂ ಒಳ್ಳೆಯದು. ಇಲ್ಲದಿದ್ದರೆ, ಬರುವವರಲ್ಲಿ ಯಾರು ಒಳ್ಳೆಯವರು, ಯಾರು ಕಳ್ಳರು ಅಂತ ತಿಳಿಯೋದೇ ಕಷ್ಟ. ಒಂದು ವೇಳೆ ನಿಮಗೆ ಕಳ್ಳತನ ಆಗಿರೋದು ತಿಳಿಯೋ ಹೊತ್ತಿಗೆ ಅವರು ಬಸ್ಸಿಳಿದು ಪರಾರಿಯಾಗಿದ್ದರೆ ಆಮೇಲೆ ಪಶ್ಚಾತ್ತಾಪ ಪಟ್ಟರೂ ಪ್ರಯೋಜನವಿಲ್ಲ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? MeetPress Addon – Streamline Your Bookings With Google Meet Full Width Background Image Slider Advanced Justified Portfolio Builder Ultimate Smart Slider – WordPress jCountdown Mega Package for WordPress B2B Marketplace Vendor Subdomain for WooCommerce – Webkul | CodeCanyon WordFex – Syncronize WordPress with Perfex Coinpress – Cryptocurrency Pages for WordPress Social Share & Locker Pro Pack (W&B) Background Switcher Addon For Elementor