Video – ಅಪ್ಪ ಅಂದರೆ ಆಕಾಶಕ್ಕೆ ಸಮಾನ. ಅಪ್ಪನಿದ್ದರೆ ಯಾವ ಭಯವೂ ಇಲ್ಲ, ಯಾವ ಚಿಂತೆಯೂ ಇಲ್ಲ. ಅಪ್ಪ-ಮಗಳ ಬಾಂಧವ್ಯ (father-daughter bond) ಜಗತ್ತಿನ ಅತೀ ಸುಂದರ ಸಂಬಂಧಗಳಲ್ಲಿ ಒಂದು. ಅಪ್ಪ ತನ್ನ ಮಗಳಿಗಾಗಿ ಏನೆಲ್ಲಾ ಮಾಡ್ತಾನೆ, ಅದೇ ರೀತಿ ಮಗಳು ಕೂಡ ಅಪ್ಪನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಇಂತಹ ಪ್ರೀತಿ, ಮಮತೆಗೆ ಸಾಕ್ಷಿಯಾಗುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (social media) ಆಗಾಗ ವೈರಲ್ ಆಗುತ್ತಿರುತ್ತವೆ. ಈಗ ಇಂತಹದ್ದೇ ಒಂದು ಮುದ್ದಾದ ವಿಡಿಯೋ ಜನರ ಮನಸ್ಸು ಗೆದ್ದಿದೆ.
Video – ವೈರಲ್ ವಿಡಿಯೋದಲ್ಲಿ ಏನಿದೆ?
ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಮಗಳೊಬ್ಬಳು ತನ್ನ ತಂದೆಗೆ ಬಿಸಿಲು ತಾಗದಂತೆ ಛತ್ರಿ ಹಿಡಿದು ಸೈಕಲ್‌ನಲ್ಲಿ ನಿಂತಿರುವುದನ್ನು ನೋಡಬಹುದು. ತಂದೆ ಸೈಕಲ್ ತುಳಿಯುತ್ತಿದ್ದರೆ, ಹಿಂಬದಿ ಸೀಟಿನಲ್ಲಿ ಕುಳಿತಿರುವ ಈ ಪುಟಾಣಿ, ಅಪ್ಪನಿಗೆ ಬಿಸಿಲು ಬೀಳಬಾರದೆಂದು ತಾನೇ ಛತ್ರಿ ಹಿಡಿದು ನಿಂತಿದ್ದಾಳೆ. ಅಪ್ಪನ ಕೈಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಛತ್ರಿಯನ್ನು ಹಿಡಿದುಕೊಂಡು ನಿಂತಿರುವ ಈ ದೃಶ್ಯ ನಿಜಕ್ಕೂ ಹೃದಯ ಕರಗಿಸುವಂತಿದೆ.
Video – ಪುಟ್ಟ ಕಂದನ ಕಾಳಜಿಗೆ ನೆಟ್ಟಿಗರು ಫಿದಾ
ಈ ವಿಡಿಯೋವನ್ನು @jaikYadhav16 ಎಂಬ X (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೂನ್ 2 ರಂದು ಶೇರ್ ಮಾಡಲಾದ ಈ ವಿಡಿಯೋ ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Read this also : ತಾತ-ಮೊಮ್ಮಗಳ ಮುದ್ದು ನೃತ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್, ಕಾಮೆಂಟ್ ಗಳ ಸುರಿಮಳೆ….!
ಒಬ್ಬ ಬಳಕೆದಾರರು, “ಮಗಳು ಯಾವತ್ತಿದ್ದರೂ ರಾಣಿಯಿದ್ದಂತೆ, ತಂದೆಯ ಜೀವನದಲ್ಲಿ ಸದಾ ಸಂತೋಷವನ್ನು ತುಂಬುತ್ತಾಳೆ” ಎಂದು ಬರೆದಿದ್ದಾರೆ. ಇನ್ನೊಬ್ಬರು, “ಈ ವಿಡಿಯೋವನ್ನು ನೋಡಿದ ಮೇಲೆ ನನ್ನ ಕಣ್ಣು ಒದ್ದೆಯಾಯಿತು. ಈ ವಿಡಿಯೋ ನನ್ನ ಆತ್ಮವನ್ನು ತಟ್ಟಿದೆ” ಎಂದು ಭಾವುಕರಾಗಿದ್ದಾರೆ. ಮತ್ತೊಬ್ಬ ಬಳಕೆದಾರರು, “ಮಗಳ ಕಾಳಜಿಯೇ ಹೀಗೆ, ಯಾವಾಗಲೂ ಹಿತವಾದ ಅನುಭವ ತಂದು ಕೊಡುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಈ ಅಪ್ಪ-ಮಗಳ ಮಧುರ ಬಾಂಧವ್ಯದ ವಿಡಿಯೋವನ್ನು ನೀವೂ ನೋಡಿ ಆನಂದಿಸಿ: Click here