Monday, June 30, 2025
HomeNationalViral News: 10 ಲಕ್ಷಕ್ಕೆ ಪತಿಯ ಕಿಡ್ನಿ ಮಾರಿ, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ, ಬಳಿಕ ಆಗಿದ್ದೇನು...

Viral News: 10 ಲಕ್ಷಕ್ಕೆ ಪತಿಯ ಕಿಡ್ನಿ ಮಾರಿ, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ, ಬಳಿಕ ಆಗಿದ್ದೇನು ಗೊತ್ತಾ?

Viral News – ಸಮಾಜದಲ್ಲಿ ಮೋಸ, ದ್ರೋಹದ ಕತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಂತಹುದೇ ಘಟನೆಯೊಂದು ಪಶ್ಚಿಮ ಬಂಗಾಳದ ಹವ್ಡಾ ಜಿಲ್ಲೆಯದು. ಇಲ್ಲೋಬ್ಬ ಮಹಿಳೆ ತನ್ನ ಗಂಡನನ್ನು ವಂಚಿಸಿ, ಆತನ ಕಿಡ್ನಿ ಮಾರಾಟ ಮಾಡಿಸಿ, ಲಕ್ಷಾಂತರ ರೂಪಾಯಿ ಗಳಿಸಿದ್ದು, ಆ ಹಣದೊಂದಿಗೆ ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ. ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

women left husband and escape with her lover 1

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಂಕ್ರೈಲ್ ಮೂಲದ ಮಹಿಳೆಗೆ ಮದುವೆಯಾಗಿ ಮಕ್ಕಳು ಇದ್ದರು. ಮದುವೆಯಾಗಿದ್ರೂ ಆಕೆ ರವಿದಾಸ್​ ಎಂಬಾತನೊಂದಿಗೆ ಜೊತೆ ಲವ್ವಿ-ಡವ್ವಿ ಇತ್ತು. ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಈ ಮಹಿಳೆ ಗಂಡನ ಕಿಡ್ನಿ ಮಾರೋ ಪ್ಲಾನ್ ಮಾಡಿದ್ದಾಳೆ. ಅದರಂತೆ ಪತಿಗೆ ತನ್ನ ಕಿಡ್ನಿ ಮಾರಾಟ ಮಾಡುವಂತೆ ಒತ್ತಾಯಿಸಿದ್ದಾಳೆ. ಇನ್ನೂ ಪತ್ನಿಯ ಕಾಟ ತಾಳಲಾರದೆ ಆತ ಸತತ 3 ತಿಂಗಳುಗಳ ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿ ಕಿಡ್ನಿಯನ್ನು ಮಾರಾಟ ಮಾಡಿದ್ದಾನೆ. ಇದರಿಂದ ತನ್ನ ಮನೆಯ ಹಣಕಾಸಿನ ಸಮಸ್ಯೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ಭಾವಿಸಿದ್ದಾನೆ. ಆದರೆ, ಪತಿ ಮಾತ್ರ ಈ ಹಣದಿಂದ ಮನೆಯ ಬಡತನದ ಸಮಸ್ಯೆ ಮುಗಿದು ಮಗಳನ್ನು ಚೆನ್ನಾಗಿ ಓದಿಸಿ ಅವಳ ವಿವಾಹ ಮಾಡಬೇಕೆಂದುಕೊಂಡಿದ್ದು ಉದ್ದೇಶಿಸಿದ್ದ ಎನ್ನಲಾಗಿದೆ.

women left husband and escape with her lover 2

ಪತಿ ಕಿಡ್ನಿ ಮಾರಿ ಅದರಿಂದ ಬಂದಂತಹ 10,00,000 ರೂಪಾಯಿ ಹಣವನ್ನು ನಂಬಿಕೆಯಿಟ್ಟು ಪತ್ನಿಯ ಕೈಗೆ ಕೊಟ್ಟಿದ್ದ. ಆದರೆ, ಆಕೆ ರವಿದಾಸ್ ಜೊತೆ ಅದೇ ಹಣದೊಂದಿಗೆ ಓಡಿ ಹೋಗಿದ್ದಾಳೆ. ನಂತರ ಬ್ಯಾಕರ್​ಪುರದಲ್ಲಿ ಹೊಸ ಸಂಸಾರ ಆರಂಭಿಸಿದ್ದಾರೆ. ಬ್ಯಾಕರ್‌ ಪುರಕ್ಕೆ ಹೋದ ಪತಿ ಪತ್ನಿಯನ್ನ ಬಾ ಎಂದು ಕರೆದಿದ್ದಾನೆ. ನಾನು ಬರಲ್ಲ ಬೇಕಾದ್ರೆ ಡಿವೋರ್ಸ್​ ಕೊಡ್ತೀನಿ ಎಂದು ಮಹಿಳೆ ಹೇಳಿದ್ದಾಳೆ. ಇನ್ನೂ ತಾನು ಪತ್ನಿಯ ಮಾತುಗಳನ್ನು ನಂಬಿ ಮೋಸಹೋಗಿದ್ದೇನೆ, ನನಗೆ ಹಾಗೂ ನನ್ನ ಮಕ್ಕಳಿಗೆ ನ್ಯಾಯ ದೊರಕಿಸಿ ಎಂದು ಇದೀಗ ಪತಿ ಪೊಲೀಸರ ಮೊರೆ ಹೋಗಿದ್ದಾನೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular