Bigg Boss – ಕನ್ನಡ ತಿರುತೆರೆಯಲ್ಲಿ ಭಾರಿ ಸದ್ದು ಮಾಡುವ ರಿಯಾಲಿಟಿ ಶೋ ಬಿಗ್ ಬಾಸ್ ಎಂದೇ ಹೇಳಬಹುದು. ಈ ಬಿಗ್ ಬಾಸ್ ಸೀಸನ್ ಗಳನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಾರೆ. ಬಿಗ್ ಬಾಸ್ 11ರ ಸೀಸನ್ ಬಳಿಕ ಕಿಚ್ಚ ಸುದೀಪ್ ಈ ಶೋ ನಿಂದ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.. ಇದೀಗ ಕಿಚ್ಚ ಸುದೀಪ್ ಮಾಡಿದ ಪೋಸ್ಟ್ ಕಾರಣದಿಂದ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಟ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಕನ್ನಡದ ಹೋಸ್ಟ್ ಆಗಿ 11 ಸೀಸನ್ ಗಳನ್ನು ನಡೆಸಿಕೊಡುತ್ತಿದ್ದಾರೆ. ಬಿಗ್ ಬಾಸ್ 11 ಸೀಸನ್ ಆರಂಭದಿಂದಲೂ ಸುದೀಪ್ ರವರ ಕೊನೆಯ ಶೋ ಇದಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುದೀಪ್, ಕಲರ್ಸ್ ಕನ್ನಡದವರು ನನ್ನ ರೆಸಿಗ್ನೇಶನ್ ಲೆಟರ್ ಸ್ವೀಕರಿಸಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಸುದೀಪ್ ಪೋಸ್ಟ್ ಹಂಚಿಕೊಂಡಿದ್ದು, ಈ ಪೋಸ್ಟ್ ನಲ್ಲಿ ಬಿಗ್ ಬಾಸ್ ತೊರೆಯುವ ಬಗ್ಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿಚ್ಚ ಸುದೀಪ್ ರವರ ಟ್ವೀಟ್ ಇಲ್ಲಿದೆ ನೋಡಿ : Click Here
ಇತ್ತೀಚಿಗೆ ಕಿಚ್ಚ ಸುದೀಪ್ ಸಂದರ್ಶನದಲ್ಲಿ ಮಾತನಾಡುವಾಗ ಇನ್ನೂ ಮುಂದೆ ಬಿಗ್ ಬಾಸ್ ಯಾರು ನಡೆಸಿಕೊಡುತ್ತಾರೋ ಅಥವಾ ಯಾರು ನಡೆಸಿಕೊಡಬೇಕು ಎಂಬುದನ್ನು ನಾನು ಹೇಳುವುದಿಲ್ಲ. ಕಲರ್ಸ್ ಸಂಸ್ಥೆಯವರು ನಾನು ಈ ಶೋ ಬಿಡುವುದನ್ನು ಒಪ್ಪುತ್ತಿಲ್ಲ ಎಂಬೆಲ್ಲಾ ಮಾತುಗಳನ್ನು ಆಡಿದ್ದರು. ಇದೀಗ ಸುದೀಪ್ ಮತ್ತೆ ಬಿಗ್ ಬಾಸ್ ತೊರೆಯುವಂತಹ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಕಳೆದ 11 ಸೀಸನ್ ಗಳಿಂದ ಬಿಗ್ ಬಾಸ್ ಅನ್ನು ನಾನು ಆನಂದಿಸಿದ್ದೇನೆ. ನೀವು ತೋರಿದ ಎಲ್ಲಾ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಮುಂಬರುವ ಫಿನಾಲೆ, ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್, ನಿಮ್ಮನ್ನೆಲ್ಲಾ ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಬಿಗ್ ಬಾಸ್ ಸೀಸನ್ 11 ಒಂದು ವಾರದಲ್ಲಿ ಮುಗಿಯಲಿದೆ. ಈ ಸೀಸನ್ ಬಿಗ್ ಬಾಸ್ ರವರ ಕೊನೆಯ ಸೀಸನ್ ಇರಬಹುದು ಎಂಬುದು ಖಚಿತವಾಗುತ್ತಿದೆ. ಈ ಶೋ ನಡೆಯುವ ಮೊದಲು ಬಿಗ್ ಬಾಸ್ ಸೀಸನ್ 11 ನಡೆಸಿಕೊಡುವುದಿಲ್ಲ ಎಂದು ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿ ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶೋ ಹೋಸ್ಟ್ ಮಾಡಲು ನಿರ್ಧಾರ ಮಾಡಿದ್ದರು. ಸದ್ಯ ಬಿಗ್ ಬಾಸ್ 12 ಯಾರು ಹೋಸ್ಟ್ ಮಾಡಲಿದ್ದಾರೆ ಎಂಬ ಚರ್ಚೆ ಸಹ ಶುರು ವಾಗಿದೆ.