Viral Video – ಎಷ್ಟೇ ದುಡ್ಡ ಕೊಟ್ಟರೂ ಭೂಮಿಯ ಮೇಲೆ ಸಿಗದೇ ಇರುವಂತಹದ್ದು ತಾಯಿಯ ಪ್ರೀತಿ ಎಂದೇ ಹೇಳಲಾಗುತ್ತದೆ. ಅದು ಕೇವಲ ಮನುಷ್ಯರಲ್ಲಿ ಮಾತ್ರ ಪ್ರಾಣಿಗಳಲ್ಲೂ ಇದೆ ಎನ್ನಬಹುದಾಗಿದೆ. ತಾಯಿಯ ಪ್ರೀತಿಯನ್ನು ನಿಸ್ವಾರ್ಥ ಪ್ರೀತಿ ಎಂದೇ ಕರೆಯಲಾಗುತ್ತದೆ. ತಾಯಿಯ ಪ್ರೀತಿ, ಕಾಳಜಿ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಸುದ್ದಿ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ಇಲ್ಲೋಂದು ಶ್ವಾನ ಪ್ರಜ್ಞೆ ತಪ್ಪಿದ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳು ತಮ್ಮ ಮಕ್ಕಳನ್ನು ಮುದ್ದಾಡುವಂತಹ, ರಕ್ಷಣೆ ಮಾಡುವಂತಹ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ನೋಡಿರುತ್ತೇವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಜ್ಞೆ ತಪ್ಪಿದ ತನ್ನ ಮರಿಯನ್ನು ಶ್ವಾನವೊಂದು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಬಂದಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. @DWNews ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜ.13 ರಂದು ಟರ್ಕಿಯ ಅಂಕಾರಾ ನಗರದಲ್ಲಿ ನಡೆದಿರುವ ಘಟನೆ ಇದಾಗಿದೆ ಎಂಬ ಟೈಟಲ್ ನಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ನಾಯಿ ತನ್ನ ಮರಿಯನ್ನು ಹೊತ್ತುಕೊಂಡು ಪಶು ಆಸ್ಪತ್ರೆಯ ಬಳಿ ಬಂದು ನಿಂತಿದೆ. ಇದನ್ನು ನೋಡಿದ ಆರೋಗ್ಯ ಕೇಂದ್ರದ ಸಿಬ್ಬಂದಿ ಕೂಡಲೇ ಬಾಗಿಲನ್ನು ತೆರೆದಿದ್ದಾರೆ. ಆ ಬಳಿಕ ನಾಯಿ ಮರಿಯನ್ನು ವೈದ್ಯರು ಪರೀಕ್ಷೆ ಮಾಡಿದ್ದಾರೆ. ದೇಹ ತಣ್ಣಗಾಗಿದ್ದ ನಾಯಿ ಮರಿ ಸತ್ತಿರಬಹುದೆಂದು ಮೊದಲು ಊಹಿಸಿದ ವೈದ್ಯರು ನಾಯಿ ಮರಿಯ ಹೃದಯ ಪರೀಕ್ಷೆ ನಡೆಸಿದಾಗ ಹೃದಯ ಬಡಿದುಕೊಳ್ಳುತ್ತಿರುತ್ತದೆ. ಬಳಿಕ ನಾಯಿ ಮರಿಗೆ ಕೂಡಲೆ ಚಿಕಿತ್ಸೆ ನೀಡಿ ಪುಟ್ಟ ನಾಯಿ ಮರಿಯ ಜೀವ ಉಳಿಸಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click here
ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅನೇಕರು ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ತಾಯಿಯಗೆ ಸಾಯೋವರೆಗೂ ಋಣಿಯಾಗಿರಬೇಕು, ಶ್ವಾನಕ್ಕೆ ಸಹಾಯ ಮಾಡಿ ಅದರ ಮರಿಗೆ ಜೀವದಾನ ಮಾಡಿದಂತಹ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳು ಎಂಬ ಕಾಮೆಂಟ್ ಗಳು ಹರಿದುಬರುತ್ತಿವೆ.