Heart Attack-ಇತ್ತೀಚಿಗೆ ಹೃದಾಯಾಘಾತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಹೃದಯಾಘಾತ ಯಾರಿಗೆ ಯಾವಾಗ ಸಂಭವಿಸುತ್ತದೆ ಎಂದು ಹೇಳೋಕೆ ಆಗೋದೆ ಇಲ್ಲ ಎಂದು ಹೇಳಬಹುದಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಹೃದಯಾಘಾತ ಸಂಭವಿಸುತ್ತಿದೆ. ಅದರಲ್ಲೂ ಇತ್ತೀಚಿಗೆ ಪುಟ್ಟ ಕಂದಮ್ಮಗಳು, ಯುವಕರನ್ನೇ ಈ ಹೃದಯಾಘಾತ ಅಟ್ಯಾಕ್ ಮಾಡುತ್ತಿದೆ. ಇದೀಗ ಅಹಮದಾಬಾದ್ ನಲ್ಲಿ 3ನೇ ತರಗತಿ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದರೇ ಎಂತಹವರನ್ನಾದರೂ ಭಾವುಕರನ್ನಾಗಿ ಮಾಡಿಬಿಡುತ್ತದೆ.

ಕಳೆದೆರಡು ದಿನಗಳ ಹಿಂದೆಯ್ಟೆ ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿ ತೇಜಸ್ವಿನಿ ಶಾಲೆಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಳು. ಇದೀಗ ಅಂತಹುದೇ ಘೋರ ದುರಂತವೊಂದು ನಡೆದಿದೆ. ಅಹಮದಾಬಾದ್ ನ ಝೆಬಾರ್ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿನಿಯು ಶಾಲೆಯ ಲಾಬಿಯಲ್ಲಿ ಅಸ್ವಸ್ಥತೆಗೊಂಡು ಬೆಂಚ್ ಮೇಲೆ ಕುಳಿತುಕೊಂಡಿದ್ದಾಕೆ ಏಕಾಏಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ವಿದ್ಯಾರ್ಥಿನಿ ಕುಸಿದು ಬಿಳುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಮಯದಲ್ಲಿ ಹತ್ತಿರದಲ್ಲಿದ್ದ ಶಿಕ್ಷಕರು ಬಾಲಕಿಯ ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ಬಾಲಕಿಗೆ ಸಿಪಿಆರ್ ನೀಡಲು ಪ್ರಯತ್ನ ಮಾಡಿದ್ದಾರೆ. ನಂತರ ಹತ್ತಿರದ ಆಸ್ಪತ್ರೆಗೂ ದಾಖಲು ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪುಟ್ಟ ಕಂದಮ್ಮ ಇಹಲೋಕ ತ್ಯೆಜಿಸಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಕುರಿತು ಶಾಲೆಯ ಪ್ರಾಂಶುಪಾಲೆ ಶರ್ಮಿಷ್ಠ ಸಿನ್ಹಾ ಮಾಹಿತಿ ಹಂಚಿಕೊಂಡಿದ್ದಾರೆ. ಮೃತ ಬಾಲಕಿಗೆ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆಯಿರಲಿಲ್ಲ. ಆದರೆ ಶುಕ್ರವಾರ ಅಸ್ವಸ್ಥಳಾಗಿದ್ದಾಳೆ. ಶಾಲೆಯ ಲಾಬಿಯ ಬೇಂಜ್ ಮೇಲೆ ಕುಳಿತುಕೊಂಡಿದ್ದಳು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ನಂತರ ಬಾಲಕಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಾಳೆ. ಇನ್ನೂ ಪ್ರಾಥಮಿಕ ಸಂಶೋಧನೆಯಂತೆ ಬಾಲಕಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.