Micro Finance – ಜನರು ತಮ್ಮ ಹಣಕಾಸಿನ ಸಮಸ್ಯೆಗಳಿಗಾಗಿ ವಿವಿಧ ಕಡೆ ಸಾಲ ಮಾಡುತ್ತಿರುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಮೂಲಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ. ಈ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯಿಂದ ನಡೆಯಬಾರದ ಘಟನೆಗಳೂ ಸಹ ನಡೆದಿವೆ. ಇದೀಗ ಮೈಕ್ರೋ ಫೈನಾನ್ಸ್ ನವರ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಕೆಲವೊಂದು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮವನ್ನೇ ತೊರೆದಿದೆ. ಇತ್ತೀಚಿಗಷ್ಟೆ ಒಬ್ಬ ಬಾಲಕ ಕೈ ಮುಗಿದು ಕೇಳುತ್ತೀನಿ ನನ್ನ ಒಂದು ಕಿಡ್ನಿ ಮಾರೋದಕ್ಕೆ ಅನುಮತಿ ಕೊಡಿ, ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸಿ ಹೇಗೋ ಬದುಕುತ್ತಿವಿ ಅಂತಾ ಹೇಳಿದ್ದ. ಇದನ್ನು ಕೇಳಿದರೇ ನಿಮಗೆ ಗೊತ್ತಾಗುತ್ತೆ ಎಷ್ಟರ ಮಟ್ಟಿಗೆ ಟಾರ್ಚರ್ ಇದೆ ಅಂತಾ.
ಕೆಲವೊಂದು ಮೈಕ್ರೋಫೈನಾನ್ಸ್ ಕಂಪನಿಗಳು ಯಾವುದೇ ಭದ್ರತೆಯಿಲ್ಲದೇ ಕೇವಲ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು ಸುಲಭವಾಗಿ ಸಾಲ ನೀಡುತ್ತಾರೆ. ಕೂಲಿಕಾರ್ಮಿಕರು, ಮಹಿಳೆಯರು ಸುಲಭವಾಗಿ ಸಾಲ ಸಿಗುತ್ತದೆ ಎಂದು ಮೈಕ್ರೋಫೈನಾನ್ಸ್ ಗಳ ಮೊರೆ ಹೋಗುತ್ತಾರೆ. ತಮ್ಮ ಸಮಸ್ಯೆಗಳನ್ನು ತೀರಿಸಿಕೊಳ್ಳಲು ಸಾಲ ಪಡೆಯುತ್ತಾರೆ. ವಾರದ ಕಂತುಗಳು, ತಿಂಗಳ ಕಂತುಗಳು ಹೀಗೆ ಬಡ್ಡಿ ಸಮೇತ ಸಾಲ ತೀರಿಸುತ್ತಿರುತ್ತಾರೆ. ಸಾಲ ಪಾವತಿ ಮಾಡೋದು ಒಂದು ದಿನ ತಡವಾದರೂ ಈ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾಟ ಶುರುವಾಗುತ್ತದೆ. ಬಡ್ಡಿಗೆ ಬಡ್ಡಿ ಸೇರಿಸಿ ಸಾಲ ಹೆಚ್ಚಾಗಿ ಸಾಲಗಾರರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಈ ರೀತಿಯ ಸಮಸ್ಯೆ ಚಾಮರಾಜನಗರದ ಕೆಲವೊಂದು ಕಡೆ ನಡೆದಿದೆ ಎನ್ನಲಾಗಿದೆ.
ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ತಲೆಮರೆಸಿಕೊಂಡಿವೆ ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ಕರೆದೊಯ್ದಿವೆ ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಅಷ್ಟೇಅಲ್ಲದೇ ಮೈಕ್ರೋಫೈನಾನ್ಸ್ ಕಂಪನಿಗಳು ಸಾಲಗಾರರು ಸಾಲದ ಕಂತು ಕಟ್ಟದೇ ಇದ್ದರೇ ಅಸಭ್ಯವಾಗಿ ಬೈಯುತ್ತಾರೆ. ಹೊತ್ತಲ್ಲದ ಹೊತ್ತಿನಲ್ಲಿ ಬಂದು ಅಶ್ಲೀಲವಾಗಿ ನಿಂದನೆ ಮಾಡುತ್ತಾರಂತೆ. ಈ ಕಾರಣದಿಂದ ಬಾಲಕೋರ್ವ ನಿಮ್ಮನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ನನ್ನ ಕಿಡ್ನಿ ಮಾರೋಕೆ ಅನುಮತಿ ಕೊಡಿಸಿ ಸರ, ಸರ್ಕಾರ ಅನುಮತಿ ಕೊಟ್ರೆ ನನ್ನ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸುತ್ತೇನೆ, ನಮಗೆ ಮೈಕ್ರೋಫೈನಾನ್ಸ್ ಕಾಟ ತಡೆಯೋಕೆ ಆಗ್ತಾಯಿಲ್ಲ ಎಂದು ಕಣ್ಣೀರು ಹಾಕಿದ್ದಾನೆ.
ಇನ್ನೂ ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯೆ ನೀಡಿದ್ದು, ಯಾರೂ ಊರು ಖಾಲಿ ಮಾಡಬೇಡಿ. ನಿಮ್ಮೊಂದಿಗೆ ನಾವು ಇದ್ದೀವಿ. ನಿಮಗೆ ಯಾರಾದರೂ ಕಿರುಕುಳ ಕೊಟ್ಟರೇ ಡಿ.ಸಿ. ಕಚೇರಿ, ಎ.ಸಿ.ಕಚೇರಿ, ತಹಸೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯತಿ ಕಚೇರಿಗೆ ಮಾಹಿತಿ ನೀಡಿ, ವಿಚಾರ ನಮ್ಮ ಗಮನಕ್ಕೆ ತನ್ನಿ. ನಾವು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಈ ಸಂಬಂಧ ನಾಲ್ಕು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಯಾವ ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಅವುಗಳಲ್ಲಿ ಅಧಿಕೃತ ಎಷ್ಟು, ಅನಧಿಕೃತ ಎಷ್ಟು, ಗ್ರಾಮ ತೊರೆದ ಕುಟುಂಬಗಳು ಎಷ್ಟು ಎಂಬ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ರಾಜ್ಯದ ಹಲವು ಕಡೆ ಕೆಲವೊಂದು ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಸಾಲದ ಆಸೆ ತೋರಿಸಿ ಅಧಿಕ ಬಡ್ಡಿ ಹಾಕಿ ಕಿರುಕುಳ ನೀಡುತ್ತಿವೆ. ಈ ಸಂಬಂಧ ರಾಜ್ಯ ಸರ್ಕಾರ ಕಡಿವಾಣ ಹಾಕುವಂತಹ ನೀತಿ ರೂಪಿಸಬೇಕು ಎಂದು ಅನೇಕರ ಒತ್ತಾಯವಾಗಿದೆ.