Siddaramaiah – ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರಿಡುವ ಕುರಿತು ಭಾರಿ ಚರ್ಚೆ ನಡೆದಿತ್ತು. ಕಾಂಗ್ರೇಸ್ ಶಾಸಕರು ಸೇರಿದಂತೆ ಮೈಸೂರು ನಗರಸಭೆಯ ಸದಸ್ಯರುಗಳು ಪ್ರಿನ್ಸೆಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಬೇಕೆಂದು ಮಹಾನಗರ ಪಾಲಿಕೆಗೆ ಮನವಿ ನೀಡಿದ್ದರು. ನಂತರ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆ ಸಹ ನಡೆಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯನವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಪ್ರಿನ್ಸೆಸ್ ರಸ್ತೆಗೆ ನನ್ನ ಹೆಸರಿಡಿ ಅಂತಾ ಎಲ್ಲೂ ಹೇಳಿಲ್ಲ. ಈ ಹಿಂದೆ ನನಗೆ ಡಾಕ್ಟರೇಟ್ ಕೊಡುವುದಾಗಿ ಹೇಳಿದ್ದರು, ಅದನ್ನೇ ನಾನು ಬೇಡ ಅಂದಿದ್ದೆ. ನನಗೆ ಡಾಕ್ಟರೇಟ್ ತೆಗೆದುಕೊಳ್ಳುವಂತಹ ಯೋಗ್ಯತೆಯಿಲ್ಲ ಎಂದು ಹೇಳಿದ್ದೆ. ರಸ್ತೆಗೆ ಹೆಸರಿಡುವ ಬಗ್ಗೆ ನನ್ನನ್ನು ಯಾರೂ ಸಹ ಕೇಳಿಲ್ಲ. ಯಾರೂ ನನಗೆ ಏನೂ ಹೇಳಿಲ್ಲ. ಈ ರಸ್ತೆಗೆ ಈಗಾಗಲೇ ಹೆಸರಿದ್ದರೇ ಹೆಸರು ಬದಲಾವಣೆ ಮಾಡೋದು ಬೇಡ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯನವರ ಹೇಳಿಕೆಯ ವಿಡಿಯೋ ಇಲ್ಲಿದೆ ನೋಡಿ: Click Here
ಇದೇ ಸಮಯದಲ್ಲಿ ದೆಹಲಿಯಲ್ಲಿ ರೈತರ ಸಾವು ಪ್ರಕರಣದ ಕುರಿತು ಮಾತನಾಡಿದ ಸಿಎಂ ಸಿದ್ದು, ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಆದರೆ ಕೇಂದ್ರ ಸರ್ಕಾರ ರೈತರ ಒತ್ತಡಕ್ಕೆ ಮಣಿಯುತ್ತಿಲ್ಲ. ಬಿಜೆಪಿಯವರಿಗೆ ಅಂಬೇಡ್ಕರ್ ರವರ ಬಗ್ಗೆ ಮಾತನಾಡುವಂತಹ ನೈತಿಕತೆಯೇ ಇಲ್ಲ. ಬಿಜೆಪಿಯವರದ್ದು ತೋರಿಕೆಯ ನಡೆಯಾಗಿದೆ, ಅವರಿಗೆ ಅಂಬೇಡ್ಕರ್ ರವರ ಬಗ್ಗೆ ಗೌರವವಿಲ್ಲ. ಅಮಿತ್ ಶಾಗೆ ಅಂಬೇಡ್ಕರ್ ಬಗ್ಗೆ ಯಾವುದೇ ಗೌರವವಿಲ್ಲ. ಸಂವಿಧಾನದಂತೆ ನಡೆಯುತ್ತಿರುವುದು ಕಾಂಗ್ರೇಸ್ ಪಕ್ಷ. ಸಂವಿಧಾನದ ಆಶಯಕ್ಕೆ ಬಿಜೆಪಿ ಎಂದೂ ನಡೆದುಕೊಂಡಿಲ್ಲ. ಅವರದ್ದು ಸಂವಿಧಾನ ವಿರೋಧಿ ನಿಲುವು ಎಂದು ಕಿಡಿಕಾರಿದರು.
ನಂತರ ನಕ್ಸಲರ ಶರಣಾಗತಿಯ ಬಗ್ಗೆ ಮಾತನಾಡಿದ್ದಾರೆ. ನಕ್ಸಲರು ಶರಣಾಗಿದ್ದಾರೆ ವೆಪನ್ಸ್ ಮಹಜರು ಆಗಿದೆ. ಬಿಜೆಪಿಯವರಿಗೆ ಎಲ್ಲವನ್ನೂ ವಿರೋಧ ಮಾಡೋದೇ ಚಾಳಿಯಾಗಿದೆ. ಇದೀಗ ಇನ್ನೊಬ್ಬ ನಕ್ಸಲ್ ಇದ್ದಾರೋ ಇಲ್ಲವೋ ಗೊತ್ತಿಲ್ಲಾ. ಶೃಂಗೇರಿಯಲ್ಲಿ ನಕ್ಸಲರಿದ್ದಾರೆ ಎಂದು ನೀವು ಹೇಳುತ್ತಿದ್ದೀರಾ, ಇದ್ರೆ ಅವರಿಗೂ ಸಹ ಶರಣಾಗಿ ಎಂದು ಮಾಧ್ಯಮದ ಮೂಲಕ ಹೇಳುತ್ತೇನೆ ಎಂದು ಸಿಎಂ ಹೇಳಿದ್ದಾರೆ.