ಮಾನವೀಯತೆ, ಪ್ರಾಮಾಣಿಕತೆ ಇಂದಿನ ದಿನಗಳಲ್ಲಿ ಕಾಣಸಿಗುವುದು ತುಂಬಾನೆ ಕಷ್ಟ ಎಂದು ಹೇಳಬಹುದು. ಅಂತಹುದರಲ್ಲಿ ಆಗಾಗ ಕೆಲವೊಂದು ಘಟನೆಗಳು ಇನ್ನೂ ಮಾನವೀಯತೆ, ಪ್ರಾಮಾಣಿಕತೆ ಇದೆ ಎಂಬುದನ್ನು ನೆನಪಿಸುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ಚೆನೈನಲ್ಲಿ ನಡೆದಿದೆ. ಕಸದ ಬುಟ್ಟಿಯಲ್ಲಿ ಸಿಕ್ಕಂತಹ ದುಬಾರಿ ಡೈಮಂಡ್ ನೆಕ್ಸ್ಲೇಸ್ ಅನ್ನು ಮಾಲೀಕರಿಗೆ ಹಿಂದುರಿಗಿಸಿ ಮಾನವೀಯತೆ ಮೆರೆದಿದ್ದಾ ಸ್ವಚ್ಚತಾ ಸಿಬ್ಬಂದಿ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ಅವರ ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚೆನೈನಲ್ಲಿ ಸ್ವಚ್ಚತಾ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ಕಸದೊಂದಿಗೆ ಬಂದಿದ್ದಂತಹ ಐದು ಲಕ್ಷ ಬೆಲೆ ಬಾಳುವ ವಜ್ರದ ನೆಕ್ಲೇಸ್ ಅನ್ನು ಮಾಲೀಕರಿಗೆ ಹಿಂದುರಿಗಿಸಿದ್ದಾರೆ. ಚೆನೈನ ವಿರುಗಂಪಕ್ಕಂ ನಿವಾಸಿ ದೇವರಾಜ್ ರವರ ಮನೆಯವರು ಅರಿವಿಲ್ಲದೇ ವಜ್ರದ ನೆಕ್ಲೇಸ್ ಕಸದ ತೊಟ್ಟಿಗೆ ಹಾಕಿದ್ದಾರೆ. ಈ ವಿಚಾರ ತಿಳಿದ ಕೂಡಲೇ ದೇವರಾಜ್ ಚೆನ್ನೈ ಕಾರ್ಪೋರೇಷನ್ ಅಧಿಕಾರಿಗಳನ್ನು ಸಂಪರ್ಕಿಸಿ ಸ್ವಚ್ಚತಾ ಸಿಬ್ಬಂದಿಗ ಜೊತೆಗೆ ಹತ್ತಿರದ ಕಸದ ತೊಟ್ಟಿಗಳಲ್ಲಿ ನೆಕ್ಲೇಸ್ ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಯಲ್ಲಿ ಸ್ವಚ್ಚತಾ ಸಿಬ್ಬಂದಿಯೊಬ್ಬರಿಗೆ ನೆಕ್ಲೇಸ್ ಸಿಕ್ಕಿದೆ. ಅದನ್ನು ದೇವರಾಜ್ ರವರಿಗೆ ಹಿಂದಿರುಗಿಸಿದ್ದಾರೆ. ತಮ್ಮ ನೆಕ್ಲೇಸ್ ಹುಡುಕಿಕೊಟ್ಟ ಆಂಥೋನಿಸಾಮಿ ಹಾಗೂ ಸ್ವಚ್ಚತಾ ಸಿಬ್ಬಂದಿಗೆ ದೇವರಾಜ್ ರವರು ಕೃತಜ್ಞತೆ ಸಲ್ಲಿಸಿದ್ದಾರೆ.
https://x.com/chennaicorp/status/1814928816554303969
ಇನ್ನೂ ಈ ಸಂಬಂಧ ವಿಡಿಯೋ ಪೋಸ್ಟ್ ಒಂದನ್ನು chennaicorp ಎಂಬ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಡೈಮಂಡ್ ನೆಕ್ಲೇಸ್ ಅನ್ನು ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ದೃಶ್ಯವನ್ನು ನೋಡಬಹುದಾಗಿದೆ. ಈ ವಿಡಿಯೋ ಜು.21 ರಂದು ಹಂಚಿಕೊಂಡಿದ್ದು, ವಿಡಿಯೋ ಸಾವಿರಗಟ್ಟಲೇ ವೀಕ್ಷಣೆ ಕಂಡಿದೆ, ಜೊತೆಗೆ ಹಲವು ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.