HomeSpecialಯಾರಮ್ಮ ತಾಯಿ ನೀನು, ಅಷ್ಟೊಂದು ವೈಲೆಂಟ್ ಆಗಿದ್ದೀಯಾ, ಹಾವನ್ನು ಹಿಡಿದು ರೀಲ್ ಮಾಡಿದ ಮಹಿಳೆ, ವೈರಲ್...

ಯಾರಮ್ಮ ತಾಯಿ ನೀನು, ಅಷ್ಟೊಂದು ವೈಲೆಂಟ್ ಆಗಿದ್ದೀಯಾ, ಹಾವನ್ನು ಹಿಡಿದು ರೀಲ್ ಮಾಡಿದ ಮಹಿಳೆ, ವೈರಲ್ ಆದ ವಿಡಿಯೋ….!

ದಿನೇ ದಿನೇ ಜನರಿಗೆ ಸೋಷಿಯಲ್ ಮಿಡಿಯಾದ ಹುಚ್ಚು ಹೆಚ್ಚಾಗುತ್ತಿದೆ ಎಂದೇ ಹೇಳಬಹುದಾಗಿದೆ. ರೀಲ್ಸ್ ಮಾಡಿ ಫೇಮಸ್ ಆಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಪ್ರಚಲಿತದಲ್ಲಿದ್ದ ಟಿಕ್ ಟಾಕ್ ಆಪ್ ಮೂಲಕ ಅನೇಕರು ಪ್ರಾಣ ಸಹ ಕಳೆದುಕೊಂಡಿದ್ದರು. ರೀಲ್ಸ್ ಮಾಡಿ ರಾತ್ರೋ ರಾತ್ರಿ ಫೇಮಸ್ ಆಗಲು ವಿಚಿತ್ರ ರೀಲ್ಸ್ ಮಾಡಿದ್ದರು. ಇದೀಗ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಗಳು ಜೋರಾಗಿದ್ದು, ಅನೇಕರು ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಮಹಿಳೆಯೊಬ್ಬಳು ಹಾವನ್ನು ಹಿಡಿದು ರೀಲ್ಸ್ ಮಾಡಿದ್ದು, ಆಕೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Women reels with snake 0

ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಅನೇಕರು ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ಅದರ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ತಮ್ಮಲ್ಲಿ ಅಡಗಿರುವಂತಹ ಆಕ್ಟಿಂಗ್, ಕಾಮಿಡಿ, ಡ್ಯಾನ್ಸ್ ಪ್ರತಿಭೆಯನ್ನು ಹೊರಹಾಕುತ್ತಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರಂತೂ ವಿಚಿತ್ರ ಕೆಲಸಗಳನ್ನು ಮಾಡುವ ಮೂಲಕ ಎಲ್ಲರನ್ನೂ ಕೆರಳಿಸುತ್ತಿದ್ದಾರೆ. ಲೈಕ್ ಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಮಾಡುವ ವಿಚಿತ್ರ ಕೆಲಸಗಳಿಂದ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಓರ್ವ ಮಹಿಳೆ ಮಾಡಿದ ರೀಲ್ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ರೀಲ್ ನಲ್ಲಿ ಮಹಿಳೆ ಹಾವೊಂದನ್ನು ಕೈಯಲ್ಲಿಟ್ಟುಕೊಂಡು ಹಾಡೊಂದಕ್ಕೆ ಹೆಜ್ಜೆಹಾಕಿದ್ದಾರೆ. ಪ್ರೇಮಂಟೆ ಪಾಮನಿ ಬೆದರಾಲಾ, ಧೀಮಾಗಾ ತಿರಗರ ಮಗರಾಯುಡಾ ಎಂಬ ತೆಲುಗು ಹಾಡಿಗೆ ರೀಲ್‌ ಮಾಡಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://www.instagram.com/p/C6L-SXHpMDo/

ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅನೇಕರು ಕ್ರೇಜಿ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ. ಆ ಹಾವು ಹೇಗೆ ಫೀಲ್ ಆಗುತ್ತದೆ ಎಂದು ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ರೀಲ್ಸ್ ಹುಚ್ಚಿ ಎಂದು ತಿಳಿಯದೇ ಅನವಶ್ಯಕವಾಗಿ ಈಕೆ ಮನೆಯಲ್ಲಿ ಹೋದೆ ದೇವರೇ ಎಂದು, ಹಾಡಿನ ಮದ್ಯೆ ಹಾವು ಏಕೆ ಬಂತಕ್ಕಾ ಎಂತಲೂ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ ಮತ್ತೆ ಕೆಲವರು ಹಾಡಿನಲ್ಲಿ ಹಾವು ಇರೋದರಿಂದ ಸರಿಹೋಗಿದೇ, ಒಂದು ವೇಳೆ ಹುಲಿ ಇದಿದ್ದರೇ ಏನು ಗತಿ ಎಂದು, ಅಕ್ಕಾ ಲಿರಿಕ್ಸ್ ಅನ್ನು ತುಂಬಾ ಸಿರೀಯಸ್ ಆಗಿ ತೆಗೆದುಕೊಂಡಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಆಕೆಯ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಹಾಗೂ ಟ್ರೋಲ್ ಆಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular