ಸಮಾಜದಲ್ಲಿ ವಿವಿಧ ಕಾರಣಗಳಿಂದ ಗಂಡ-ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಅನೇಕ ಜಗಳಗಳು ಕೊಲೆ, ಆತ್ಮಹತ್ಯೆ, ಹಲ್ಲೆಗಳಿಂದ ಮುಕ್ತಾಯವಾಗುತ್ತದೆ. ಆದರೆ ಇಲ್ಲೊಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗಂಡ ಹೆಂಡತಿ ನಡುವೆ ನಡೆದ ಜಗಳದಿಂದ ಮೂರು ವರ್ಷದ ಮಗು ಕೊಲೆಯಾಗಿದೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತಿಯೊಂದಿಗೆ ಜಗಳವಾಡಿ ಆ ಕೋಪವನ್ನು ಮಗುವಿನ ಮೇಲೆ ತೋರಿಸಿ ಮಗುವನ್ನೆ ಕೊಲೆ ಮಾಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಗಂಡ-ಹೆಂಡತಿ ಜಗಳದ ಕಾರಣದಿಂದ ಮೂರು ವರ್ಷದ ಮಗು ಕೊಲೆಯಾಗಿದೆ. ಪತಿಯೊಂದಿಗೆ ಜಗಳ ಮಾಡಿಕೊಂಡು ಆ ಕೋಪವನ್ನು ಮಗುವಿನ ಮೇಲೆ ತೋರಿಸಿ ಮಗುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಮಗುವಿನ ಶವವನ್ನು ಎತ್ತಿಕೊಂಡು ನಾಲ್ಕು ಕಿ.ಮೀಗಳವರೆಗೆ ಬೀದಿಯಲ್ಲಿ ಓಡಾಡಿದ್ದಾಳೆ. ಈ ಘಟನೆ ಸೋಮವಾರ ಸಂಜೆ ಎಂಐಡಿಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಟ್ವಿಂಕಲ್ ರಾವುತ್ (23) ಎಂದು ಗುರ್ತಿಸಲಾಗಿದೆ. ಆಕೆ ತನ್ನ ಪತಿ ರಾಮ ಲಕ್ಷಣ್ ರಾವುತ್ (24) ಜೊತೆ ಉದ್ಯೋಗ ಹರಿಸಿ ನಾಗ್ಪುರಕ್ಕೆ ಬಂದಿದ್ದರೆಂದು ಹೇಳಲಾಗಿದೆ.
ಇನ್ನೂ ಈ ದಂಪತಿ ಪೇಪರ್ ಉತ್ಪನ್ನಗಳ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ಕಳೆದ ಸೋಮವಾರ ಸಂಜೆ 4 ಗಂಟೆಯ ಸಮಯದಲ್ಲಿ ಇಬ್ಬರು ಜಗಳವಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವಣ ಜಗಳ ತಾರಕಕ್ಕೇರಿದೆ. ಈ ವೇಳೆ ತಮ್ಮ ಮೂರು ವರ್ಷದ ಮಗು ಅಳಲು ಆರಂಭಿಸಿದೆ. ಇದರಿಂದ ಮತಷ್ಟು ಕೋಪಗೊಂಡ ಮಹಿಳೆ ತನ್ನ ಮಗುವನ್ನು ಹೊರಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಮಗುವಿನ ಮೃತದೇಹದೊಂದಿಗೆ ಸುಮಾರು ನಾಲ್ಕು ಕಿ.ಮೀ ಸುತ್ತಾಡಿದ್ದಾಳೆ. ರಾತ್ರಿ 8 ಗಂಟೆ ಸಮಯದಲ್ಲಿ ಪೊಲೀಸ್ ವಾಹನ ಗಸ್ತು ತಿರುಗುತ್ತಿದ್ದು, ಈ ವೇಳೆ ಆಕೆ ಪೊಲೀಸ್ ಅಧಿಕಾರಿಗಳ ಬಳಿ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನೂ ಮಹಿಳೆಯ ವಿರುದ್ದ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಲಯದ ಮುಂದೆ ಹಾಜರುಪಡಿಸಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.