Saturday, July 12, 2025
HomeEntertainmentರಕ್ಷಿತ್ ಶೆಟ್ಟಿ ಆ ಸ್ಟಾರ್ ನಟಿಯನ್ನು ಮದುವೆಯಾಗಲಿದ್ದಾರಂತೆ, ಹೊಸದೊಂದು ಗಾಸಿಪ್, ಆ ನಟಿ ಯಾರು ಗೊತ್ತಾ?

ರಕ್ಷಿತ್ ಶೆಟ್ಟಿ ಆ ಸ್ಟಾರ್ ನಟಿಯನ್ನು ಮದುವೆಯಾಗಲಿದ್ದಾರಂತೆ, ಹೊಸದೊಂದು ಗಾಸಿಪ್, ಆ ನಟಿ ಯಾರು ಗೊತ್ತಾ?

ಕನ್ನಡ ಸಿನಿರಂಗದ ಸ್ಟಾರ್‍ ನಟ ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ.  ಅದರಲ್ಲೂ ಅವರ 777 ಚಾರ್ಲಿ ಸಿನೆಮಾ ಸೈಮಾ ಅವಾರ್ಡ್ ಹಾಗೂ 69ನೇ ರಾಷ್ಟ್ರೀಯ ಸಿನೆಮಾ ಅವಾರ್ಡ್ ಸಹ ಪಡೆದುಕೊಂಡಿದೆ. ಕೊನೆಯದಾಗಿ ಅವರು ಸಪ್ತಸಾಗರದಾಚೆ ಎಲ್ಲೋ ಸೈಡ್ A, ಸೈಡ್ B ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಇದೀಗ ರಕ್ಷಿತ್ ಶೆಟ್ಟಿ ಸೌತ್ ಸಿನಿರಂಗದ ಸ್ಟಾರ್‍ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ. ಅಷ್ಟಕ್ಕೂ ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

Rakshith Shetty marriage rumor 1

ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ರವರ ಎಂಗೇಜ್ ಮೆಂಟ್ ಸಹ ನಡೆದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅವರಿಬ್ಬರು ಬೇರೆಯಾದರು. ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಕೊಂಡರು. ಸದ್ಯ ಇಬ್ಬರೂ ತಮ್ಮ ತಮ್ಮ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ವೈಯುಕ್ತಿಕ ವಿಚಾರಗಳು ಕಡಿಮೆ ಸಮಯದಲ್ಲೇ ತುಂಬಾ ಸದ್ದು ಮಾಡುತ್ತವೆ. ಅದರಲ್ಲೂ ನಟ-ನಟಿಯರ ಮದುವೆ ವಿಚಾರವಂತೂ ಬಿರುಗಾಳಿಯಂತೆ ಹಬ್ಬುತ್ತದೆ. ಅದೇ ಮಾದರಿಯಲ್ಲಿ ಇದೀಗ ನಟ ರಕ್ಷಿತ್ ಶೆಟ್ಟಿ ಸೌತ್ ಸಿನಿರಂಗದ ಸ್ಟಾರ್‍ ನಟಿಯೊಂದಿಗೆ ಹಸಮನೆ ಏರಲಿದ್ದಾರೆಂಬ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಅಂದಹಾಗೆ ಆ ನಟಿ ಯಾರು ಗೊತ್ತಾ, ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ. ಹೌದು ಸೌತ್ ಸಿನಿರಂಗದ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ರವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಟ್ರೆಂಡ್ ಆಗುತ್ತಿದೆ.

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನೆಮಾಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸದ್ಯ ನಟಿ ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಸಹ ಕೆಲವೊಂದು ರೂಮರ್‍ ಗಳು ಕೇಳಿಬಂದವು. ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ರವರು ಪ್ರೀತಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳು ಸಹ ಜೋರಾಗಿ ಕೇಳಿಬಂತು. ಆದರೆ ಇದೀಗ ನಟ ರಕ್ಷಿತ್ ಶೆಟ್ಟಿಯವರನ್ನು ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಜೋರಾಗಿ ಕೇಳಿಬರುತ್ತದೆ. ಜೊತೆಗೆ ಸಿನಿವಲಯದಲ್ಲಿ ಟ್ರೆಂಡಿಂಗ್ ಆಗುತ್ತಿದೆ.  ಇನ್ನೂ ಈ ಮದುವೆಗೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Rakshith Shetty marriage rumor 2

ಕೆಲವು ದಿನಗಳಿಂದ ಅನುಷ್ಕಾ ಶೆಟ್ಟಿ ಕನ್ನಡದ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ. ಅವರ ವಯಸ್ಸು 42 ವರ್ಷ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕುರಿತು ಚರ್ಚೆ ಶುರು ಹಚ್ಚಿಕೊಂಡರು. ಈ ವೇಳೆ ನಟ ರಕ್ಷಿತ್ ಶೆಟ್ಟಿ ರವರ ಹೆಸರು ಮುನ್ನೆಲೆಗೆ ಬಂದಿದೆ. ವಯಸ್ಸು ಸಹ ಮ್ಯಾಚ್ ಆದ ಕಾರಣದಿಂದ ರಕ್ಷಿತ ಶೆಟ್ಟಿಯವರನ್ನೇ ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬಂತು. ರಕ್ಷಿತ್ ಶೆಟ್ಟಿ ಹೆಸರಿನ ಜೊತೆಗೆ ಕನ್ನಡದ ನಿರ್ದೇಶಕ ತರುಣ್ ಸುಧೀರ್‍ ಹೆಸರು ಸಹ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಸುದ್ದಿ ನಿಜವಾಗಲಿ ಎಂದು ಅನೇಕರು ಬಯಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular