ಬಾಣಂತಿ ಸಾವು, 35 ಲಕ್ಷ ಬಿಲ್ ಕಟ್ಟಿ ಮೃತ ದೇಹ ಪಡೆದುಕೊಳ್ಳಿ ಎಂದ ಆಸ್ಪತ್ರೆ ಆಡಳಿತ, ಕುಟುಂಬಸ್ಥರ ಪ್ರತಿಭಟನೆ….!

ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ಜನನಿ (33) ಎಂಬ ಬಾಣಂತಿ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಜೊತೆಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ದ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಅವಧಿಪೂರ್ವ ಹೆರಿಗೆಯಾದ ಜನನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವಧಿ ಪೂರ್ವ ಹೆರಿಗೆಯಾದ ಕಾರಣದಿಂದ ಬಾಣಂತಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಮೃತಪಟ್ಟಿದ್ದಾರೆ. ಬಾಣಂತಿ ನಿಧನವಾಗಲು ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಮೃತಳ ಕುಟುಂಬಸ್ಥರ ಆರೋಪವಾಗಿದೆ. ಅವಧಿ ಪೂರ್ವ ಹೆರಿಯಾದ ಬಳಿಕ ಬಾಣಂತಿ ಸ್ಥಿತಿ ಗಂಭಿರವಾಗಿದ್ದು, ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಣಂತಿ ಮಹಿಳೆ ಮೃತಪಟ್ಟಿದ್ದಾಳೆ.

women dead after given birth to twins 0

ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ IVF ಮೂಲಕ ಜನನಿ ಹಾಗೂ ಕೇಶವ್ ಎಂಬ ದಂಪತಿ ಮಕ್ಕಳನ್ನು ಪಡೆದಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ.2 ರಂದು ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇನ್ನೂ ಚಿಕಿತ್ಸೆಗಾಗಿ ದಂಪತಿ ಹೆರಿಗೆ ಪ್ಯಾಕೇಜ್ ಸಹ ಮಾಡಿಸಿದ್ದರಂತೆ. ಮೃತ ಜನನಿಗೆ ಅವಧಿ ಪೂರ್ವ ಅಂದರೇ 7.5 ತಿಂಗಳಿಗೆ ಹೆರಿಗೆ ಆಗಿತ್ತು. ಬಳಿಕ ಆಕೆಗೆ ಜಾಂಡೀಸ್ ಇದೆ, ಲಿವರ್‍ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರು. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಕುಟುಂಬಸ್ಥರು ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಬುಧವಾರ ಬೆಳಿಗ್ಗೆ ಜನನಿ ಮೃತಪಟ್ಟಿದ್ದಾಳೆ. ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಆಕೆಯ ಚಿಕಿತ್ಸೆಗೆ 30 ಲಕ್ಷ ಬಿಲ್ ಆಗಿದ್ದು, ಈ ಬಿಲ್ ಪಾವತಿ ಮಾಡಿ ಮೃತ ದೇಹ ತೆಗೆದುಕೊಂಡು ಹೋಗಿ ಎಂದು ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾರೆ ಎಂದು ಈ ಬಿಲ್ ಕ್ಲೌಡ್ ನೈನ್ ಆಸ್ಪತ್ರೆಯವರೇ ಪಾವತಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಕುರಿತು ಮೃತ ಜನನಿ ಪತಿ ಕೇಶವ್ ಮಾತನಾಡಿ, ಕಳೆದ ತಿಂಗಳು ಪರೀಕ್ಷೆಗೆ ಬಂದಾಗ ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು. ಬಳಿಕ ನನ್ನ ಹೆಂಡತಿ ಕಾಲುಗಳು ಊತ ಆಗಿತ್ತು. ಜೊತೆಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿತ್ತು. ಈ ಕಾರಣದಿಂದ ಮೇ.2 ರಂದು ಚಿಕಿತ್ಸೆಗೆ ಬಂದಿದ್ದೆವು. ಅಂದು ಅವಳಿ ಮಕ್ಕಳ ಜನನವಾಯ್ತು. ಅಂದು ಬೆಳಿಗ್ಗೆ 11 ಗಂಟೆಗೆ ಹೆಂಡತಿಯನ್ನು ಮಾತನಾಡಿಸಿದಾಗ ಆಕೆ ಚೆನ್ನಾಗಿದ್ದಳು. ಆದರೆ ಇದಕ್ಕಿದ್ದಂತೆ ಸಿರೀಯಸ್ ಆಗಿದೆ ಎಂದರು.

ನಂತರ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದರು. ಚಿಕಿತ್ಸೆ ಫಲಕಾರಿಯಾಗದೆ ನನ್ನ ಪತ್ನಿ ಮೃತಪಟ್ಟಿದ್ದಾಳೆ. ಮಣಿಪಾಲ್ ಆಸ್ಪತ್ರೆಯಲ್ಲಿ ಬಿಲ್ ಪೇಮೆಂಡ್ ಮಾಡಿ ಮೃತದೇಹ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ. 11 ಲಕ್ಷ ಮೆಡಿಸಿನ್ ತಂದಿದ್ದೆ. ಇದೀಗ 30 ಲಕ್ಷ ಬಿಲ್ ಆಗಿದೆ. ಅತ್ತ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಹೆರಿಗೆಗೆ 1.30 ಸಾವಿರ ಪ್ಯಾಜೇಜ್ ಇತ್ತು. ಅಲ್ಲೂ 25 ಲಕ್ಷ ಬಿಲ್ ಆಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ 30 ಲಕ್ಷ ಬಿಲ್ ಆಗಿದೆ. ವೈದ್ಯರ ಎಡವಟ್ಟಿನಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಹಣ ಕಟ್ಟಿ ಮೃತದೇಹ ತರಬೇಕಿದೆ. ಈಗ ತಪ್ಪು ಮಾಡಿರೋದು ಕ್ಲೌಡ್ ನೈನ್ ಆಸ್ಪತ್ರೆಯವರು. ನೀವೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಹೆರಿಗೆಗೆ 1 ಲಕ್ಷ 30 ಸಾವಿರ ಪ್ಯಾಕೇಜ್ ಇತ್ತು. ಇಲ್ಲೂ 25 ಲಕ್ಷ ಬಿಲ್ ಆಗಿದೆ, ಮಣಿಪಾಲ್‌ ಆಸ್ಪತ್ರೆಯಲ್ಲೂ 30 ಲಕ್ಷ ಬಿಲ್ ಆಗಿದೆ. ಇವರ ಎಡವಟ್ಟಿನಿಂದ ಅಲ್ಲಿ ಹಣ ಕಟ್ಟಿ ಮೃತದೇಹ ತರಬೇಕಾದ ಪರಿಸ್ಥಿತಿ ಬಂದಿದೆ. ಈಗ ತಪ್ಪು ನೀವು ಮಾಡಿದ್ದು, ನೀವೇ ಪರಿಹಾರ ನೀಡಬೇಕು ಎಂದು ಕೇಳಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜೆ.ಬಿ.ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ಗಂಡ-ಹೆಂಡತಿ ಜಗಳಕ್ಕೆ ಮೂರು ವರ್ಷದ ಮಗು ಬಲಿ, ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆ…!

Thu May 23 , 2024
ಸಮಾಜದಲ್ಲಿ ವಿವಿಧ ಕಾರಣಗಳಿಂದ ಗಂಡ-ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಅನೇಕ ಜಗಳಗಳು ಕೊಲೆ, ಆತ್ಮಹತ್ಯೆ, ಹಲ್ಲೆಗಳಿಂದ ಮುಕ್ತಾಯವಾಗುತ್ತದೆ. ಆದರೆ ಇಲ್ಲೊಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗಂಡ ಹೆಂಡತಿ ನಡುವೆ ನಡೆದ ಜಗಳದಿಂದ ಮೂರು ವರ್ಷದ ಮಗು ಕೊಲೆಯಾಗಿದೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತಿಯೊಂದಿಗೆ ಜಗಳವಾಡಿ ಆ ಕೋಪವನ್ನು ಮಗುವಿನ ಮೇಲೆ ತೋರಿಸಿ ಮಗುವನ್ನೆ ಕೊಲೆ ಮಾಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಗಂಡ-ಹೆಂಡತಿ ಜಗಳದ ಕಾರಣದಿಂದ ಮೂರು ವರ್ಷದ ಮಗು […]
woman kills child after fight with husband in maharashtra
error: Content is protected !!