Reels – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಅನೇಕರು ಅಪಾಯಕಾರಿ ರೀಲ್ಸ್ ಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಅಪಾಯಕಾರಿಯಾದ ಪ್ರದೇಶಗಳಲ್ಲಿ ನಿಂತು ರೀಲ್ಸ್ ಮಾಡಿ ಫೇಮಸ್ ಆಗಲು ಹೋಗಿ ತಮ್ಮ ಪ್ರಾಣಕ್ಕೆ ಕುತ್ತು ಬರುವಂತೆ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಬೆಟ್ಟದ ತುದಿಯನ್ನು ನಿಂತು ರೀಲ್ಸ್ (Reels) ಮಾಡಲು ಹೋದ ಯುವತಿ ದುಪ್ಪಟಾ ಹಾರಿಸುತ್ತಾ ವಿಡಿಯೋ ಮಾಡುತ್ತಾ ಕುಸಿದು ಬಿದಿದ್ದಾಳೆ. ಅದೃಷ್ಟಾವಶಾತ್ ಆಕೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸೋಷಿಯಲ್ ಮಿಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ ಹಣ ಗಳಿಸುವ (Reels) ಕಾಯಕವನ್ನು ಅನೇಕರು ರೂಪಿಸಿಕೊಂಡಿದ್ದಾರೆ. ಆದರೆ ಕೆಲವರು ಫೇಮಸ್ ಆಗುವ ಭರದಲ್ಲಿ ಇನ್ನಿಲ್ಲದ ಅವಾಂತರಗಳನ್ನು ಸೃಷ್ಟಿಸುತ್ತಾರೆ. ರೈಲು ಹಳಿಗಳ ಮೇಲೆ, ರಸ್ತೆಗಳ ಮಧ್ಯೆ, ಬೆಟ್ಟದ ತುದಿಯಲ್ಲಿ, ಜಲಪಾತಗಳ (Reels) ತುದಿಯಲ್ಲಿ ನಿಂತು ರೀಲ್ಸ್ ಮಾಡಲು ಹೋಗಿ ಪ್ರಾಣ ಸಹ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಚಿತ್ರ ವಿಚಿತ್ರವಾಗಿ ರೀಲ್ಸ್ ಮಾಡಲು ಹೋಗಿ ಥಳಿತಕ್ಕೂ ಗುರಿಯಾಗಿದ್ದಾರೆ. (Reels)ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಹಿಮಾಚಲ ಪ್ರದೇಶದ ಚಂಬಾದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಯುವತಿಯೊಬ್ಬಳು ಹಿಮಾಚಲ ಪ್ರದೇಶದ ಚಂಬಾ ವ್ಯಾಪ್ತಿಯ ಬೆಟ್ಟದ ತುದಿಯಲ್ಲಿ ನಿಂತು (Reels)ರೀಲ್ಸ್ ಮಾಡಿದ್ದಾಳೆ. ತನ್ನ ದುಪ್ಪಟ ಹಾರಿಸುತ್ತಾ ವಿಡಿಯೋ ಮಾಡುತ್ತಾ, ಕುಣಿಯಲು ಆರಂಭಿಸಿದ್ದಾರೆ. ಈ ಸಮಯದಲ್ಲಿ ಆಕೆ ಆಯತಪ್ಪಿ ಕೆಳಕ್ಕೆ ಉರುಳಿ ಬಿದ್ದಿದ್ದಾಳೆ. ಅದೃಷ್ಟವಶಾತ್ ಆಕೆಯ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಗಂಭಿರವಾಗಿ ಆಕೆಗೆ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿ (Reels)ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಬೆಟ್ಟದಲ್ಲಿ ಹುಲ್ಲು ಹೆಚ್ಚಾಗಿ ಬೆಳೆದ ಹಿನ್ನೆಲೆಯಲ್ಲಿ ಆಕೆಯ ಜೀವ ಉಳಿದಿದೆ ಎನ್ನಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಈ ರೀತಿಯ ರೀಲ್ಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾಳೆ ಆ ಯುವತಿ. ಇನ್ನೂ ಈ ವಿಡಿಯೋ ನೋಡಿದ ಅನೇಕರು ತಮ್ಮದೇ ಆದ ಶೈಲಿಯಲ್ಲಿ (Reels) ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.