Viral Video – ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ಹೋಗಿ ಇನ್ನಿಲ್ಲದ ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಜನರಿಗೆ ಕಿರಿಕಿರಿಯಾಗುವಂತಹ ರೀಲ್ಸ್ ಮಾಡುವ ಮೂಲಕ ಎಲ್ಲರ ಆಕ್ರೋಷಕ್ಕೆ ಕಾರಣವಾಗುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋವೊಂದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮಹಿಳೆಯೊಬ್ಬರು ಕಾಳಿ ಮಾತೆಯ ವೇಷ ಧರಿಸಿ ಬೀದಿ ಬದಿಯ ಪುಡ್ ಕೌಂಟರ್ ಬಳಿಗೆ ಬಂದು, ಅಲ್ಲಿ ಪಾನಿಪೂರಿ ತಿಂದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕೆಯ ವರ್ತನೆಯ ವಿರುದ್ದ ಕಿಡಿಕಾರಿದ್ದಾರೆ.
ಹಿಂದೂಗಳ ದೈವವಾದ ಕಾಳಿ ಮಾತೆಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಮಹಿಳೆಯೊಬ್ಬರು ಕಾಳಿ ಮಾತೆಯ ವೇಷವನ್ನು ಧರಿಸಿದ್ದಾಳೆ. ಬಳಿಕ ಬೀದಿಬದಿಯ ಪಾನಿಪೂರಿ ಅಂಗಡಿಗೆ ಬಂದಿದ್ದಾಳೆ. ಅಲ್ಲಿ ಪ್ಲೇಟ್ ಹಿಡಿದು ಪಾನಿಪೂರಿ ಸೇವನೆ ಮಾಡಿದ್ದಾಳೆ. ಈ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅಷ್ಟೇಅಲ್ಲದೇ ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲೂ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ಅನೇಕರು ಆಕ್ರೋಷ ಹೊರಹಾಕಿದ್ದಾರೆ. ಮಹಿಳೆಯ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನೂ ಈ ವಿಡಿಯೋವನ್ನು ಜೆರ್ರಿ ಎಂಬುವವರು ಈ ವಿಡಿಯೊವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ :
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಕಾಳಿಮಾತೆಯ ವೇಷದಲ್ಲಿ ಬಂದು ಬೀದಿ ಬದಿಯಲ್ಲಿ ನಿಂತು ಪಾನಿಪೂರಿ ತಿನ್ನುತ್ತಿರುವದನ್ನು ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ಅನೇಕರು ಆಕ್ರೋಷ ಹೊರಹಾಕಿದ್ದಾರೆ. ಕೆಲವರು ಸಕರಾತ್ಮಕವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ. ಅನೇಕರು ಜೈ ಕಾಳಿ ಮಾತಾ ಎಂತಲೂ, ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಗಳ ಮೂಲಕ ಹಂಚಿಕೊಂಡಿದ್ದರೇ, ಕೆಲವರು ಆಕ್ರೋಷ ಹೊರಹಾಕಿದ್ದಾರೆ. ನೀವು ದೇವರನ್ನು ಏಕೆ ಅಪಹಾಸ್ಯ ಮಾಡುತ್ತೀರೀ, ಮೊದಲು ಈ ವಿಡಿಯೋ ಡಿಲೀಟ್ ಮಾಡಿ ಎಂತಲೂ, ನಿಮಗೆ ನಾಚಿಕೆಯಾಗಲ್ಲವೇ ಎಂತಲೂ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ.