HD Kumaraswamy – ಜ.2 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಜನರು ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಬಸ್ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಿಸಿದ ಸರ್ಕಾರದ ವಿರುದ್ದ ಬಿಜೆಪಿ ಸಹ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಷ ಹೊರಹಾಕಿದ್ದಾರೆ. ಇದೇ ವೇಳೆ ಹೊಸದೊಂದು ಬಾಂಬ್ ಸಹ ಸಿಡಿಸಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸರ್ಕಾರ ಗ್ಯಾರಂಟಿಗಳ ಕಮಿಟ್ಮೆಂಟ್ ನಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ರಸ್ತೆಗಳು ತುಂಬಾ ಹದೆಗಟ್ಟೆವೆ. ರಾಜ್ಯದ ಜನರ ತೆರಿಗೆಯ ಹಣ ಸರಿಯಾದ ರೀತಿ ಬಳಕೆಯಾಗದ ಕಾರಣ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಜೆ.ಡಿ.ಎಸ್ ಶಾಸಕರು ಮಾತ್ರವಲ್ಲದೇ ಕಾಂಗ್ರೇಸ್ ಸರ್ಕಾರದ ಶಾಸಕರೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಗ್ಯಾರಂಟಿ ಯೋಜನೆಯ ಬಗ್ಗೆ ನಾನು ಲಘುವಾಗಿ ಮಾತನಾಡೊಲ್ಲ. ರಾಜ್ಯದಲ್ಲಿ ಹಣದ ಕೊರತೆಯಿಲ್ಲ ನಮ್ಮದು ಸಂಪತ್ತಿನಿಂದ ಕೂಡಿದ ರಾಜ್ಯ. ಕೊರತೆ ಇರೋದು ಸರ್ಕಾರದ ಆಡಳಿತದಲ್ಲಿ ಎಂದರು.
ಇನ್ನೂ ಮಾತನಾಡೋಕೆ ಅನೇಕ ವಿಚಾರಗಳಿವೆ, ಜನವರಿ 15 ರ ಬಳಿಕ ಅಂದ್ರೇ ಸಂಕ್ರಾತಿ ಹಬ್ಬದ ಬಳಿಕ ಎಲ್ಲವನ್ನೂ ವಿವರವಾಗಿ ಮಾತನಾಡುತ್ತೇನೆ. ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಇದನ್ನೆಲ್ಲವನ್ನೂ ನೋಡಿದರೇ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಇದೆಯಾ ಎಂಬ ಅನುಮಾನ ಮೂಡುವಂತಾಗಿದೆ. ಸಿಎಂ ಖಾಸ ಶಿಷ್ಯ ರಾಮಪ್ಪ ಎಂಬುವವರು ದಯಾ ಮರಣಕ್ಕೆ ಕೇಳಿಕೊಂಡಿದ್ದಾರೆ. ನಮ್ಮ ರಾಜ್ಯವನ್ನು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ದೊಟ್ಟ ಮಟ್ಟದ ಸಾಧನೆ ಮಾಡಿದ್ದೀವಿ ಅಂತಾ ಸರ್ಕಾರ ಜಾಹಿರಾತು ನೀಡುತ್ತಿದೆ. ಜಾಹಿರಾತಿಗಾಗಿ ರಾಜ್ಯದ ಜನರ ಹಣ ಹೊಳೆಯ ರೀತಿ ಹರಿಸುತ್ತಿದ್ದಾರೆ. ಬಸ್ ದರ ಜಾಸ್ತಿ ಮಾಡುತ್ತಿದ್ದಾರೆ. ಇದನ್ನು ಕೇಳಿದರೇ ಸಿಎಂ ಗೆ ಉಸಿರೇ ಬರೊಲ್ಲ. ಬೆವರು ಸುರಿಸಿ ಖಜಾನೆ ತುಂಬಿಸಿ ಇವರು ನಿಮಗೆ ಗ್ಯಾರಂಟಿಗಳನ್ನು ಕೊಡ್ತಾ ಇಲ್ಲ. ನಿಮ್ಮ ಜೇಬಿನಿಂದ ದರೋಡೆ ಮಾಡಿ ಕೊಡ್ತಾ ಇದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.