Price Hike : ಸದ್ಯ ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆಯ ಕುರಿತು ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರ ವಾಕ್ಸಮರ ಸಹ ಜೋರಾಗಿದೆ. ಇದೀಗ ಬಸ್ ಟಿಕೆಟ್ ದರ ಏರಿಕೆಯ ಕುರಿತು ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಡೀಸೆಲ್, ಅಕ್ಕಿಮ, ಬಟ್ಟೆ ಬೆಲೆ ಏರಿಕೆಯಾದರೇ ತಗೋತೀರಾ, ನೂರು ರೂಪಾಯಿಯಿದ್ದ ಮಟನ್ 500 ರೂಪಾಯಿ ಇದ್ರೆ ತಗೋತಿರಾ, ಸರ್ಕಾರದ ಈ ಒಂದು ತೀರ್ಮಾನಕ್ಕೆ ಈ ರೀತಿ ಮಾತನಾಡೋದು ಸರೀನಾ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಸಚಿವ ಚಲುವರಾಯಸ್ವಾಮಿ ಬಸ್ ಟಿಕೆಟ್ ದರ ಏರಿಕೆ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಶಕ್ತಿ ಯೋಜನೆಗೂ ಬಸ್ ಟಿಕೆಟ್ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಶಕ್ತಿ ಯೋಜನೆಯಲ್ಲಿ ನಮಗೆ ಬರ್ಡನ್ ಅಂತಾರೆ, ಬಸ್ ರೇಟ್ ಹೆಚ್ಚಳ ಮಾಡಿ 10 ವರ್ಷ ಆಗಿದೆ. ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದ್ರೆ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ? ಈಗಾಗಲೇ ಆಂಧ್ರ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ನಮಗಿಂತ ಬಸ್ ಟಿಕೆಟ್ ದರವನ್ನು ಹೆಚ್ಚಾಗಿ ಏರಿಕೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಕಳೆದ 10-15 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ.
7ನೇ ವೇತನ ಆಯೋಗದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ವೇತನ ಹೆಚ್ಚಾಗಿದೆ. ಸಂಸ್ಥೆಗಳು ಚೆನ್ನಾಗಿ ನಡೆಯಬೇಕಲ್ವಾ? ಎರಡು ಮೂರು ವರ್ಷಕ್ಕೆ ಹೆಚ್ಚಳ ಮಾಡಬೇಕು ಇದರಿಂದ ಸಮಸ್ಯೆಯೇನಾಗಲ್ಲ, ಅಂಗವಿಕಲರು, ವಿದ್ಯಾರ್ಥಿಗಳಿಗೆ ಎಲ್ಲರಿಗೆ ಆಗಿದೆ. ಬೇರೆ ರಾಜ್ಯದನ್ನೂನೀವು ಹಾಕಿ. ಇಲ್ಲೇ ಹೆಚ್ಚು ಅಂತ ಯಾಕೆ ಹಾಕ್ತೀರ ಎಂದು ಮಾಧ್ಯಮದವರಿಗೇ ಸಚಿವ ಚೆಲುವರಾಯಸ್ವಾಮಿ ಪ್ರಶ್ನಿಸಿದರು. ಇನ್ನೂ ಬಸ್ ದರ ಏರಿಕೆ ಖಂಡಿಸಿ ಪ್ರತಿಪಕ್ಷಗಳು ಸಹ ಆಕ್ರೋಷ ಹೊರಹಾಕಿದೆ.
ಜೊತೆಗೆ ಬೆಂಗಳೂರು ಜನರಿಗೆ ನೀರಿನ ವಿಷಯದಲ್ಲೂ ಶಾಕ್ ನೀಡಿದ್ದು, ಮುಂದಿನ ದಿನಗಳಲ್ಲಿ ನೀರಿನ ದರದಲ್ಲೂ ಹೆಚ್ಚಳವಾಗಬಹುದು ಎನ್ನಲಾಗಿದೆ. ಇದೂ ಕೂಡ ಜನವರಿಯಲ್ಲೇ ನಿರ್ಧಾರವಾಗಲಿದ್ದು, ಇದೀಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್ (Metro) ಎದುರಾಗಿದೆ. ಇನ್ನು ದರ ಪರಿಷ್ಕರಣೆ ಸಂಬಂಧ ಜನವರಿ 2ನೇ ವಾರದಲ್ಲಿ ಮೀಟಿಂಗ್ ನಡೆಯಲಿದ್ದು, ಈ ಬೋರ್ಡ್ ಮೀಟಿಂಗ್ ಬಳಿಕ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೆಟ್ರೊ ಟಿಕೆಟ್ ದರ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ, ಎಷ್ಟು ಮಾಡ್ಬೇಕು ಎಂಬುದನ್ನು ಮುಂದಿನ ಮೀಟಿಂಗ್ ನಲ್ಲಿ ಚರ್ಚಿಸಿ ನಿರ್ಧಾರವಾಗುತ್ತದೆ. ಈ ಮೂಲಕ ಮೆಟ್ರೋ ಪ್ರಯಾಣಿಕರಿಗೂ ಶಾಕ್ ಎದುರಾಗಲಿದೆ.