School Day: ಇಂದಿನ ಮಕ್ಕಳೆಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಹೊರ ತರಲು ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹ ಬಹುಮುಖ್ಯವಾಗಿದೆ. ಈ ನಿಟ್ಟನಲ್ಲಿ ಶಾಲಾ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಸಹಕಾರಿಯಾಗಿದೆ ಎಂದು ಎಲ್ಲೋಡು ನೇತಾಜಿ ಶಾಲೆಯ ಮುಖ್ಯ ಶಿಕ್ಷಕ ನಾಗಭೂಷಣ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶ್ರೀ ಗಾಯತ್ರಿ ಪ್ರಸಾದ ಭವನದಲ್ಲಿ ಆಯೋಜಿಸಿದ್ದ ಶ್ರೀಕಾರ್ ಪಬ್ಲಿಕ್ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಸಂಕೋಚ ಮತ್ತು ಭಯವನ್ನು ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಸಹಕಾರಿಯಾಗಲಿದೆ. ಇಂತಹ ವೇದಿಕೆಗಳನ್ನು ಅವರು ಮಾಡುವ ನೃತ್ಯಗಳಿಂದ ಭಯ ಹೋಗುತ್ತದೆ ಆದ್ದರಿಂದ ಪೋಷಕರು ಪಠ್ತದ ಜತೆಗೆ ಇಂತಹ ನೃತ್ಯ ಮಾಡುವಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳಿಗೆ ಪ್ರೋತ್ಸಹ ನೀಡಬೇಕೆಂದರು. ಇನ್ನು ಪಟ್ಟಣದಲ್ಲಿ ಶ್ರೀಕಾರ್ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಭೋದನೆ ಮಾಡುತ್ತಾ ಉತ್ತಮ ಹೆಸರು ಮಾಡುತ್ತಿದೆ ಇದೇ ರೀತಿ ಶಾಲೆ ಮುಂದುವರೆಯಬೇಕೆಂದು ತಿಳಿಸಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅದ್ಯಕ್ಷ ಸ.ನಾ.ನಾಗೇಂದ್ರ ಮಾತನಾಡಿ, ಮಕ್ಕಳು ಚಿಕ್ಕಂದಿನಿಂದಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ದಿ ಶಕ್ತಿ, ದೈರ್ಯ ಹೆಚ್ಚುತ್ತದೆ ಅವರು ಮುಂದಿನ ದಿನಗಳಲ್ಲಿ ಮಾಡುವ ಉನ್ನತ ಶಿಕ್ಷಣಕ್ಕು ಸಹ ಸಹಕರಿಯಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಓದಿನ ಜತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕೆಂದರು. ವಿಶೇಷವಾಗಿ ಭಾರತ ಸಂಸ್ಕೃತಿಯನ್ನು ಕಳುಹಿಸಬೇಕು. ಶ್ರೀಕಾರ್ ಶಾಲೆಯ ಮಾಲೀಕರು ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದರು ಸಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನುಪ್ರಾರಂಭಿಸಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮಾಡಿದ ನೃತ್ಯಗಳಿಗೆ ಹಾಗೂ ವಿವಿಧ ಬಗೆಯ ಚಟುವಟಿಕೆಗಳನ್ನು ನೋಡಿದ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಪ.ಪಂ.ಅಧ್ಯಕ್ಷ ಎ.ವಿಕಾಸ್, ಸದಸ್ಯ ರಾಜೇಶ್, ಕಸಾಪ ಅಧ್ಯಕ್ಷ ಬಿ.ಮಂಜುನಾಥ್, ಶಾಲೆಯ ಟ್ರಸ್ಟಿ ಸದಸ್ಯರಾದ ಸರಸ್ಪತಿ, ಎ.ಎನ್.ಮೂರ್ತಿ, ಶ್ರೀಧರ್, ಜ್ಯೋತಿ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ನೂರಾರು ಪೋಷಕರು ಭಾಗವಹಿಸಿದ್ದರು.