ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಕೆಲವೊಮ್ಮೆ ಇದು ಸುಳ್ಳಾಗುತ್ತೆ. ಗಂಭೀರ ಕಾರಣಗಳಿಂದ ಕೆಲವೊಂದು ಕಡೆ ಅನಾಹುತಗಳು ಸಂಭವಿಸುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಲೂ ಆತ್ಮಹತ್ಯೆಗಳು, ಕೊಲೆಗಳು, ಹಲ್ಲೆಗಳು ನಡೆದಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಅಂತಹುದೇ ಘಟನೆಯೊಂದು ನಡೆದಿದೆ. ಕೇವಲ 200 ರೂಪಾಯಿಗಾಗಿ ದಂಪತಿಯ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯ ಕಾರಣದಿಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಇಟ್ರಾ ಖುರ್ದ್ ಎಂಬಲ್ಲಿ ನಡೆದಿದೆ. ತನ್ನ ಪತ್ನಿ ಮನೆಯ ಖರ್ಚಿಗಾಗಿ 200 ರೂಪಾಯಿ ಕೇಳಿದ್ದಳಂತೆ. ಪತಿ ನೀಡಿರಲಿಲ್ಲವಂತೆ ಈ ಕಾರಣದಿಂದ ಇಬ್ಬರು ನಡುವೆ ಜಗಳ ಆಗಿ ಪತ್ನಿ ತವರು ಮನೆಗೆ ಹೋಗಿದ್ದಾಳೆ. ಇದರಿಂದ ಪತಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದುರ್ದೈವಿಯನ್ನು 22 ವರ್ಷ ಅಜ್ಜು ಎಂದು ಗುರ್ತಿಸಲಾಗಿದೆ. ಇನ್ನೂ ಅಜ್ಜು ವಿಷ ಸೇವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸ್ಥಳಿಯರ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಂದಾದ ರಾಣಿ ದುರ್ಗಾವತಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಮಾರ್ಗ ಮಧ್ಯೆಯೇ ಅಜ್ಜು ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.
ಇನ್ನೂ ಅಜ್ಜು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪತ್ನಿಯೊಂದಿಗೆ 200 ರೂಪಾಯಿಗಾಗಿ ಜಗಳ ಮಾಡಿಕೊಂಡಿದ್ದಾನೆ. ಈ ಕಾರಣದಿಂದ ಪತ್ನಿ ಗಂಡನ ಮನೆ ಬಿಟ್ಟು ಹೋಗಿದ್ದಾಳೆ. ಇದರಿಂದ ಮನನೊಂದ ಅಜ್ಜು ಆತ್ಮಹತ್ಯೆಗೆ ಶರಣಾಗಿದ್ದಾಗಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಪತಿ-ಪತ್ನಿ ನಡುವೆ ಗಲಾಟೆಗಳು ಸಾಮಾನ್ಯ ಎಂದೇ ಹೇಳಬಹುದು. ಸಣ್ಣ ಪುಟ್ಟ ಜಗಳಿಗಳಿಂದ ಈ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಸಂಸಾರ ಎಂದ ಮೇಲೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅತ್ಯಗತ್ಯವಾಗಿದೆ. ಎಂತಹುದೇ ಸಮಸ್ಯೆಯಾಗಲಿ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ, ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ ಎಂಬುದನ್ನು ಅರಿತುಕೊಂಡು ಬದುಕಬೇಕಿದೆ.