HomeNationalWife Killed husband: ನೀರು ಕೇಳಿದ್ದಕ್ಕೆ ಪತಿಯನ್ನು ಕ್ರೂರವಾಗಿ ಕೊಂದ ಪತ್ನಿ?

Wife Killed husband: ನೀರು ಕೇಳಿದ್ದಕ್ಕೆ ಪತಿಯನ್ನು ಕ್ರೂರವಾಗಿ ಕೊಂದ ಪತ್ನಿ?

Wife Killed husband- ಪತಿ ಹಾಗೂ ಪತ್ನಿಯ ನಡುವೆ ಜಗಳ ತಿಂದು ಮಲಗುವ ತನಕ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಜಗಳ ಹಲ್ಲೆ, ಕೊಲೆಯ ವರೆಗೂ ತಲುಪುತ್ತವೆ. ಕೆಲವೊಂದು ಪ್ರಕರಣಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ಅಥವಾ ಪತಿಯ ಕೊಲೆಯಾಗಿರುತ್ತದೆ. ಇದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆಯಾಗಬಹುದು. ಕುಡಿಯೋಕೆ ನೀರು ಕೇಳಿದ ಪತಿಯನ್ನೇ ಪತ್ನಿಯೊಬ್ಬಳು ಕ್ರೂರವಾಗಿ ಕೊಲೆ (Wife Killed husband) ಮಾಡಿದ್ದಾಳೆ. ಪತಿಯ ತಲೆ ನುಜ್ಜು ನುಜ್ಜಾಗುವಂತೆ, ತಲೆಯಲ್ಲಿರುವ ಮೆದಳು ಹೊರಬರುವಂತೆ ಕ್ರೂರವಾಗಿ ಕೊಲೆ ಮಾಡಲಾಗಿದೆ. ಪೊಲೀಸರ ಮುಂದೆ ಆಕೆಯ ಈ ಪ್ರವರ್ತನೆಗೆ ಪೊಲೀಸರೂ ಸಹ ಶಾಕ್ ಆಗಿದ್ದಾರೆ ಎನ್ನಲಾಗಿದೆ.

wife killed husband in up

ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಷಾಜಹಾನ್ ಪುರದಲ್ಲಿ ನಡೆದಿದೆ (Wife Killed husband) ಎನ್ನಲಾಗಿದೆ.  ಹತೋರಾ ಎಂಬ ಗ್ರಾಮದ ಸತ್ಯಪಾಲ್ ಸ್ಟೇಡಿಯಂ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿಯೊಂದಿಗೆ ಒಂದಲ್ಲ ಒಂದು ವಿಚಾರಕ್ಕಾಗಿ ಸದಾ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಅದೇ ರೀತಿ ಕಳೆದ ಗುರುವಾರ ಮದ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ಊಟ ಮಾಡುತ್ತಿದ್ದಾಗ ಪತ್ನಿಗೆ ನೀರು ಕೊಡುವಂತೆ ಕೇಳಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಈ ಗಲಾಟೆ ಉತ್ತುಂಗಕ್ಕೇರಿದೆ.  ಬಳಿಕ ಪತ್ನಿ ಇಟ್ಟಿಗೆಯನ್ನು ತೆಗೆದುಕೊಂಡು ತಲೆಗೆ ಹೊಡೆದು ದಾರುಣವಾಗಿ ಹತ್ಯೆ ಮಾಡಿದ್ದಾಳೆ. ಆತ ಸಾಯುವವರೆಗೂ ತಲೆಗೆ ಹೊಡೆದಿದ್ದಾಳೆ. ಪೊಲೀಸರು ಬರೋ ಸಮಯಕ್ಕೆ ಮೃತ ದೇಹದ ಮೇಲೆ ಕುಳಿತುಕೊಂಡು ತಲೆಯಲ್ಲಿನ ಮೆದುಳು ತೆಗೆದು ಎಲ್ಲರ ಮುಂದೆಯೇ ಬಿಸಾಡಿದ್ದಾಳೆ.

ಇನ್ನೂ ಆಕೆಯನ್ನು ನಿಯಂತ್ರಿಸಿದ ಪೊಲೀಸರು ತಮ್ಮ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಎಸ್.ಪಿ. ಸಂಜಯ್ ಕುಮಾರ್‍ ಮಾತನಾಡಿದ್ದು, ಸತ್ಯಪಾಲ್ ಗೆ ಮದುವೆಯಾಗಿ 18 ವರ್ಷ ಕಳೆದಿದೆ. ಪ್ರತಿನಿತ್ಯ ಕುಡಿದು ಪತ್ನಿಯೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ. ಅವರ ಮಕ್ಕಳೂ ಸಹ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಾರಂತೆ. ಆಕೆ ಮೃತ ದೇಹದೊಂದಿಗೆ ವರ್ತಿಸಿದ ರೀತಿಯನ್ನು ನೋಡಿದರೇ ಆಕೆ ಸಹ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt