...
HomeSpecialViral Video : ಅಕ್ಕನ ಪ್ಲಾನ್ ಗೆ ಅವಾಕ್ ಆಗಲೇ ಬೇಕು ಅಲ್ವಾ, ಬಟ್ಟೆ ಒಣಗಿಸಲು...

Viral Video : ಅಕ್ಕನ ಪ್ಲಾನ್ ಗೆ ಅವಾಕ್ ಆಗಲೇ ಬೇಕು ಅಲ್ವಾ, ಬಟ್ಟೆ ಒಣಗಿಸಲು ಸೂಪರ್ ಟೆಕ್ನಿಕ್, ವೈರಲ್ ಆದ ವಿಡಿಯೋ….!

ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ರೀಲ್ಸ್ ಗಳಲ್ಲಿ ಹೊಸ ಹೊಸ ಪದ್ದತಿಗಳನ್ನು ನೋಡುತ್ತಿರುತ್ತೇವೆ. ಹೊಸ ಬಗೆಯ ಆಹಾರ ತಯಾರಿಕೆ ಸೇರಿದಂತೆ ಕೆಲವೊಂದು ಪ್ರಯೋಗಗಳನ್ನು ನೋಡುತ್ತಿರುತ್ತೇವೆ. ಸೈಕಲ್ ಅನ್ನು ಬೈಕ್ ಆಗಿ ಪರಿವರ್ತಿಸುವುದು, ಕೆಲವರು ಬೈಕ್ ಅನ್ನು ಕಾರಿನಂತೆ ಬದಲಾಯಿಸುವುದು ಮಾಡುತ್ತಿರುತ್ತಾರೆ. ಆದರೆ ಮಹಿಳೆಯರು ಸಹ ಮನೆ ಕೆಲಸಕ್ಕಾಗಿ ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇದೀಗ ಮಹಿಳೆಯೊಬ್ಬರು ಬಟ್ಟೆ ಒಣಗಿಸಲು ಸಖತ್ ಟ್ರಿಕ್ ಬಳಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ಆಕೆಯ ಟೆಕ್ನಿಕ್ ಗೆ ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ.

ಇಂದಿನ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲವೆಂದೇ ಹೇಳಬಹುದು. ಪ್ರತಿಯೊಂದು ವಿಚಾರವನ್ನು ರೀಲ್ಸ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಇದೀಗ ಮಹಿಳೆಯೊಬ್ಬರು ಬಟ್ಟೆಗಳನ್ನು ಒಣಗಿಸಲು ಹೊಸ ಪ್ಲಾನ್ ಮಾಡಿದ್ದಾರೆ. ಒಗೆದು ಹಾಕಿದ ಬಟ್ಟೆಗಳನ್ನು ಒಣಗಿಸಲು ಹೊಸ ಪ್ಲಾನ್ ಮಾಡಿದ್ದಾಳೆ. ಒಂದು ಬಕೆಟ್ ನಲ್ಲಿ ಬಟ್ಟೆಗಳನ್ನು ತಂದು, ಅಲ್ಲಿಯೇ ಹಗ್ಗಕ್ಕೆ ನೇತಾಡುತ್ತಿದ್ದ ಬಕೆಟ್  ನಲ್ಲಿ ಬಟ್ಟೆಗಳನ್ನು ಹಾಕಿದ್ದಾಳೆ. ಅದಕ್ಕೆ ಕಟ್ಟಿರುವ ಹಗ್ಗವನ್ನು ಸುತ್ತುವಂತೆ ಹಾಕಿದ್ದಾಳೆ. ಹೀಗೆ ಬಕೆಟ್ ತಿರುಗುತ್ತಾ ಬಟ್ಟೆಯಲ್ಲಿದ್ದ ನೀರು ಸಂಪೂರ್ಣವಾಗಿ ಹೊರ ಬರುತ್ತದೆ. ಈ ರೀತಿಯಲ್ಲಿ ಆ ಮಹಿಳೆ ವಾಷಿಂಗ್ ಮಿಷನ್ ನಲ್ಲಿ ಒಗೆದ ಬಟ್ಟೆಗಳನ್ನು ಡ್ರೈಯರ್‍ ಮಾಡುತ್ತಿರುವಂತೆ (Viral Video) ಮಾಡಿದ ಪ್ರಯೋಗಕ್ಕೆ ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ.

to watch this video click this link : https://www.instagram.com/p/C81Sxe3RBtM/

ಸದ್ಯ ಮಹಿಳೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Video) ಆಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣವೂ ಹೆಚ್ಚು ತಂಪಾಗಿರುವುದರಿಂದ ಮಹಿಳೆಯರು ಬಟ್ಟೆಗಳನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.  ವಾಷಿಂಗ್ ಮೆಷಿನ್ ಇಲ್ಲದೆ, ಬಟ್ಟೆಯನ್ನು ಸುಲಭವಾಗಿ ಒಣಗಿಸಲು ಮಹಿಳೆಯೊಬ್ಬಳು ಹೊಸ ತಂತ್ರವನ್ನು ಕಂಡುಹಿಡಿದಿದ್ದಾಳೆ. ತೊಳೆದ ಬಟ್ಟೆಯನ್ನು ಸುಲಭವಾಗಿ ಒಂದೇ ಒಂದು ಬಕೆಟ್‌ ಬಳಸಿ ಒಣಗಿಸಲು ಟೆಕ್ನಿಕ್​ ಒಂದನ್ನು ಕಂಡುಹಿಡಿದಿದ್ದಾರೆ. ಈ ವಿಡಿಯೋ (Viral Video) ನೋಡಿದ ಅನೇಕರು ಮಹಿಳೆಯ ಐಡಿಯಾ ಮೆಚ್ಚಿ, ಲೈಕ್ ಗಳು ಕಾಮೆಂಟ್ ಗಳನ್ನ ಹರಿಬಿಡುತ್ತಿದ್ದಾರೆ. ಕಡಿಮೆ ಸಮಯದಲ್ಲೇ ಈ ವಿಡಿಯೋ ಲಕ್ಷಾಂತರ ವ್ಯೂವ್ಸ್ ಕಂಡಿದೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.