Viral Video: ನೋಡುತ್ತಿದ್ದಂತೆ ಕುಸಿದು ಬಿದ್ದ ಹಳೆಯ ಕಟ್ಟಡ, ಕ್ಷಣದಲ್ಲಿ ಪಾರಾದ ತಾಯಿ ಮಗು, ವೈರಲ್ ಆದ ವಿಡಿಯೋ…!

ಆಗಾಗ ಕ್ಷಣದಲ್ಲೆ ಕೆಲವೊಂದು ಪವಾಡಗಳು ನಡೆಯುತ್ತವೆ. ಪವಾಡ ಸದೃಶ ಎಂಬಂತೆ ಅನೇಕರು ಪ್ರಾಣಾಪಯದಿಂದ ಪಾರಾಗುತ್ತಿರುತ್ತಾರೆ. ಇದೀಗ ಅಂತಹ ಘಟನೆಯ ಬಗ್ಗೆ ಈ ಹೇಳಲಾಗಿದೆ. ಕಟ್ಟಡವೊಂದು ಇದ್ದಕ್ಕಿಂದ್ದಂತೆ ಕುಸಿದು ಬಿದಿದ್ದೆ. ಈ ಸಮಯದಲ್ಲಿ ಕೆಲವೇ ಕ್ಷಣಗಳಲ್ಲಿ ತಾಯಿ ಮಗು ಇಬ್ಬರೂ (Viral Video) ಪವಾಡ ಸದೃಶ ಎಂಬಂತೆ ಪಾರಾಗಿದ್ದಾರೆ. ಈ ಘಟನೆ ಪಂಜಾಬ್ ನ ಲೂಧಿಯಾನಾದಲ್ಲಿ ನಡೆದಿದೆ. ಈ ಅಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

women escape from danger 0

ಪಂಜಾಬ್ ನ ಲೂಧಿಯಾನದ ಹಳೇ ಮಾರುಕಟ್ಟೆ ಬಳಿ ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಘಟನೆ ನಡೆದಿದೆ. ಸುಮಾರು ನೂರು ವರ್ಷಗಳ ಹಳೆಯ ಕಟ್ಟಡವೊಂದು ಕುಸಿದಿದೆ. ಈ ಸಮಯದಲ್ಲಿ ತಾಯಿ ಹಾಗೂ ಮಗು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಈ ತಾಯಿ ಹಾಗೂ ಮಗುವಿನ ಜೊತೆ ಅಲ್ಲಿದ್ದ ಕೆಲವರು ಕಟ್ಟಡ ಬೀಳುತ್ತಿರುವುದನ್ನು ನೋಡಿ ಓಡುತ್ತಿರುವ ದೃಶ್ಯ ಸ್ಥಳೀಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಟ್ಟಡ ಕುಸಿದು ಬೀಳುತ್ತಿದ್ದು, ಅಲ್ಲೆ ಪಕ್ಕದಲ್ಲಿ ಮಹಿಳೆಯಿದ್ದಾರೆ. ಆದರೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ತಾಯಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/hamariawaz_news/status/1841470029092581518

ಇನ್ನೂ ಕಟ್ಟಡ ಕುಸಿಯುತ್ತಿದ್ದಂತೆ ತಾಯಿ ತನ್ನ ಮಗುವನ್ನು ಎತ್ತಿಕೊಂಡು ಓಡಿದ್ದಾಳೆ. ಆದರೆ ಆಕೆ ಕುಸಿದು ಬಿದ್ದಿದ್ದಾಳೆ. ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಇನ್ನೂ ಅನೇಕ ಬಾರಿ ಈ ಹಳೆಯ ಕಟ್ಟಡವನ್ನು ತೆರವುಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಕಟ್ಟಡ ಮಾಲೀಕರಿಗೆ ದೂರು ನೀಡಿದ್ದರಂತೆ. ಆದರೂ ಸಹ ಕಟ್ಟಡದ ತೆರವಿಗೆ ಮುಂದಾಗಿರಲಿಲ್ಲವಂತೆ. ಇದೀಗ ಈ ಹಳೆಯ ಕಟ್ಟಡ ಕುಸಿದು ಬಿದ್ದಿದೆ. ಈ ಅವಘಡದಲ್ಲಿ ಪಾರಾದ ತಾಯಿಯನ್ನು ಖುಷಿ ಅರೋರಾ ಎಂದು ಗುರ್ತಿಸಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ ಕಟ್ಟಡ ಕುಸಿದ ಸಮಯದಲ್ಲಿ ಕೆಲವೊಂದು ಸಣ್ಣ ಅವಶೇಷಗಳು ತಾಯಿ ಹಾಗೂ ಮಗು ಮೇಲೆ ಬಿದ್ದಿದೆಯಂತೆ. ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Next Post

Rajinikanth: ಡಿಸ್ಚಾರ್ಜ್ ಆದ ಬಳಿಕ ಮೊದಲ ಪೋಸ್ಟ್ ಹಂಚಿಕೊಂಡ ರಜನಿಕಾಂತ್, ಎಲ್ಲರಿಗೂ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್…!

Sat Oct 5 , 2024
ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್‍ ನಟ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸೆಪ್ಟೆಂಬರ್ 30 ರಂದು ದಿಢೀರ್ ಅಸ್ವಸ್ಥಗೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ರಜನಿಕಾಂತ್‌ ರವರಿಗೆ ಎಂಡೋವಾಸ್ಕುಲರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟಂಟ್ ಹಾಕಲಾಗಿತ್ತು. ಇದೀಗ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೂಪರ್‍ ಸ್ಟಾರ್‍ ರಜನಿಕಾಂತ್ (Rajinikanth) ತಮ್ಮ ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್‍) […]
Rajinikanth biopic 0
error: Content is protected !!