Saturday, October 25, 2025
HomeInternationalViral Video: ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ...

Viral Video: ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಬಾಲಕ…!

Viral Video: ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ರೀಲ್ಸ್ ಮಾಡಿ ಫೇಮಸ್ ಆಗಲು ಯಾವ ಮಟಕ್ಕಾದರೂ ಇಳಿಯುತ್ತಾರೆ. ಸಾರ್ವಜನಿಕ ಪ್ರದೇಶಗಳಾದ ರೈಲು, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ವಿಚಿತ್ರವಾಗಿ ರೀಲ್ಸ್ ಮಾಡುವವರನ್ನು (Viral Video) ಕಂಡಿರುತ್ತೇವೆ. ಅದೇ ರೀತಿ ಇಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹುಡುಗರ ಗುಂಪೊಂದು ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್ (Viral Video)ಮಾಡಲು ಹೋಗಿದ್ದಾರೆ. ಈ ವೇಳೆ ವೇಗವಾಗಿ ಬಂದ ರೈಲು ಬಾಲಕನಿಗೆ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

boy dead in railway track 1

ಇಂದಿನ ಕಾಲ ಸೋಷಿಯಲ್ ಮಿಡಿಯಾ ಜಮಾನ ಎಂದೇ ಹೇಳಬಹುದು. ಸ್ಮಾರ್ಟ್ ಪೋನ್ ಹೊಂದಿರುವವರು ಸೋಷಿಯಲ್ ಮಿಡಿಯಾ ಬಳಸುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾ (Viral Video)ಮೂಲಕ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಹುಡುಗರ ಗುಂಪು ಸಹ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಹೋಗಿ ಒಂದು ಪ್ರಾಣ (Viral Video)ಹೋಗಿದೆ. ಚಲಿಸುತ್ತಿರುವ ರೈಲಿನ ಮುಂದೆ ರೀಲ್ಸ್ ಮಾಡಿದ್ದು, ಸೆಲ್ಫಿ ತೆಗೆದುಕೊಳ್ಳಲು ಹೋದ ಬಾಲಕನ (Viral Video) ಪ್ರಾಣ ಹೋಗಿದೆ. ವೇಗವಾಗಿ ಬರುತ್ತಿದ್ದ ರೈಲು ಬಾಲಕನಿಗೆ (Viral Video) ಡಿಕ್ಕಿ ಹೊಡೆದಿದೆ. ಈ ಕಾರಣದಿಂದ ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಯ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಅಂದಹಾಗೆ ಈ ಘಟನೆ ಬಾಂಗ್ಲಾದೇಶದ ರಂಗ್ ಪುರದಲ್ಲಿ ನಡೆದಿದೆ ಎನ್ನಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ಹುಡುಗರ ಗುಂಪು ರೈಲ್ವೇ ಟ್ಯ್ರಾಕ್ ಬಳಿ ನಿಂತು ಸೆಲ್ಫಿ ವಿಡಿಯೋ ಮಾಡಲು ಹೋಗಿದ್ದಾರೆ. ರೈಲು ಹತ್ತಿರ ಬರುತ್ತಿದ್ದಂತೆ ಹುಡುಗರು ಪೋನ್ ಹಿಡಿದು ರೆಡಿಯಾಗಿದ್ದಾರೆ. ಆದರೆ ರೈಲು ತುಂಬಾ ವೇಗವಾಗಿ ಬಂದಿದೆ. ಹುಡುಗರ ಗುಂಪಿನಲ್ಲಿದ್ದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದಿದೆ. ಈ ಹೊಡೆತಕ್ಕೆ ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಸಂಬಂಧ ವಿಡಿಯೋ ಒಂದನ್ನು @iSoumikSaheb ಎಂಬ ಹೆಸರಿನ ಎಕ್ಸ್ ​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅ.26 ರಂದು ಈ ವಿಡಿಯೋ ಹಂಚಿಕೊಂಡಿದ್ದು, ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಈ ಸಂಬಂಧ ನೆಟ್ಟಿಗರು ರಿಯಾಕ್ಟ್ ಆಗಿದ್ದು, ಫೇಮಸ್ ಆಗಲು ಈ ರೀತಿಯಲ್ಲಿ ಮಾಡಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular