ಮಳೆಗಾಲ ಆರಂಭವಾದರೇ ಸಾಕು ಮನೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತದೆ. ಮನೆಯೊಳಗೆ, ಬಾತ್ ರೂಂಗಳಲ್ಲಿ, ಶೂ ಗಳ ಒಳಗೆ, ಬೈಕ್, ಕಾರುಗಳಲ್ಲಿ ಹಾವುಗಳು (Viral Video) ಸೇರಿಕೊಂಡಿರುವ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ನೋಡುತ್ತಿರುತ್ತವೆ. ಇದೀಗ ಕಾಲೇಜೊಂದರ (Viral Video)ಶೌಚಾಲಯದಲ್ಲಿ ರಾಶಿ ರಾಶಿ ಹಾವು ಮರಿಗಳು ಕಾಣಿಸಿಕೊಂಡಿದೆ. ಟಾಯ್ಲೇಟ್ ಬೇಸಿನ್ ನಲ್ಲಿ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ ವಿಡಿಯೋ ಸೋಷಿಯಲ್ (Viral Video) ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಸ್ವಚ್ಚತೆ ಕಾಪಾಡದ ಹಿನ್ನೆಲೆಯಲ್ಲಿ ಈ ರೀತಿಯಾಗಿದೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳದೇ ಇದ್ದರೇ, ಸಾಂಕ್ರಾಮಿಕ ರೋಗಗಳ ಜೊತೆಗೆ ಕೆಲವು ವಿಷ ಕೀಟಗಳು, ಹಾವುಗಳು ಮನೆಯೊಳಗೆ ಸೇರುತ್ತವೆ. ಇದೀಗ ಕಾಲೇಜಿನ ಶೌಚಾಲಯದಲ್ಲಿ ಸ್ವಚ್ಚತೆಯ ಕೊರತೆಯ ಕಾರಣದಿಂದ ಟಾಯ್ಲೆಟ್ ಬೇಸಿನ್ ನಲ್ಲಿ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಿಗ್ನರ್ ಅಣ್ಣಾ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಲಾ ಶೌಚಾಲಯದಲ್ಲಿ ಸ್ವಚ್ಚತೆ ಕೊರತೆಯಿಂದ (Viral Video) ರಾಶಿಗಟ್ಟಲೇ ಹಾವು ಮರಿಗಳು ಕಾಣಿಸಿಕೊಂಡಿದೆ. ಶೌಚಾಲಯದ ಸುತ್ತ ಮುತ್ತ ಪೊದೆಗಳೇ ತುಂಬಿದೆ ಎಂದು ಹೇಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/NutBoult/status/1831316065655124316
ಇನ್ನೂ ಕಾಲೇಜಿನಲ್ಲಿ ಸ್ವಚ್ಚತೆ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋಗಲು ಭಯಪಡುವಂತಾಗಿದೆ. ಆದಷ್ಟು ಬೇಗ ಶೌಚಾಲಯದ ಸುತ್ತಮುತ್ತಲೂ ಸ್ವಚ್ಚತೆಯನ್ನು ಮಾಡಿ, ಸಮಸ್ಯೆಯನ್ನು ಬಗೆಹರಿಸಿ ಎಂದು ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಡಿಯೋ ಒಂದನ್ನು NutBoult ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗುತ್ತಿದೆ. ನೈರ್ಮಲ್ಯದ ನಿರ್ಲಕ್ಷ್ಯದಿಂದ ಕಾಲೇಜೋಂದರಲ್ಲಿ ಕಾಣಿಸಿಕೊಂಡ ಹಾವುಗಳು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬೇಗ ಕ್ರಮ ತೆಗೆದುಕೊಳ್ಳಿ ಎಂಬ ಟೈಟಲ್ ನಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶೌಚಾಲಯದ ಟಾಯ್ಲೆಟ್ ಬೇಸಿನ್ ನಲ್ಲಿ ರಾಶಿ ರಾಶಿ ಹಾವು ಮರಿಗಳು ಒದ್ದಾಡುತ್ತಿರುವುದನ್ನು ಕಾಣಬಹುದಾಗಿದೆ.