ಇಂದಿನ ತಾಂತ್ರಿಕ ಯುಗದಲ್ಲೂ ಸಹ ಅನೇಕ ಕಡೆ ಮೂಲಭೂತ ಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ. ಇದೀಗ ಇದಕ್ಕೆ ಒಳ್ಳೆಯ ಉದಾಹರಣೆ ಎಂಬಂತೆ ಅನಾರೋಗ್ಯದಿಂದ ಮೃತಪಟ್ಟ ತಮ್ಮ ಇಬ್ಬರು ಮಕ್ಕಳ ಶವಗಳನ್ನು (Viral Video)ಸುಮಾರು 15 ಕಿ.ಮೀ ಹೆಗಲ ಮೇಲೆ ಎತ್ತುಕೊಂಡು ಸಾಗಿದ್ದಾರೆ. ಮಹಾರಾಷ್ಟ್ರ ಗಡ್ ಚಿರೋಲಿ ಎಂಬ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಮ್ಮಿಬ್ಬರು ಮಕ್ಕಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಿರುವ ಗಂಡ-ಹೆಂಡತಿಯ ವಿಡಿಯೋ (Viral Video) ನೋಡಿದ ಎಲ್ಲರ ಮನ ಕರಗಿಸುತ್ತಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಪಟ್ಟಿಗಾಂವ್ ಗ್ರಾಮದಲ್ಲಿ ಕಳೆದ ಸೆ.4 ರಂದು (Viral Video) ಅನಾರೋಗ್ಯದಿಂದ ಮೃತಪಟ್ಟ ತಮ್ಮ ಇಬ್ಬರ ಮಕ್ಕಳ ಶವಗಳನ್ನು ಹೊತ್ತುಕೊಂಡು ದಂಪತಿ 15 ಕಿ.ಮಿ ಸಾಗಿದ್ದಾರೆ. ದಂಪತಿಯ 3 ಹಾಗೂ 6 ವರ್ಷಗಳ ವಯಸ್ಸಿನ ಇಬ್ಬರು ಮಕ್ಕಳು ಸೆ.4 ರಂದು ಜ್ವರದಿಂದ ಬಳಲುತ್ತಿದ್ದರು. ಸರಿಯಾದ ಆರೋಗ್ಯ ಸೌಲಭ್ಯಗಳು ತಮ್ಮ ಗ್ರಾಮದಲ್ಲಿ ಇಲ್ಲದ ಕಾರಣದಿಂದ ಅವರ ಪೋಷಕರು ಮಕ್ಕಳನ್ನು ಸಾಂಪ್ರದಾಯಿಕ ಚಿಕಿತ್ಸೆ ಕೊಡಿಸಲು ಪಂಡಿತರ ಬಳಿ ಕರೆದುಕೊಂಡು ಹೋಗಿದ್ದರು. ಅಸ್ವಸ್ಥರಾದ ಮಕ್ಕಳಿಗೆ ಪಂಡಿತ ಕೆಲವೊಂದು ಗಿಡಮೂಲಿಕೆಗಳನ್ನು ಕೊಟ್ಟಿದ್ದರು. ಈ ಮೂಲಿಕೆಗಳನ್ನು ಸೇವಿಸಿದ ಮಕ್ಕಳ ಆರೋಗ್ಯ ಸ್ಥಿತಿ ಮತಷ್ಟು ಹದೆಗಟ್ಟಿದೆ. ಇದಾದ ಕೆಲಸವೇ ಗಂಟೆಗಳಲ್ಲಿ ಸಹೋದರರಿಬ್ಬರೂ ಉಸಿರಾಡಲು ಸಮಸ್ಯೆಗೆ ಸಿಲುಕಿದರು.
ವಿಡಿಯೋ ಇಲ್ಲಿದೆ ನೋಡಿ: https://x.com/VijayWadettiwar/status/1831548654382936147
ಇನ್ನೂ ಆ ಭಾಗದಲ್ಲಿರುವ ಆರೋಗ್ಯ ಕೇಂದ್ರಕ್ಕೆ ತಲುಪಲು ಸಂಪರ್ಕ ಕಲ್ಪಿಸುವ ರಸ್ತೆ ಸಹ ಸರಿಯಿಲ್ಲ ಜೊತೆಗೆ ಆ ಸಮಯದಲ್ಲಿ ಯಾವುದೇ ರೀತಿಯ ಆಂಬ್ಯುಲೆನ್ಸ್ ಸೇವೆ ಸಹ ಇರಲಿಲ್ಲ. ಆದ್ದರಿಂದ ತಮ್ಮ ಮಕ್ಕಳ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಜಿಮ್ಲಗಟ್ಟಾ ಎಂಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಸುಮಾರು 15 ಕಿ.ಮಿ. ಗಳವರೆಗೆ ನದಿಗಳು ಹಾಗೂ ಕೆಸರಿನ ದಾರಿಯಲ್ಲಿ ಸಾಗುತ್ತಾ ಓಡಿದ್ದಾರೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪುವಷ್ಟರಲ್ಲೆ ಮಕ್ಕಳು ಇಹಲೋಕ ತ್ಯೆಜಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿಂದ ಮಕ್ಕಳನ್ನು ಹೊತ್ತುಕೊಂಡು ಮನೆಗೆ ವಾಪಸ್ಸಾಗಲು 15 ಕಿ.ಮೀ. ಕಲ್ಲು ಮುಳ್ಳಿನ ಹಾದಿಯಲ್ಲೇ ನಡೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರೂ ನೋವಿನಲ್ಲಿದ್ದ ಪೋಷಕರು ಸಹಾಯವನ್ನು ನಿರಾಕರಿಸಿ ಕಾಲ್ನಡಿಗೆಯಲ್ಲಿಯೇ ಮನೆಗೆ ವಾಪಸ್ಸಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.