Sunday, August 31, 2025
HomeSpecialViral Video: ವಧು ಜೊತೆ ಡ್ಯಾನ್ಸ್ ಮಾಡು ಅಂದಿದಕ್ಕೆ ರೊಚ್ಚಿಗೆದ್ದ ವರ, ವರನ ಅವಾಂತರ ಕಂಡು...

Viral Video: ವಧು ಜೊತೆ ಡ್ಯಾನ್ಸ್ ಮಾಡು ಅಂದಿದಕ್ಕೆ ರೊಚ್ಚಿಗೆದ್ದ ವರ, ವರನ ಅವಾಂತರ ಕಂಡು ನೋಡುಗರು ಶಾಕ್….!

ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ಗಲಾಟೆಗಳು, ತಮಾಷೆಗಳು, ಎಡವಟ್ಟುಗಳು ನಡೆಯುತ್ತಿರುತ್ತವೆ. ಈ ಸಂಬಂಧ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. ವಧು ಜೊತೆಗೆ ಡ್ಯಾನ್ಸ್ ಆಡುವಂತೆ ಹೇಳಿದ್ದಕ್ಕೆ ಡ್ಯಾನ್ಸ್ ಆಡುತ್ತಾ ಸ್ಟೇಜ್ ಮೇಲೆ ಮದುಮಗಳ ಕೈ ಹಿಡಿದು ಎಳೆದಾಡಿ ರಂಪಾಟ (Viral Video) ಮಾಡಿದ್ದಾನೆ.

Marriage dance viral video 0

ಮದುವೆಗಳಲ್ಲಿ ನಡೆಯುವಂತಹ ಕೆಲವೊಂದು ದೃಶ್ಯಗಳು ಅತಿರೇಕ ಅಂತಾ ಅನ್ನಿಸಿದರೂ ಸಹ ಎಲ್ಲರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಅಂತಹುದೇ ಘಟನೆಯೊಂದು ನಡೆದಿದೆ. ಮದುವೆ ಮಂಟಪದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೆಲ್ಲರೂ ವರನನ್ನು ಚುಡಾಯಿಸುತ್ತಾ, ಹೆಂಡ್ತಿ ಜೊತೆ ಡ್ಯಾನ್ಸ್ ಮಾಡು ಎಂದು ಹೇಳಿದ್ದಾರೆ. (Viral Video) ಸಾಮಾನ್ಯವಾಗಿ ಮದುವೆಗಳಲ್ಲಿ ಈ ರೀತಿ ಹೇಳಿದಾಗ ನಾಚಿಕೆಯಿಂದ ಹಾಗೂ ಖುಷಿಯಿಂದ ಮದುಮಗಳ ಜೊತೆಗೆ ಸ್ಟೆಪ್ಸ್ ಹಾಕುತ್ತಾನೆ. ಆದರೆ ಈ ವರ ಮಾತ್ರ ಹೆಂಡತಿ ಜೊತೆ ಡ್ಯಾನ್ಸ್ ಮಾಡು ಅಂತಾ ಹೇಳಿದ್ದಕ್ಕೆ ವೇದಿಕೆಯ ಮೇಲೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಈ ಸಂಬಂಧ ವಿಡಿಯೋ (Viral Video) ಒಂದನ್ನು @ lavanyawritings ಹೆಸರಿನ ಎಕ್ಸ್‌ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/lavanyawritings/status/1843683381374267769

ಇನ್ನೊಮ್ಮೆ ಡ್ಯಾನ್ಸ್ ಮಾಡಲು ಹೇಳುತ್ತೀರಾ ಎಂಬ ಶೀರ್ಷಿಕೆಯ ಮೂಲಕ ವಿಡಿಯೋ (Viral Video) ಹಂಚಿಕೊಂಡಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೆಲ್ಲರೂ ಸೇರಿ ಹೆಂಡತಿ ಜೊತೆ ಡ್ಯಾನ್ಸ್ ಮಾಡು ಎಂದು ಹೇಳುತ್ತಾರೆ. ಹೀಗೆ ಡ್ಯಾನ್ಸ್ ಮಾಡುತ್ತಾ ಆತನಿಗೆ ಅದು (Viral Video) ಏನಾಯ್ತೋ ಗೊತ್ತಿಲ್ಲ. ವಧುವಿನ ಕೈ ಹಿಡಿದು ಎಳೆದಾಡಿ ವೇದಿಕೆಯ ಮೇಲೆ ರಂಪಾಟ ಮಾಡಿದ್ದಾನೆ. ಅ.8 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಸುಮಾರು (Viral Video) 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಜೊತೆಗೆ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಅನೇಕರು ಇದೊಂದು ಸ್ಕ್ರಿಪ್ಟೆಡ್ ವಿಡಿಯೋ (Viral Video) ಎಂತಲೂ, ವರ ಶಾರ್ಟ್ ಟೆಂಪರ್ಡ್ ಆಗಿರಬೇಕು ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular