Monday, June 30, 2025
HomeNationalViral Video: ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತ ವ್ಯಕ್ತಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಜೀವನ...

Viral Video: ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತ ವ್ಯಕ್ತಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಜೀವನ ಕಟ್ಟಿಕೊಂಡ ವ್ಯಕ್ತಿ….!

Viral Video – ಇಂದಿನ ಕಾಲದಲ್ಲಿ ಅನೇಕರು ದಷ್ಟಪುಷ್ಟವಾಗಿರುವವರು ಕೆಲಸ ಮಾಡಲು ಹಿಂದೇಟು ಹಾಕಿ, ಸೊಂಪಾದ ಜೀವನ ಸಾಗಿಸಲು ಬಯಸುತ್ತಾರೆ. ಕೆಲವರಂತೂ ಕೆಲಸದ ಕಳ್ಳರು ಎಂದೇ ಹೇಳಬಹುದಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಅಂಗವೈಕಲ್ಯತೆಯನ್ನು ಹೊಂದಿದ್ದರೂ ತಾನು ಯಾರಿಗೂ ಹೊರೆಯಾಗಬಾರದೆಂದು (Viral Video) ಛಲದಿಂದ ಕೆಲಸ ಮಾಡುತ್ತಿದ್ದಾನೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಎರಡೂ ಕೈಗಳಿಲ್ಲದ ವ್ಯಕ್ತಿ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ (Viral Video)ಕೆಲಸ ಮಾಡುತ್ತಿದ್ದಾರೆ.

ಯಾರ ಮೇಲೂ ಅವಲಂಬಿತರಾಗದೇ, ಸ್ವಂತ ಪ್ರತಿಭೆ, ಸ್ವಂತ ಶಕ್ತಿಯಿಂದ ಜೀವನ ಬದುಕಬೇಕೆಂದು ಬಯಸುತ್ತಾರೆ. ಆದರೆ ಕೆಲವರು ಮಾತ್ರ ತಮಗೆ ಕೈ ಕಾಲು ಚೆನ್ನಾಗಿದ್ದರೂ ಕೆಲಸ ಮಾಡಲು ಕಳ್ಳರಾಗಿರುತ್ತಾರೆ. ಇದೀಗ ಎರಡೂ ಕೈಗಳಿಲ್ಲದ ವ್ಯಕ್ತಿ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಅನೇಕರಿಗೆ (Viral Video) ಮಾದರಿಯಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಎರಡೂ ಕೈಗಳಿಲ್ಲದೇ ಸ್ಕೂಟರ್‍ ಓಡಿಸುವುದನ್ನು ನೋಡಬಹುದಾಗಿದೆ.  ಝೊಮ್ಯಾಟೊ ಟೀ ಶರ್ಟ್ ಹಾಕಿಕೊಂಡು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಈ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ವ್ಯಕ್ತಿಗೆ ಎರಡೂ ಕೈಗಳಿಲ್ಲ. ಆದರೂ ತನ್ನ ಸ್ಕೂಟರ್‍  ಹ್ಯಾಂಡಲ್ ಅನ್ನು ಕಬ್ಬಿಣದ ಅಂಚಿನ ಸಹಾಯದಿಂದ ನಿರ್ವಹಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು @Gulzar_sahab ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಬರೊಬ್ಬರಿ ಎರಡೂ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ನೆಟ್ಟಿಗರು ಸಹ ಮೆಚ್ಚುಗೆಯ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ನೆಪಗಳನ್ನು ಒಡ್ಡಿ ಕೆಲಸದಿಂದ ತಪ್ಪಿಸಿಕೊಳ್ಳುವಂತವರಿಗೆ ಈ ವಿಡಿಯೋ ಒಳ್ಳೆಯ ಪಾಠ ಕಲಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ ಅನೇಕರು ಆ ವಿಶೇಷ ಚೇತನ ವ್ಯಕ್ತಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular