Viral Video: ಟ್ರೈನ್ ನ ಕಿಟಕಿ ಕರ್ಟನ್ ಬಳಿ ಕದಲುತ್ತಾ ಏನೋ ಕಾಣಿಸಿದೆ, ಏನು ಅಂತಾ ನೋಡಿದಾಗ ಶಾಕ್ ಆದ ದಂಪತಿ….!

ಗೋವಾಗೆ ರೈಲಿನ ಮೂಲಕ ಪ್ರಯಾಣಿಸುತ್ತಿದ್ದ ವೃದ್ದ ದಂಪತಿಗೆ ಯಾರೂ ಊಹಿಸಿದ ಶಾಕ್ ಆಗಿದೆ. ವೃದ್ದ ದಂಪತಿ ಬುಕ್ ಮಾಡಿಕೊಂಡ ಲೋಯರ್‍ ಬರ್ತ್ ಕಿಟಿಕಿಯ ಕರ್ಟನ್ ಹಿಂಬಾಗ ಏನೋ ಕದಲುತ್ತಿದ್ದನ್ನು ಕಂದು ಹೋಗಿ ನೋಡಿದ್ದಾರೆ. ನೋಡಿದ ಕೂಡಲೇ ದಂಪತಿ ಶಾಕ್ ಆಗಿದ್ದಾರೆ. ಕರ್ಟನ್ ಹಿಂಬದಿಯಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ದಂಪತಿ ಶಾಕ್ ಆಗಿದ್ದಾರೆ. ಬಳಿಕ ಈ ಕುರಿತು ರೈಲ್ವೆ ಸಿಬ್ಬಂದಿಗೆ ತಿಳಿಸಿ ಸಹಾಯ ಪಡೆದಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ (Viral Video) ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಾರ್ಖಂಡ್ ನ ಜಸಿದಿಹ ನಿಂದ ಗೋವಾಗೆ ಸೆಕೆಂಡ್ ಎ.ಸಿ. ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ ವೃದ್ದ ದಂಪತಿಗೆ ಕಿಟಕಿ ಪರದೆ ಹಿಂದೆ ಏನೋ ಕದಲುತ್ತಿದ್ದನ್ನು ಗಮನಿಸಿದ್ದಾರೆ. ಬಳಿಕ ಅನುಮಾನದಿಂದ ಪರಿಶೀಲನೆ ಮಾಡಿದಾಗ ವಿಷಪೂರಿತವಾದ ಹಾವನ್ನು ನೋಡಿದ್ದಾರೆ. ಕೂಡಲೇ ತಮ್ಮ ಮಗನಿಗೆ ಪೋನ್ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ IRCTC ಸಿಬ್ಬಂದಿಯನ್ನು ಸಂಪರ್ಕ ಮಾಡಿದ್ದಾರೆ. ದಂಪತಿಯ ಮಗ ಟಿಕೆಕ್ ಬುಕ್ ಮಾಡಿದ ಬರ್ತ್, ರೈಲು ವಿವರಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಯ್ @IRCTCofficial @RailMinIndia ರೈಲ್ ನಂಬರ್‍ – 17322 ಜಸಿದಿಹ ಟು ವಾಸ್ಕೋಡಿ ಗಾಮಾ ನಲ್ಲಿ ಅ.21 ರಂದು AC2 ಟೈರ್‍ ಬರ್ತ್‌ನಲ್ಲಿ ವಿಷಪೂರಿತ ಹಾವೊಂದು ಕಾಣಿಸಿಕೊಂಡಿದೆ. ರೈಲಿನಲ್ಲಿ ಪ್ರಯಾಣಿಸಿದ ನಮ್ಮ ತಂದೆ-ತಾಯಿ ಪರವಾಗಿ ಈ ದೂರನ್ನು ನೀಡುತ್ತಿದ್ದೇನೆ. ದಯವಿಟ್ಟು ಈ ಸಂಬಂಧ ಕ್ರಮ ತೆಗೆದುಕೊಳ್ಳಿ, ಇದರ ವಿಡಿಯೋ ಸಹ ಹಂಚಿಕೊಳ್ಳುತ್ತಿದ್ದೇನೆ ಎಂದು ಅಂಕಿತ್ ಕುಮಾರ್‍ ಸಿನ್ಹಾ ಎಂಬ ವ್ಯಕ್ತಿ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click here

ಈ ಸಂಬಂಧ ರೈಲ್ವೆ ಸರ್ವಿಸ್ ಸಿಬ್ಬಂದಿ ಸಹ ತ್ವರಿತ ಗತಿಯಲ್ಲಿ ರಿಯಾಕ್ಟ್ ಆಗಿದ್ದಾರೆ. ರೈಲ್ವೆ ಸಿಬ್ಬಂದಿ ಅಲ್ಲಿಗೆ ಹೋಗಿ ವಿಷಪೂರಿತ ಹಾವನ್ನು ಹಿಡಿದು ರೈಲಿನಿಂದ ಹೊರಗೆ ತೆಗೆದಿದ್ದಾರೆ. ಇನ್ನೂ ಇದೇ ರೀತಿಯ ಅನೇಕ ಬಾರಿ ರೈಲ್ ನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಈ ಸಂಬಂಧ ಕೆಲವರು ವಿಡಿಯೋಗಳನ್ನು, ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಕಳೆದ ಸೆಪ್ಟೆಂಬರ್‍ ಮಾಹೆಯಲ್ಲೂ ಗರಿಭ್ ರಥ್ ಎಕ್ಸ್ ಪ್ರೆಸ್ ರೈಲಿನಲ್ಲಿ ಐದು ಅಡಿಯ ಹಾವು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾನ್ನಾಗಿ ಗುರಿಪಡಿಸಿತ್ತು.

Leave a Reply

Your email address will not be published. Required fields are marked *

Next Post

Viral Video: ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತ ವ್ಯಕ್ತಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಜೀವನ ಕಟ್ಟಿಕೊಂಡ ವ್ಯಕ್ತಿ….!

Sun Oct 27 , 2024
Viral Video – ಇಂದಿನ ಕಾಲದಲ್ಲಿ ಅನೇಕರು ದಷ್ಟಪುಷ್ಟವಾಗಿರುವವರು ಕೆಲಸ ಮಾಡಲು ಹಿಂದೇಟು ಹಾಕಿ, ಸೊಂಪಾದ ಜೀವನ ಸಾಗಿಸಲು ಬಯಸುತ್ತಾರೆ. ಕೆಲವರಂತೂ ಕೆಲಸದ ಕಳ್ಳರು ಎಂದೇ ಹೇಳಬಹುದಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಅಂಗವೈಕಲ್ಯತೆಯನ್ನು ಹೊಂದಿದ್ದರೂ ತಾನು ಯಾರಿಗೂ ಹೊರೆಯಾಗಬಾರದೆಂದು (Viral Video) ಛಲದಿಂದ ಕೆಲಸ ಮಾಡುತ್ತಿದ್ದಾನೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಎರಡೂ ಕೈಗಳಿಲ್ಲದ ವ್ಯಕ್ತಿ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ (Viral […]
physically challenged man zomato delivery
error: Content is protected !!