HomeNationalViral Video: ಫ್ರೆಶರ್ಸ್ ಡೇ ಗೆ ವಿದ್ಯಾರ್ಥಿನಿಯರೊಂದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಹೆಚ್.ಓ.ಡಿ….!

Viral Video: ಫ್ರೆಶರ್ಸ್ ಡೇ ಗೆ ವಿದ್ಯಾರ್ಥಿನಿಯರೊಂದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಹೆಚ್.ಓ.ಡಿ….!

ಸಾಮಾನ್ಯವಾಗಿ ಕಾಲೇಜುಗಳಲ್ಲಿ ಫ್ರೆಶರ್ಸ್ ಡೇ, ಸೆಂಡ್ ಆಫ್ ಡೇ ಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುತ್ತದೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. ಕಾಲೇಜೊಂದರ ಫ್ರೆಶರ್ಸ್ ಡೇ ಕಾರ್ಯಕ್ರಮದಂದು ವಿದ್ಯಾರ್ಥಿನಿಯರೊಂದಿಗೆ ಕಾಲೇಜಿನ ಹೆಚ್.ಒ.ಡಿ ಸಹ ಭರ್ಜರಿಯಾಗಿ (Viral Video) ನೃತ್ಯ ಮಾಡಿದ್ದು,  ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

hod dance in kerala college freshers day 0

ಕೇರಳದ ಕಾಲೇಜೊಂದರಲ್ಲಿ ಈ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಸಾಮಾನ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ ಓರ್ವ ಫೇವರಿಟ್ ಶಿಕ್ಷಕ ಇರುತ್ತಾರೆ. ಅದೇ ರೀತಿ ಶಿಕ್ಷಕರಿಗೂ ಸಹ ವಿದ್ಯಾರ್ಥಿಗಳೊಂದಿಗೆ ಉತ್ತಮವಾದ ಬಂಧವೊಂದು ಸೃಷ್ಟಿಯಾಗಿರುತ್ತದೆ. ಇದೀಗ ಕೇರಳದ ಕಾಲೇಜೊಂದರಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನೀಯರು ಖುಷಿಯಿಂದ ಸಂಭ್ರಮಿಸುತ್ತಿರುತ್ತಾರೆ. ಕಾರ್ಯಕ್ರಮದ ನಿಮಿತ್ತ ಹಲವು ಹಾಡುಗಳಿಗೆ ಭರ್ಜರಿಯಾಗಿ ನೃತ್ಯ ಮಾಡುತ್ತಿರುತ್ತಾರೆ. ಅವರ ಜೊತೆಗೆ ಕಾಲೇಜಿನ HOD ಸಹ ನೃತ್ಯ ಮಾಡಿರುತ್ತಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ: Click Here

ಈ ಸಂಬಂಧ ವಿಡಿಯೋ ಒಂದನ್ನು @amalvmusic ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕಾಲೇಜಿನ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ನಡೆದ ಡ್ಯಾನ್ಸ್ ಕಾಣಿಸುತ್ತದೆ. ಕಾಲೇಜಿನ ವಿದ್ಯಾರ್ಥಿನಿಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಡ್ಯಾನ್ಸ್ ಮಧ್ಯದಲ್ಲಿ ಕಾಲೇಜಿನ HOD ಸಹ ನೃತ್ಯ ಮಾಡುತ್ತಾರೆ. ಈ ನೃತ್ಯ ನೋಡಿದ ಇತರೆ ವಿದ್ಯಾರ್ಥಿಗಳು ಚಪ್ಪಾಳೆ, ಕೇಕೆ, ಶಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ. HOD ನೃತ್ಯ ನೋಡಿದ ವಿದ್ಯಾರ್ಥಿಗಳು ಪುಲ್ ಫಿದಾ ಆಗಿದ್ದಾರೆ. 27 ಸೆಕೆಂಡ್ ಗಳಿರುವ ಈ ವಿಡಿಯೋ ಲಕ್ಷಾಂತರ ವ್ಯೂಸ್ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular