ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಲಾಲ್ ಬಾಗ್ (Lalabagh) ಸಹ ಒಂದಾಗಿದ್ದು, ಪ್ರತಿನಿತ್ಯ ಈ ಸ್ಥಳಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ, ಅದರಲ್ಲೂ ವೀಕೆಂಡ್ ಹಾಗೂ ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಾಗುತ್ತದೆ. ಲಾಲ್ ಬಾಗ್ ಅನ್ನು ಸಸ್ಯಕಾಶಿ, ಕೆಂಪು ತೋಟ ಎಂದೇ ಕರೆಯಲಾಗುತ್ತದೆ. ಇದೀಗ ಈ (Lalabagh) ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಪ್ರವೇಶ ಶುಲ್ಕ ಸಹ ವಿಧಿಸಲಾಗುತ್ತಿದ್ದು, ಇದೀಗ ಶುಲ್ಕ ಏರಿಕೆಯಾಗಿದೆ. (Lalabagh) ಸಾರ್ವಜನಿಕ ಪ್ರವೇಶ ಶುಲ್ಕ ಹಾಗೂ ವಾಹನಗಳ ನಿಲುಗಡೆ ಶುಲ್ಕ ಸಹ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ಸಸ್ಯ ಕಾಶಿ, ಕೆಂಪು ತೋಟ ಎಂದೇ ಕರೆಯಲಾಗುವ ಲಾಲ್ ಬಾಗ್ (Lalabagh) ಎಂಟ್ರಿ ಇದೀಗ ಕೊಂಚ ದುಬಾರಿಯಾಗಲಿದೆ. ತೋಟಗಾರಿಕೆ ಇಲಾಖೆಯಿಂದ ನಿರ್ವಹಿಸಲಾಗುವ ಸಸ್ಯಕಾಶಿ (Lalabagh) ಲಾಲ್ ಬಾಗ್ ಗೆ ಸಾರ್ವಜನಿಕ ಪ್ರವೇಶ ಹಾಗೂ ವಾಹನ ನಿಲುಗಡೆ ಶುಲ್ಕ ಏರಿಕೆಯಾಗಿದೆ. ವಯಸ್ಕರಿಗೆ 50 ರೂಪಾಯಿ ಹಾಗೂ ಮಕ್ಕಳಿಗೆ 20 ರೂಪಾಯಿ ಪ್ರವೇಶ ದರವನ್ನು ನಿಗಧಿಪಡಿಸಲಾಗಿದೆ. ಕಳೆದ 2018 ರಲ್ಲಿ ನಿಗಧಿಪಡಿಸಿದ ದರವನ್ನು ಇದೀಗ ಆರು ವರ್ಷಗಳ ಬಳಿಕ ಏರಿಕೆ ಮಾಡಲಾಗಿದೆ. ಈ ಹಿಂದೆ ವಯಸ್ಕರಿಗೆ 30 ರೂಪಾಯಿ ಹಾಗೂ ಮಕ್ಕಳಿಗೆ 10 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗುತ್ತಿತ್ತು. (Lalabagh) ಇದೀಗ ವಯಸ್ಕರಿಗೆ 50, ಮಕ್ಕಳಿಗೆ 20 ರೂಪಾಯಿ ಪ್ರವೇಶ ಶುಲ್ಕವನ್ನು ಏರಿಕೆ ಮಾಡಿದೆ.

ಅದೇ ರೀತಿಯ ವಾಹನಗಳಿಗೂ ಸಹ ದರ ಏರಿಕೆ (Lalabagh) ಮಾಡಲಾಗಿದೆ. ಕಾರು ನಿಲುಗಡೆಗೆ ಈ ಹಿಂದೆ 40 ರೂಪಾಯಿ ಇತ್ತು, ಇದೀಗ 60 ರೂಪಾಯಿಯಾಗಿದೆ. ಟೆಂಪೋ ಟ್ರಾವೆಲ್ 80 ರೂಪಾಯಿಯಿಂದ 100 ರೂಪಾಯಿಗೆ ಬಸ್ ಗಳಿಗೆ 120 ರಿಂದ 200 ರೂಪಾಯಿಗೆ ಏರಿಕೆ ಮಾಡಲಾಗಿದೆ. ಆದರೆ ದ್ವಿಚಕ್ರ (Lalabagh)ವಾಹನ ನಿಲುಗಡೆಯ ದರ ಯಥಾಸ್ಥಿತಿಯಿದೆ. ನೀರಿನ ನಿರ್ವಹಣೆ, ನಿರ್ವಹಣಾ ಕಾರ್ಯ, ಭದ್ರತಾ ವ್ಯವಸ್ಥೆ, ವಿದ್ಯುತ್ ಬಳಕೆಯ ವೆಚ್ಚ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿರುವುದರ ಜೊತೆಗೆ ಲಾಲ್ ಬಾಗ್ ಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, ಉದ್ಯಾನವನದ (Lalabagh) ಸ್ವಚ್ಚತಾ ಕಾರ್ಯ ಸಹ ಅಧಿಕವಾಗುತ್ತಿದೆ. ಈ ಕಾರಣದಿಂದ ದರ ಏರಿಕೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.