Viral Video : ಅಮ್ಮನ ಬೈಗುಳಕ್ಕೆ ಬೇಸತ್ತ ಮಗು; ಶ್ವಾನದ ಹೆಗಲ ಮೇಲೆ ತಲೆಯಿಟ್ಟು ಕಣ್ಣೀರು! ಪ್ರಾಣಿ-ಮಗುವಿನ ಈ ಅಪೂರ್ವ ಪ್ರೀತಿಗೆ ನೆಟ್ಟಿಗರು ಫಿದಾ

ಮಕ್ಕಳು ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಯಾವಾಗಲೂ ವಿಶೇಷ. ಮಾತು ಬಾರದ ಮೂಕಜೀವಿಗಳು ಮನುಷ್ಯನ ಭಾವನೆಗಳನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತವೆ ಎಂಬುದಕ್ಕೆ ಈ ಇತ್ತೀಚಿನ ವೈರಲ್ (Viral Video) ವಿಡಿಯೋವೇ ಸಾಕ್ಷಿ. ಅಮ್ಮನಿಂದ ಬೈಗುಳ ತಿಂದ ಪುಟ್ಟ ಬಾಲಕಿಯೊಬ್ಬಳು, ತನ್ನ ನೋವನ್ನು ಹಂಚಿಕೊಳ್ಳಲು ಆರಿಸಿಕೊಂಡಿದ್ದು ಮಾತ್ರ ತನ್ನ ಮನೆಯ ಮುದ್ದಿನ ಶ್ವಾನವನ್ನು! ಹೌದು, ಅಮ್ಮನ ವಿರುದ್ಧ ದೂರು ನೀಡುತ್ತಾ ಅಳುತ್ತಿದ್ದ ಪುಟಾಣಿಯನ್ನು ಶ್ವಾನ ಸಮಾಧಾನ ಪಡಿಸಿದ ರೀತಿ ಈಗ ಇಡೀ ಇಂಟರ್ನೆಟ್ ಲೋಕದ ಮನಗೆದ್ದಿದೆ.

Viral video of a little girl crying and sharing her pain with her pet dog while the dog comforts her at home

Viral Video – ಅಮ್ಮನ ಬೈಗುಳ… ಶ್ವಾನದ ಸಮಾಧಾನ!

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಪುಟ್ಟ ಹುಡುಗಿಯೊಬ್ಬಳು ತನ್ನ ಅಮ್ಮನಿಂದ ಬೈಗುಳ ತಿಂದು ಬೇಸರಗೊಂಡಿದ್ದಾಳೆ. ಅಳುತ್ತಾ ಬಂದು ಮನೆಯ ಮುದ್ದಿನ ಶ್ವಾನದ ಮುಂದೆ ಕುಳಿತು ತನ್ನ ನೋವನ್ನು ತೋಡಿಕೊಳ್ಳುತ್ತಾಳೆ. ಅಮ್ಮ ತನ್ನನ್ನು ಹೇಗೆ ಬೈದರು ಎಂದು ಮಗು ದೂರು ಹೇಳುತ್ತಿದ್ದರೆ, ಅದನ್ನು ಕೇಳಿಸಿಕೊಂಡ ಶ್ವಾನ ಮಾಡಿದ ಕೆಲಸ ಮಾತ್ರ ಎಲ್ಲರ ಹೃದಯ ಗೆಲ್ಲುವಂತಿದೆ. ಆ ಮುಗ್ಧ ಮಗು ಅಳುತ್ತಿರುವುದನ್ನು ಕಂಡ ಶ್ವಾನವು, ತನ್ನ ಪುಟ್ಟ ಗೆಳತಿಯನ್ನು ಅಪ್ಪಿಕೊಂಡು ಸಮಾಧಾನ ಪಡಿಸಿದೆ. “ನಾನಿದ್ದೇನೆ ಬಿಡು” ಎನ್ನುವಂತೆ ಶ್ವಾನವು ಮಗುವಿನ ಮೇಲೆ ಕೈಹಾಕಿ ಪ್ರೀತಿ ತೋರಿಸುವುದು ನೆಟ್ಟಿಗರ ಕಣ್ಣಾಲಿಗಳು ತೇವವಾಗುವಂತೆ ಮಾಡಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ‘ಚೀನಾ ಡೈರೀಸ್’ ವಿಡಿಯೋ

ಈ ಹೃದಯಸ್ಪರ್ಶಿ ದೃಶ್ಯವನ್ನು ಚೀನಾ ಡೈರೀಸ್ 2025 (chinadairies) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಶ್ವಾನ ಮತ್ತು ಮಗುವಿನ ನಡುವಿನ ಈ ನಿಷ್ಕಲ್ಮಶ (Viral Video) ಬಾಂಧವ್ಯದ ಕ್ಲಿಪ್ ಇದೀಗ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Viral video of a little girl crying and sharing her pain with her pet dog while the dog comforts her at home

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ವಿಡಿಯೋ (Viral Video) ನೋಡಿದ ನೆಟ್ಟಿಗರು ಈ ಜೋಡಿಯ ಮುಗ್ಧತೆಗೆ ಫಿದಾ ಆಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Leave a Comment

Your email address will not be published. Required fields are marked *

Scroll to Top