ಕೆಲವೊಂದು ಪ್ರಕರಣಗಳಲ್ಲಿ ಕಳ್ಳತನ ಮಾಡಿದಂತಹವರನ್ನು ಕಂಬಕ್ಕೆ ಕಟ್ಟಿ ಥಳಿಸುವಂತಹ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. ಕೇವಲ 10 ರೂಪಾಯಿ ಕದ್ದಿದ್ದಾನೆ ಎಂಬ ಶಂಕೆಯಿಂದ 11 ವರ್ಷದ ಬಾಲಕನನ್ನು ಕ್ರೂರಿಗಳ ಗುಂಪೊಂದು (Viral Video) ಸೇರಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆ ಗುಂಪಿನ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತದೆ.

ಪ್ರತಾಪಗಢದ ಚಿಲ್ಬಿಲಾ ಎಂಬ ಪ್ರದೇಶದಲ್ಲಿ ಈ ಅಮಾನುಷ ಘಟನೆ ನಡೆದಿದೆ. 11 ವರ್ಷದ ಬಾಲಕನೋರ್ವ ಹತ್ತು ರೂಪಾಯಿ ಕದ್ದ ಎಂಬ ಶಂಕೆಯಿಂದ ನಾಲ್ಕೈದು ಕ್ರೂರಿಗಳು ಸೇರಿಕೊಂಡು ಬಾಲಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಗುವನ್ನು ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವಿಡಿಯೋ ನೋಡಿದರೇ ಎಂತಹ ವ್ಯಕ್ತಿಗಳಿಗಾದರೂ ಕೋಪ ಬಂದೇ ಬರುತ್ತದೆ ಎಂದು ಹೇಳಬಹುದಾಗಿದೆ. ವಿಡಿಯೋ ನೋಡಿದ ಬಹುತೇಕ ಎಲ್ಲರೂ ಈ ಘಟನೆ ಮನಕುಲವೇ ತಲೆತಗ್ಗಿಸುವಂತ ಘಟನೆ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/GulzarSiddiqui_/status/1845128306678460698
ಇನ್ನೂ ಈ ವಿಡಿಯೋ @GulzarSiddiqui_ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ವಿಡಿಯೋದಲ್ಲಿ 11 ವರ್ಷದ ಬಾಲಕ ಕ್ರೂರಿಗಳ ಒದೆಗಳನ್ನು ತಾಳಲಾರದೆ ನರಳುತ್ತಿದ್ದಾನೆ, ತಾನು ಕದ್ದಿಲ್ಲ ಅಂತಾ ಕೂಗಿಕೊಳ್ಳುತ್ತಿದ್ದರೂ ಬಾಲಕನಿಗೆ ಕಾಲಿನಿಂದ ಒದ್ದು, ಆತನ ಮರ್ಮಾಂಗಕ್ಕೆ ದೊಣ್ಣೆಯಿಂದ ಹೊಡೆದಿದ್ದಾರೆ. ಹಲ್ಲೆಗೆ ಒಳಗಾದ ಅಪ್ರಾಪ್ತ ಬಾಲಕನನ್ನು ನಂದು ಎಂದು ಗುರ್ತಿಸಲಾಗಿದೆ. ಇದಕ್ಕೂ ಮೊದಲು ಆರೋಪಿಗಳು ಗಣೇಶ್ ಪಂದಳದಲ್ಲಿ ಬಾಲಕನನ್ನು ಕ್ರೂರವಾಗಿ ಥಳಿಸಿದ್ದಾರೆ. ಬಳಿಕ ಶ್ರೀ ಅರಮನೆಯ ತಮ್ಮ ಮದುವೆ ಮಂಟಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ಇದೊಂದು ಹಳೆಯ ವಿಡಿಯೋ ಆಗಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.