HomeNationalViral Video: ಲವರ್ ನೋಡೊಕೆ ಬುರ್ಖಾ ಧರಿಸಿ ಬಂದ ಯುವಕ, ಮಕ್ಕಳ ಕಳ್ಳ ಎಂದು ಧರ್ಮದೇಟು...

Viral Video: ಲವರ್ ನೋಡೊಕೆ ಬುರ್ಖಾ ಧರಿಸಿ ಬಂದ ಯುವಕ, ಮಕ್ಕಳ ಕಳ್ಳ ಎಂದು ಧರ್ಮದೇಟು ಕೊಟ್ಟ ಜನತೆ…!

ಅನಾದಿ ಕಾಲದಿಂದಲೂ ಪ್ರೀತಿಯನ್ನು ಉಳಿಸಿಕೊಳ್ಳಲು ವಿವಿಧ ರೀತಿಯ ಕಷ್ಟಗಳನ್ನು ಪಡುತ್ತಾರೆ. ತಾನು ಪ್ರೀತಿಸಿದ ಯುವತಿಗಾಗಿ ಏನು ಬೇಕಾದರೂ ಮಾಡೋಕೆ ಯುವಕ ರೆಡಿಯಾಗುತ್ತಾನೆ. ಕೆಲವೊಂದು ಕಡೆ ಪ್ರೀತಿಗಾಗಿ ಅನೇಕ ಅಹಿತಕರ ಘಟನೆಗಳೂ ಸಹ ನಡೆದಿದೆ. ಇದೀಗ ಯುವಕನೋರ್ವ ತನ್ನ ಪ್ರೇಯಸಿಯನ್ನು ಭೇಟಿಯಾಗುವ ನಿಟ್ಟಿನಲ್ಲಿ ಬುರ್ಖಾ ಧರಿಸಿ ಬಂದಿದ್ದಾನೆ. ಆದರೆ ಈ ಯುವಕ ಅಲ್ಲಿನ ಸ್ಥಳೀಯರೊಂದಿಗೆ (Viral Video) ಸಿಕ್ಕಿಬಿದ್ದಿದ್ದು, ಆತನನ್ನು ಮಕ್ಕಳ ಕಳ್ಳ ಅಂತಾ ಹೇಳಿ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

boy came to meet lover wearing burqa
boy came to meet lover wearing burqa

ಬುರ್ಖಾ ಧರಿಸಿ ಪ್ರೇಯಸಿಯನ್ನು ನೋಡಲು ಬಂದ ಪ್ರೇಮಿ:

ಇಂದಿನ ಕಾಲದಲ್ಲಿ ಪ್ರೀತಿ ಎಂಬುದು ಎಲ್ಲರಲ್ಲೂ ಕಾಣುತ್ತದೆ. ಅಂದರೇ ಹದಿಹರೆಯದವರಿಂದ ಹಿಡಿದು ವಯೋವೃದ್ದರವರೆಗೂ ಪ್ರೇಮಾಂಕುರವಾದಂತಹ ಘಟನೆಗಳ ಬಗ್ಗೆ ಕೇಳಿದ್ದೇವೆ. ಜೊತೆಗೆ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ವಿವಿಧ ರೀತಿಯ ಸರ್ಕಸ್ ಗಳನ್ನು ಸಹ ಮಾಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಯುವಕನೋರ್ವ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿದ್ದಾನೆ. ಆದರೆ ಆತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಸ್ಥಳೀಯರು ಆತನನ್ನು ಕಳ್ಳ ಎಂದು ಭಾವಿಸಿ ಸರಿಯಾಗಿಯೇ ಥಳಿಸಿದ್ದಾರೆ. ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ.

ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಯುವಕನೋರ್ವ ಬುರ್ಖಾ ಧರಿಸಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದಾನೆ. ಈ ಘಟನೆ ಕಳೆದ ಆ.30 ಶನಿವಾರದಂದು ನಡೆದಿದೆ. ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದ ಯುವಕ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಆತನ ಮುಖ ಗವಸು ತೆಗೆದಿದ್ದಾರೆ. ಬುರ್ಖಾದಲ್ಲಿರೋದು ಯುವತಿಯಲ್ಲ ಯುವಕ ಎಂದು ತಿಳಿಯುತ್ತಿದ್ದಂತೆ ಆತ ಮಕ್ಕಳ ಕಳ್ಳ ಅಂತಾ ಭಾವಿಸಿ ಯುವಕನಿಗೆ ಸರಿಯಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಡಿಯೋ ವನ್ನು ಸಚಿನ್ ಗುಪ್ತಾ (Sachin Gupta) ಎಂಬುವವರು ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://x.com/SachinGuptaUP/status/1830447613952278966

ಮಕ್ಕಳ ಕಳ್ಳಾ ಅಂತಾ ಸಿಕ್ಕಿಬಿದ್ದ ಪ್ರೇಮಿಗೆ ಬಿತ್ತು ಧರ್ಮದೇಟು:

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಯುವಕನೋರ್ವ ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬರುತ್ತಾನೆ. ಆದರೆ ಅಲ್ಲಿನ ಸ್ಥಳೀಯರಿಗೆ ಸಿಕ್ಕಿ ಬೀಳುತ್ತಾನೆ. ಆ ಯುವಕನ ಚಲನ ವಲನಗಳನ್ನು ಗಮನಿಸಿದ ಸ್ಥಳೀಯರು ಆತ ಮಕ್ಕಳ ಕಳ್ಳನಿರಬಹುದು ಎಂದು ಅನುಮಾನಿಸಿದ್ದಾರೆ. ಬಳಿಕ ಆಧಾರ್‍ ಕಾರ್ಡ್ ತೋರಿಸುವಂತೆ ಕೇಳದ್ದಾರೆ. ಆತ ಆಧಾರ್ ಕಾರ್ಡ್ ತೋರಿಸದೇ ಇದ್ದಾಗ ಆತನ ಮುಖ ಗವಸು ತೆಗೆಸಿ ನೋಡಿದ್ದಾರೆ. ಶಾಕ್ ಆದ ಜನತೆ ಆತ ಮಕ್ಕಳ ಕಳ್ಳ ಎಂದು ಭಾವಿಸಿ ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ. ವಿಚಾರಣೆಯ ವೇಳೆ ಆ ಯುವಕ ತಾನು ಬುರ್ಖಾ ಧರಿಸಿಕೊಂಡು ಬಂದಿದ್ದು ತನ್ನ ಪ್ರೇಯಸಿಯನ್ನು ಭೇಟಿಯಾಗಲು ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular