Viral Video – ಹೆತ್ತವರನ್ನು ಪೂಜಿಸುವ ಪದ್ಧತಿಯಿದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೆ ವಿರುದ್ಧವಾದ ಘಟನೆಗಳೇ ಹೆಚ್ಚು ನಡೆಯುತ್ತಿವೆ. ತಮ್ಮನ್ನು ಸಾಕಿದ, ಬೆಳೆಸಿದ ಹಿರಿಯರನ್ನು ನಿರ್ದಾಕ್ಷಿಣ್ಯವಾಗಿ ಬೀದಿಗೆ ತಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಒಂದು ಘಟನೆ ನಡೆದಿದೆ. ವೃದ್ಧ ತಾಯಿಯೊಬ್ಬರನ್ನು ಮಕ್ಕಳೇ ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

Viral Video – ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ನಿಜಕ್ಕೂ ಮನಕಲುಕುವಂತಿದೆ. ವೃದ್ಧ ತಾಯಿಯೊಬ್ಬರು ತನ್ನನ್ನು ಹೀಗೆ ಬಿಟ್ಟು ಹೋಗಬೇಡಿ ಎಂದು ಮಗ-ಸೊಸೆ ಅಥವಾ ಮಗಳು-ಅಳಿಯನಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಿರುವುದು ಆ ವಿಡಿಯೋದಲ್ಲಿದೆ. ದುಷ್ಕರ್ಮಿಗಳು ವೃದ್ಧ ತಾಯಿಯನ್ನು ಬೆಡ್‌ಶೀಟ್‌ನಲ್ಲಿ ಹೊತ್ತು ತಂದು ರಸ್ತೆಯ ಮಧ್ಯಭಾಗದಲ್ಲಿ ಬಿಟ್ಟು ಹೋಗಿದ್ದಾರೆ. ಇದು ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ಮಾಹಿತಿ ಇಲ್ಲವಾದರೂ, ಈ ಕ್ರೂರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಪರಿಸ್ಥಿತಿ ತಮಗೂ ಬಂದಾಗ ಮಕ್ಕಳು ಹೀಗೆಯೇ ಮಾಡಿದರೆ ಎಂಬ ಯೋಚನೆ ಅವರಿಗೆ ಒಂದು ಕ್ಷಣವೂ ಬಂದಿಲ್ಲವೇ ಎಂದು ಆಶ್ಚರ್ಯವಾಗುತ್ತದೆ. Read this also : ಮಗುವನ್ನು ಎದೆಗೆ ಅಪ್ಪಿ ಆಟೋ ಓಡಿಸುತ್ತಿರುವ ಬೆಂಗಳೂರು ಆಟೋ ಡ್ರೈವರ್, ವಿಡಿಯೋ ವೈರಲ್..!
Viral Video – ಹಿರಿಯರ ನಿರ್ಲಕ್ಷ್ಯದ ಹಿಂದಿನ ಕಠಿಣ ವಾಸ್ತವ
ಹಿಂದಿನ ದಿನಗಳಲ್ಲಿ ಗಂಡುಮಕ್ಕಳನ್ನು ಪಡೆಯಲು ದೇವರುಗಳಿಗೆ ಹರಕೆ ಹೊರುತ್ತಿದ್ದ ಪೋಷಕರು ಹೆಚ್ಚಾಗಿದ್ದರು. ಕೊನೆಯ ದಿನಗಳಲ್ಲಿ ತುಳಸಿ ನೀರು ಬಿಡಲು ಗಂಡುಮಕ್ಕಳೇ ಬೇಕು, ವಂಶವನ್ನು ಮುಂದುವರಿಸಲು ಕುಲಪುತ್ರರೇ ಬೇಕು ಎಂದು ಭಾವಿಸಿದ್ದರು. ಆದರೆ, ಅದೇ ‘ಕುಲಪುತ್ರರು’ ಇಂದು ಪೋಷಕರನ್ನು ರಸ್ತೆಯಲ್ಲಿ ಬಿಟ್ಟು ಹೋಗುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಈ ಮನಸ್ಥಿತಿಯಿಂದಾಗಿಯೇ ಇಂದು ವೃದ್ಧಾಶ್ರಮಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ವೃದ್ಧಾಶ್ರಮಗಳಲ್ಲಿ ಮಾತನಾಡಿಸಿದಾಗ ಅನೇಕರು ತಾವು ಕಷ್ಟಪಟ್ಟು ಗಂಡುಮಗನನ್ನು ಪಡೆದಿದ್ದೇ ತಪ್ಪಾಯಿತು ಎಂದು ಅಳುತ್ತಿರುತ್ತಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
Viral Video – ವೃದ್ಧಾಶ್ರಮಕ್ಕಾದರೂ ಸೇರಿಸಬಹುದಲ್ಲ?
ತಮ್ಮ ಹಿರಿಯರನ್ನು ರಸ್ತೆಯಲ್ಲಿ ನಿರ್ದಾಕ್ಷಿಣ್ಯವಾಗಿ ಬಿಟ್ಟು ಹೋಗುವ ಬದಲು, ಕನಿಷ್ಠ ವೃದ್ಧಾಶ್ರಮಕ್ಕಾದರೂ ಸೇರಿಸಬಹುದಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ವೃದ್ಧಾಶ್ರಮದ ಖರ್ಚು ವೆಚ್ಚಗಳನ್ನು ಭರಿಸಲು ಅನೇಕ ‘ಕುಲಪುತ್ರರಿಗೆ’ ಕಷ್ಟವಾಗುತ್ತದೆ. ಹಣ ಉಳಿಸುವ ಸಲುವಾಗಿ ಮಾನವೀಯತೆಯನ್ನು ಮರೆತು ಇಂತಹ ನೀಚ ಕೃತ್ಯಗಳಿಗೆ ಮುಂದಾಗುತ್ತಾರೆ. ಹಲವು ಪ್ರಕರಣಗಳು ಸಿಸಿಟಿವಿಯಲ್ಲಿ ಸೆರೆಯಾದರೂ, ಇನ್ನು ಎಷ್ಟೋ ವೃದ್ಧರು ಅನಾಥ ಶವಗಳಾಗಿ ರಸ್ತೆಯಲ್ಲಿ ಬೀದಿಗೆ ಬಂದಿದ್ದಾರೆ ಎಂದು ಅಂದಾಜಿಸುವುದು ಕಷ್ಟ.
