Viral News- ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಸಾವು ಅನ್ನೋದು ಖಚಿತವಾಗಿರುತ್ತದೆ. ಹುಟ್ಟು ಖಚಿತ ಸಾವು ನಿಶ್ಚಿತ ಎಂದೇ ಹೇಳಲಾಗುತ್ತದೆ. ಇಲ್ಲೊಬ್ಬ ಯುವತಿ ಸಾವಿನ ನಂತರ ಏನಾಗುತ್ತದೆ ಎಂಬುದನ್ನು ಇಂಟರ್ ನೆಟ್ ನಲ್ಲಿ ಹುಡುಕಿದ್ದಾಳೆ. ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುರೋಪಿಯನ್ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿದ ಈಕೆ ಸಾವಿನ ಕುರಿತು ಸಂಶೋಧನೆ ನಡೆಸುತ್ತಿದ್ದಳಂತೆ. ಈ ಕಾರಣದಿಂದ ಸುಮಾರು ದಿನಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಸಹ ಮಾಡುತ್ತಿದ್ದಳು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಅಂದಹಾಗೆ ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮೃತ ಯುವತಿ 17 ವರ್ಷ ವಯಸ್ಸಿನವಳಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ನಾಗ್ಪುರದ ಆರ್.ಬಿ.ಐ ನ ಪ್ರಾದೇಶಿಕ ನಿರ್ದೇಶಕರ ಏಕೈಕ ಮಗಳು ಎಂದು ಗುರ್ತಿಸಲಾಗಿದೆ. ಮೃತ ಯುವತಿ ವಿದೇಶಿ ಸಂಸ್ಕೃತಿ ಹಾಗೂ ಸಾವಿನ ಕುರಿತು ಸಂಶೋಧನೆ ಮಾಡಲು ಆಗಾಗ ಅವುಗಳ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತಿದ್ದಳಂತೆ. ನಂತರ ಆಕೆ ಆನ್‌ಲೈನ್‌ನಲ್ಲಿ ಚಾಕುವೊಂದನ್ನು ಖರೀದಿಸಿದ್ದಳಂತೆ. ಮೊದಲು ಆ ಚಾಕುವಿನಿಂದ ತನ್ನ ಮಣಿಕಟ್ಟಿಗೆ ಕೊಯ್ದುಕೊಂಡಿದ್ದಾಳೆ, ನಂತರ ಕೈಯಲ್ಲಿ ಅಡ್ಡಗುರುತುಗಳು ಪತ್ತೆಯಾಗಿದ್ದು ಎಂದು ಪೊಲೀಸರು ಹೇಳಿದ್ದಾರೆ. ಮಣಿಕಟ್ಟು ಕೊಯ್ದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಕತ್ತು ಕೊಯ್ದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನೂ ಯುವತಿ ಛತ್ರಪತಿ ನಗರ ಪ್ರದೇಶದಲ್ಲಿರುವ ತಮ್ಮ ಮನೆಯ ಕೋಣೆಯಲ್ಲಿ 5 ಗಂಟೆಗೆ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮೃತಳ ತಾಯಿ ಗಾಬರಿಗೊಂಡಿದ್ದಾರೆ. ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತಳ ಪೋನ್ ವಶಪಡಿಸಿಕೊಂಡಿದ್ದಾರೆ. ಮೊಬೈಲ್ ಪರಿಶೀಲನೆ ನಡೆಸಿದಾಗ ಸಾವಿನ ಬಳಿಕ ಏನಾಗುತ್ತದೆ ಎಂಬುದನ್ನು ಗೂಗಲ್ ನಲ್ಲಿ ಹುಡುಕಿದ್ದಾಳೆ ಎಂದು ತಿಳಿದುಬಂದಿದೆ. ಇನ್ನೂ ಯುವತಿ ಆನ್ ಲೈನ್ ಗೇಮಿಂಗ್ ವ್ಯಸನಿಯಾಗಿದ್ದಳು ಜೊತೆಗೆ ಸಾವು, ಆತ್ಮಹತ್ಯೆ ಹಾಗೂ ವಿದೇಶಿ ಸಂಸ್ಕೃತಿಗಳ ಬಗ್ಗೆ ಮಾಹಿತಿಯನ್ನು ಸಹ ಹುಡುಕುತ್ತಿದ್ದಳಂತೆ. ಆನ್ ಲೈನ್ ನಲ್ಲಿ ಚಾಕುವನ್ನು ಆರ್ಡರ್ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಸದ್ಯ ಧಂತೋಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.