Viral news: ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ, ಆತನ ಚಿತೆಗೆ ಅದೇ ಹಾವನ್ನು ಕೊಂದು ಹಾಕಿದ ಜನರು…!

ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ನಮ್ಮ ಅಂಗೈಯಲ್ಲಿರುವ ಮೊಬೈಲ್ ನಲ್ಲಿಯೇ ನೋಡಬಹುದು. ಇದೀಗ ಛತ್ತೀಸ್ ಗಢದಲ್ಲಿ ನಡೆದ ಘಟನೆಯೊಂದು ಭಾರಿ ಸುದ್ದಿಯಾಗುತ್ತಿದೆ. ವ್ಯಕ್ತಿಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿ (Viral news) ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯರು ವ್ಯಕ್ತಿಗೆ ಕಚ್ಚಿದ ಹಾವನ್ನು ಹಿಡಿದು ವ್ಯಕ್ತಿಯ ಚಿತೆಗೆ ಹಾಕಿ ಹತ್ಯೆ ಮಾಡಿದ್ದಾರೆ. ಈ ಹಾವು ಬೇರೆಯವರಿಗೆ ಹಾನಿ ಮಾಡಬಹುದು ಎಂಬ ಭಯದಿಂದ ಅದನ್ನು ಚಿತೆಯ ಮೇಲೆ ಎಸೆದು ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗಿದೆ.

locals burns snake with men dead body

ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ ಎಂದು ತಿಳಿದುಬಂದಿದೆ. ಕಳೆದ ಶನಿವಾರ ರಾತ್ರಿ ಭೈಗಾಮಾರ್‍ ಎಂಬ ಗ್ರಾಮದ ಮನೆಯಲ್ಲಿ ನಿದ್ದೆ ಮಾಡಲು ಹಾಸಿಗೆಯನ್ನು ಹಾಕುತ್ತಿದ್ದಾಗ ದಿಗೇಶ್ವರ ಎಂಬಾತನಿಗೆ ಹಾವು ಕಚ್ಚಿದೆ. ಬಳಿಕ ತನಗೆ ಹಾವು ಕಚ್ಚಿರುವ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ. ಬಳಿಕ ಆತನನ್ನು ಕೊರ್ಬಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ದಿಗೇಶ್ವರ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ದಿಗೇಶ್ವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಈ ನಡುವೆ ಸ್ಥಳೀಯರು ಹಾವನ್ನು ಹಿಡಿದು ಬುಟ್ಟಿಯಲ್ಲಿಟ್ಟಿದ್ದರು. ಬಳಿಕ ಕೋಲಿಗೆ ನೇತು ಹಾಕಿದ ಹಗ್ಗದಿಂದ ಹಾವನ್ನು ಕಟ್ಟಿಹಾಕಿದ್ದಾರೆ. ಅಂತ್ಯಕ್ರಿಯೆ ಮಾಡಲು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ ಗ್ರಾಮಸ್ಥರು ವ್ಯಕ್ತಿಗೆ ಕಚ್ಚಿದ ಹಾವನ್ನು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರು. ಬಳಿಕ ಅಂತ್ಯಕ್ರಿಯೆಯ ಚಿತೆಗೆ ಹಾಆವನ್ನು ಹಾಕಿ ಜೀವಂತವಾಗಿ ಸುಟ್ಟುಹಾಕಿದ್ದಾರೆ. ಈ ವಿಷಕಾರಿ ಹಾವು ಬೇರೆಯವರನ್ನೂ ಸಹ ಕಚ್ಚಬಹುದೆಂಬ ಭಯದಿಂದ ಹಾವನ್ನು ಚಿತೆಗೆ ಹಾಕಿ ಸುಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *

Scroll to Top