Viral News – ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಕೆಲವೊಂದು ವಿಭಿನ್ನ ಘಟನೆಗಳು ಅಂಗೈಯಲ್ಲಿ ಸಿಗುತ್ತಿದೆ. ಅಂತಹುದೇ ಘಟನೆಯೊಂದು ಪಶ್ಚಿಮ ಬೆಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಹರಿನಾಘರ್ ನ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ಯಾಂಪಸ್ ನ ಕ್ಲಾಸ್ ರೂಂ ನಲ್ಲಿ ಒಂದು ಮದುವೆ ನಡೆದಿದೆ. ಈ ಮದುವೆ ಓರ್ವ ವಿದ್ಯಾರ್ಥಿ ಹಾಗೂ ಲೇಡಿ ಪ್ರೋಫೆಸರ್ ಜೊತೆಗೆ ನಡೆದಿದ್ದು, ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.

ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿಯ ಮೊದಲ ವರ್ಷದ ವಿದ್ಯಾರ್ಥಿಯನ್ನು ಅದೇ ಡಿಪಾರ್ಟ್‌ಮೆಂಟ್ ನ ಲೇಡಿ ಪ್ರೋಫೆಸರ್ ಮದುವೆಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಮದುವೆಗೆ ಇಬ್ಬರು ಸಾಕ್ಷಿಗಳ ಸಹಿಗಳೊಂದಿಗೆ ಯೂನಿವರ್ಸಿಟಿಯ ಪ್ಯಾಡ್ ಮೇಲೆ ಗಂಡ-ಹೆಂಡತಿಯ ಲಿಖಿತ ಒಪ್ಪಂದ ಸಹ ಇರುವುದು ಗಮನಾರ್ಹ ಎನ್ನಬಹುದಾಗಿದೆ. ವಿಡಿಯೋದಲ್ಲಿ ಕಾಣುವಂತೆ ಪ್ರೊಫೆಸರ್ ವಧುವಾಗಿ ಹಿಂದೂ ಸಂಪ್ರದಾಯದಂತೆ ಸುಂದರವಾಗಿ ಅಲಂಕಾರಗೊಂಡಿದ್ದಾಳೆ. ಹಿಂದೂ ಸಂಪ್ರದಾಯವನ್ನು ಪಾಲನೆ ಮಾಡಿದ್ದಂತೆ ಕಾಣುತ್ತದೆ. ಮದುವೆಗೆ ಅಲ್ಲಿದ್ದ ವಿದ್ಯಾರ್ಥಿಗಳು, ಇತರೆ ಶಿಕ್ಷಕರೂ ಸಹ ಭಾಗಿಯಾಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ವಿಡೀಯೋದಲ್ಲಿ ಕಾಣುವಂತೆ ವಿದ್ಯಾರ್ಥಿ ತನ್ನನ್ನು ಮದುವೆಯಾಗುತ್ತಿರುವ ಟೀಚರ್ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಮೊಣಕಾಲಿನ ಮೇಲೆ ಕುಳಿತು ರೋಜಾ ಹೂವನ್ನು ನೀಡುತ್ತಾ ನಾಚಿದ್ದಾನೆ, ಆ ರೋಜಾ ಹೂವನ್ನು ಹೆಡ್ ಟೀಚರ್ ತೆಗೆದುಕೊಂಡು ವಧುವಿನಂತೆ ನಾಚಿ ನೀರಾಗಿದ್ದಾಳೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದನ್ನು ಕೇಳಿದರೇ ನೀವು ಶಾಕ್ ಆಗಬಹುದು ಎನ್ನಬಹುದಾಗಿದೆ.

ಇನ್ನೂ ಈ ಮದುವೆ ನಿಜವಾದ ಮದುವೆಯಲ್ಲ ಎನ್ನಲಾಗಿದೆ. ಇದೊಂದು ಪ್ರಾಜೆಕ್ಟ್ ನಿಮಿತ್ತ ಮಾಡಲಾದ ಒಂದು ಸೈಕಲಾಜಿಕಲ್ ಡ್ರಾಮಾ ಎಂದು ಯೂನಿರ್ವಸಿಟಿಯ ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನಲಾಗಿದೆ. ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಮದುವೆಯನ್ನು ನಾಟಕದ ರೂಪದಲ್ಲಿ ತಮಾಷೆಗಾಗಿ ಮಾಡಿದ್ದಾಗಿ, ಆದರೆ ಕೆಲವರು ಉದ್ದೇಶಪೂರ್ವಕವಾಗಿ ಈ ಡ್ರಾಮಾದಲ್ಲಿನ ಒಂದು ಭಾಗವನ್ನು ಮಾತ್ರ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ ಎಂದು ಟೀಚರ್ ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಉನ್ನತಾಧಿಕಾರಿಗಳು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನೂ ವಿಡಿಯೋ ವೈರಲ್ ಆಗಿದ ಹಿನ್ನೆಲೆಯಲ್ಲಿ ವಧುವಾಗಿ ಕಾಣಿಸಿಕೊಂಡ ಟೀಚರ್ ಅನ್ನು ಹೆಚ್.ಒ.ಡಿ ಪದವಿಯಿಂದ ತೊಲಗಿಸಿದ್ದಾರೆ ಎಂದೂ ಸಹ ತಿಳಿದುಬಂದಿದೆ.