Google Summer Internship 2026 : ₹10 ಲಕ್ಷ ಸ್ಟೈಫಂಡ್‌ನೊಂದಿಗೆ ಗೂಗಲ್ ಸಮ್ಮರ್ ಇಂಟರ್ನ್‌ಶಿಪ್.. ಈ ಅರ್ಹತೆಗಳಿದ್ದರೆ ಸಾಕು!

ನೀವು ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ಗೂಗಲ್ (Google) ನಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸುದ್ದಿ ಇಲ್ಲಿದೆ. ಗೂಗಲ್ ತನ್ನ 2026ರ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂಗೆ (Google Summer Internship 2026) ಅರ್ಜಿಗಳನ್ನು ಆಹ್ವಾನಿಸಿದೆ. ವಿಶೇಷವೆಂದರೆ, ಈ ಇಂಟರ್ನ್‌ಶಿಪ್‌ನಲ್ಲಿ ಆಯ್ಕೆಯಾದವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳವರೆಗೆ ಸ್ಟೈಫಂಡ್ ಸಿಗಲಿದೆ. ಅನುಭವದ ಜೊತೆಗೆ ಅದ್ಭುತ ಸಂಭಾವನೆ ನೀಡುವ ಈ ಅವಕಾಶದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

Google Summer Internship 2026 program offering students up to ₹10 lakh stipend

Google Summer Internship 2026 – ಏನಿದು ಗೂಗಲ್ ಸಮ್ಮರ್ ಇಂಟರ್ನ್‌ಶಿಪ್?

ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ ಈ ಫೆಲೋಶಿಪ್ ಕೇವಲ ತಾಂತ್ರಿಕ ಕೌಶಲ್ಯಕ್ಕೆ ಮಾತ್ರವಲ್ಲದೆ, ಇಂಟರ್ನೆಟ್ ಮತ್ತು ಟೆಕ್ನಾಲಜಿ ಪಾಲಿಸಿಗಳ ಬಗ್ಗೆ ಆಸಕ್ತಿ ಇರುವವರಿಗೂ ಉತ್ತಮ ವೇದಿಕೆಯಾಗಿದೆ. ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಪಿಎಚ್‌ಡಿ ಸಂಶೋಧಕರವರೆಗೆ ಯಾರು ಬೇಕಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? (Eligibility Criteria)

ಈ ಇಂಟರ್ನ್‌ಶಿಪ್ ಪಡೆಯಲು ಗೂಗಲ್ ಕೆಲವು ಸರಳ ಆದರೆ ಪ್ರಮುಖ ಅರ್ಹತೆಗಳನ್ನು ನಿಗದಿಪಡಿಸಿದೆ:

  • ಶೈಕ್ಷಣಿಕ ಅರ್ಹತೆ: ನೀವು ಪ್ರಸ್ತುತ ಅಂಡರ್ ಗ್ರಾಜುಯೇಟ್ (UG), ಪೋಸ್ಟ್ ಗ್ರಾಜುಯೇಟ್ (PG) ಅಥವಾ ಪಿಎಚ್‌ಡಿ (PhD) ಮಾಡುತ್ತಿರಬೇಕು. ನೀವು ಫುಲ್ ಟೈಮ್ ಅಥವಾ (Google Summer Internship 2026) ಪಾರ್ಟ್ ಟೈಮ್ ಕೋರ್ಸ್ ಮಾಡುತ್ತಿದ್ದರೂ ಅಭ್ಯಂತರವಿಲ್ಲ.
  • ವಯೋಮಿತಿ: ಜನವರಿ 1, 2026 ರ ವೇಳೆಗೆ ನಿಮಗೆ ಕನಿಷ್ಠ 18 ವರ್ಷ ತುಂಬಿರಬೇಕು.
  • ಕೌಶಲ್ಯಗಳು: ಇಂಟರ್ನೆಟ್ ಮತ್ತು ತಂತ್ರಜ್ಞಾನದ ನೀತಿಗಳ ಮೇಲೆ ಆಸಕ್ತಿ ಇರಬೇಕು. ಉತ್ತಮ ಸಂಶೋಧನೆ (Research), ಬರವಣಿಗೆ ಮತ್ತು ಸಂವಹನ ಕಲೆ (Communication Skills) ನಿಮ್ಮಲ್ಲಿರಬೇಕು.
  • ವರ್ಕ್ ಪರ್ಮಿಟ್: ಮುಖ್ಯವಾಗಿ, ಅಭ್ಯರ್ಥಿಗಳು ಅಮೆರಿಕಾದಲ್ಲಿ (USA) ಕೆಲಸ ಮಾಡಲು ಕಾನೂನುಬದ್ಧ ಅನುಮತಿ (Work Authorization) ಹೊಂದಿರಬೇಕು. ಗೂಗಲ್ (Google Summer Internship 2026) ಯಾವುದೇ ರೀತಿಯ ವೀಸಾ ಪ್ರಕ್ರಿಯೆಗೆ ಸಹಾಯ ಮಾಡುವುದಿಲ್ಲ ಎಂಬುದು ನೆನಪಿರಲಿ.

ಸ್ಟೈಫಂಡ್ ಎಷ್ಟು ಸಿಗಲಿದೆ?

ಈ ಇಂಟರ್ನ್‌ಶಿಪ್‌ನ ಪ್ರಮುಖ ಆಕರ್ಷಣೆಯೇ ಅದರ ಸ್ಟೈಫಂಡ್. ನೀವು ಕೆಲಸ ಮಾಡುವ ಸಮಯಕ್ಕೆ ಅನುಗುಣವಾಗಿ ಸಂಭಾವನೆ ನೀಡಲಾಗುತ್ತದೆ. Read this also : ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ವಿಶೇಷ ಇಂಟರ್ನ್‌ಶಿಪ್ ಕಾರ್ಯಕ್ರಮ, ಯಾರು ಅರ್ಜಿ ಸಲ್ಲಿಸಬಹುದು? ಮಾಹಿತಿ ಇಲ್ಲಿದೆ ನೋಡಿ…!

  1. ಫುಲ್ ಟೈಮ್ (ವಾರಕ್ಕೆ 40 ಗಂಟೆ): ಸುಮಾರು $12,000 (ಅಂದಾಜು ₹10 ಲಕ್ಷ).
  2. ಪಾರ್ಟ್ ಟೈಮ್ (ವಾರಕ್ಕೆ 20 ಗಂಟೆ): ಸುಮಾರು $6,000 (ಅಂದಾಜು ₹5 ಲಕ್ಷ).

Google Summer Internship 2026 program offering students up to ₹10 lakh stipend

ಪ್ರಮುಖ ದಿನಾಂಕಗಳು ನೆನಪಿರಲಿ

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 9, 2026 (ಮಧ್ಯಾಹ್ನ 12:00 ಗಂಟೆಯೊಳಗೆ).
  • ಪ್ರೋಗ್ರಾಂ ಆರಂಭ: ಆಗಸ್ಟ್ 30, 2026 ರ ವೇಳೆಗೆ ನೀವು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ (Google Summer Internship 2026) ಪ್ರವೇಶ ಪಡೆದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ವಿದ್ಯಾರ್ಥಿಗಳು ಗೂಗಲ್‌ನ ಅಧಿಕೃತ Careers Portal ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನೀವು ಈ ಹಿಂದೆ ಈ ಫೆಲೋಶಿಪ್‌ನಲ್ಲಿ (Google Summer Internship 2026) ಭಾಗವಹಿಸಿದ್ದರೆ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಕೊನೆಯ ಮಾತು: ಗೂಗಲ್‌ನಂತಹ ಜಾಗತಿಕ ಮಟ್ಟದ ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡುವುದು ನಿಮ್ಮ ವೃತ್ತಿಜೀವನಕ್ಕೆ (Career) ದೊಡ್ಡ ತಿರುವು ನೀಡಬಲ್ಲದು. ಅರ್ಹತೆ ಇರುವವರು ತಡಮಾಡದೆ ಇಂದೇ ಪ್ರಯತ್ನಿಸಿ!

Leave a Comment

Your email address will not be published. Required fields are marked *

Scroll to Top