ಜಗತ್ತಿನಲ್ಲಿ ಆಗಾಗ ಕೆಲವೊಂದು ವಿಸ್ಮಯಗಳು ನಡೆಯುತ್ತಿರುತ್ತವೆ. ವೈದ್ಯರು ಪ್ರಾಣ ಹೋಗುತ್ತಿರುವ ಸಮಯದಲ್ಲಿ ದೇವರಂತೆ ಬಂದು ಜೀವಗಳನ್ನು ಕಾಪಾಡಿದಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ವಿಸ್ಮಯ ನಡೆದಿದೆ. ಉಸಿರು ನಿಂತ ನವಜಾತ ಶಿಶುವಿಗೆ ಉಸಿರು ನೀಡುವ ಮೂಲಕ ವೈದ್ಯರೊಬ್ಬರು ನವಜಾತ ಶಿಶುವಿಗೆ (Viral) ಪುರ್ನಜನ್ಮ ನೀಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡುತ್ತಿದೆ.
ಉಸಿರು ನಿಂತು ಹೋದ ಮಗುವಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಿ ವೈದ್ಯರೊಬ್ಬರು ಆ ಮಗುವಿಗೆ ಉಸಿರು ನೀಡುವ ಮೂಲಕ ಮರು ಜೀವ ತುಂಬಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೈದ್ಯರ ಈ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. Educativefeed ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೈದ್ಯರೊಬ್ಬರು ನವಜಾತ ಶಿಶುವನ್ನು ಕೈಯಲ್ಲಿ ಹಿಡಿದುಕೊಂಡು ಆಪರೇಷನ್ ಥಿಯೇಟರ್ ನಿಂದ ಹೊರಬರುತ್ತಾರೆ. ಮಗುವಿನ ಉಸಿರು ನಿಂತಿದ್ದರಿಂದ ಈ ಮಗುವನ್ನು ಏನಾದರೂ ಮಾಡಿ ಬದುಕಿಸಲೇಬೇಕೆಂದು ಪಣತೊಟ್ಟು, ಕೆಲವು ವೈದ್ಯಕೀಯ ಸಾಧನಗಳ ಸಹಾಯದಿಂದ ಮಗುವಿಗೆ ಉಸಿರು ತುಂಬುವ ಪ್ರಯತ್ನ ಮಾಡುತ್ತಾರೆ. ಉಸಿರು ನಿಂತ ನವಜಾತ ಶಿಶುವಿಗೆ ಉಸಿರು ನೀಡುವ ಮೂಲಕ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/p/DAc0aIqBV3W/
ಕಳೆದೆರಡು ದಿನಗಳ ಹಿಂದೆಯಷ್ಟೆ ಹಂಚಿಕೊಂಡ ಈ ವಿಡಿಯೋಗೆ ಬರೋಬ್ಬರಿ 4.8 ಮಿಲಿಯನ್ ವೀಕ್ಷಣೆಗಳನ್ನು ಹಂಡಿದೆ. ಜೊತೆಗೆ ಅನೇಕ ಕಾಮೆಂಟ್ ಗಳು ಹರಿದುಬಂದಿದೆ. ವೈದ್ಯರ ಈ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿವೆ. ಅನೇಕರು ಅವರು ವೈದ್ಯರಲ್ಲ, ನಿಜವಾದ ದೇವರು ಎಂತಲೂ, ಸಾಯುವ ಸ್ಥಿತಿಯಲ್ಲಿದ್ದ ಮಗುವಿಗೆ ಜೀವ ಕೊಟ್ಟ ನೀವು ದೇವರು ಎಂತಲೂ, ವೈದ್ಯರಿಗೆ ನನ್ನದೊಂದು ಸಲಾಂ ಎಂತಲೂ, ನಿಜಕ್ಕೂ ಈ ವೈದ್ಯರು ಪುಟ್ಟ ಮಗುವಿಗೆ ಪುರ್ನಜನ್ಮ ಕೊಟ್ಟ ದೇವರು ಎಂತಲೂ ಕಾಮೆಂಟ್ ಗಳನ್ನು ಹಂಚಿಕೊಳ್ಳುವ ಮೂಲಕ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.