ಅನೇಕರು ಭಕ್ತಿಯಿಂದ ದೇವಾಲಯಕ್ಕೆ ಹೋಗಿ ಅಲ್ಲಿ ನೀಡುವ ಪ್ರಸಾಧವನ್ನು ಪವಿತ್ರವಾದುದು ಎಂದು ಭಾವಿಸಿ ಸೇವನೆ ಮಾಡುತ್ತಾರೆ. ದೇವಾಲಯಗಳಲ್ಲಿ ಪವಿತ್ರ ಜಲವನ್ನು ಕುಡಿದರೆ ಅಥವಾ ಆ ನೀರನ್ನು ತಲೆಗೆ ಚಿಮುಕಿಸಿದರೆ ಪುಣ್ಯ ಲಭಿಸುತ್ತದೆ ಎಂದು ಹೆಚ್ಚಿನವರು ನಂಬುತ್ತಾರೆ. ಅದರಂತೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನ್ ಪಟ್ಟಣದಲ್ಲಿರುವ ಹಿಂದೂ ದೇವಾಲಯದಲ್ಲಿರುವ ACಯಿಂದ ಸೋರಿಕೆಯಾದ ನೀರನ್ನು ಪುಣ್ಯಜಲವೆಂದು (Viral) ಸೇವಿಸಿದ್ದಾರೆ. ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ.
ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿರುವ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿಯ ಶಿಲ್ಪದಿಂದ ನಿಗೂಢವಾಗಿ ಸೋರಿಕೆಯಾಗುತ್ತಿದ್ದ ನೀರನ್ನು ಚರಣ್ ಅಮೃತ ಅಂದರೆ ಶ್ರೀ ಕೃಷ್ಣನ ಪಾದದ ಪವಿತ್ರ ನೀರು ಎಂದು ಭಾವಿಸಿ ಅಲ್ಲಿದ್ದ ಭಕ್ತರು ಅದನ್ನು ಕುಡಿದಿದ್ದಾರೆ. ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯಕ್ಕೆ ತೆರಳಿದ ಭಕ್ತರು ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿಯಿಂದ ಸೋರಿಕೆಯಾಗುತ್ತಿದ್ದ ನೀರನ್ನು ಪುಣ್ಯ ಜಲವೆಂದು ಸೇವನೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ಸಂಬಂಧ ವಿಡಿಯೋವನ್ನು BroominsKaBaap ಹೆಸರಿನ ಎಕ್ಸ್ (ಟ್ವಿಟರ್)ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಗಂಭೀರ ಶಿಕ್ಷಣದ ಅವಶ್ಯಕತೆಯಿದ, ದೇವರ ಪಾದದ ಚರಣಾಮೃತ ಎಂದು ಭಾವಿಸಿ ಎಸಿ ನೀರನ್ನು ಕುಡಿದ ಜನರು” ಎಂಬ ಟೈಟಲ್ ನಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಭಕ್ತರು ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿಯಿಂದ ಸೋರಿಕೆಯಾಗುತ್ತಿದ್ದ ನೀರನ್ನು ಕುಡಿಯುತ್ತಿರುವ ಮತ್ತು ತಲೆಯ ಮೇಲೆ ಹಾಕಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಆದರೆ ವಾಸ್ತವವಾಗಿ ಇದು ಎಸಿಯಿಂದ ಸೋರಿಕೆಯಾದ ನೀರಾಗಿದೆ. ಅದೇ ನೀರನ್ನು ಭಕ್ತರು ಇದನ್ನು ದೇವರ ಪಾದದ ಚರಣಾಮೃತ ಎಂದು ಭಾವಿಸಿ ಸರತಿ ಸಾಲಿನಲ್ಲಿ ಬಂದು ಅದರಲ್ಲಿ ಕೆಲವರು ಆ ನೀರನ್ನು ಕುಡಿದರೆ ಇನ್ನೂ ಕೆಲವರು ಆ ನೀರನ್ನು ತಲೆ ಮೇಲೆ ಹಾಕಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.