Valentines Day – ಪ್ರೀತಿ ಅನ್ನೋದು ಸಾಮಾನ್ಯ, ಯಾರಿಗೆ ಯಾವಾಗ ಹೇಗೆ ಪ್ರೀತಿ ಹುಟ್ಟುತ್ತೆ ಎಂಬುದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಪ್ರೇಮ ಪ್ರಕರಣಗಳು ಸುಖಾಂತ್ಯ ಕಂಡರೆ, ಕೆಲವೊಂದು ದುರಂತ ಕಾಣುತ್ತವೆ. ಜೊತೆಗೆ ಪ್ರೇಮಿಗಳ ನಡುವೆ ಬ್ರೇಕಪ್ ಆದರೇ ಹುಡುಗ/ಹುಡುಗಿ ದ್ವೇಷ ಸಾಧಿಸಲು ಮುಂದಾಗುತ್ತಾರೆ. ಕೆಲವೊಂದು ಕಡೆ ದೈಹಿಕ ಹಲ್ಲೆಯಿಂದ ಹಿಡಿದು, ಕೊಲೆಯ ವರೆಗೆ ಹೋಗಿರುತ್ತದೆ. ಇಲ್ಲಿ ಅದೇ ರೀತಿಯ ಸ್ಟೋರಿಯೊಂದನ್ನು ತಿಳಿಸುತ್ತಿದ್ದೇವೆ. ಇಲ್ಲಿ ತನ್ನ ಮಾಜಿ ಪ್ರಿಯಕರನ ವಿರುದ್ದ ಸೇಡು ತೀರಿಸಿಕೊಳ್ಳಲು ಯುವತಿ ಮುಂದಾಗಿದ್ದು, ಆ ಪ್ರಿಯಕರ ಆಕೆಗೆ ಸೇಡಿಗೆ ಸುಸ್ತಾಗಿದ್ದಾನೆ. ಅಷ್ಟಕ್ಕೂ ಆಕೆ ಮಾಡಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸಾಮಾನ್ಯವಾಗಿ ಫೆಬ್ರವರಿ ಮಾಹೆಯಲ್ಲಿ ವ್ಯಾಲೆಂಟೈನ್ ಡೇ ನಡೆಯುತ್ತದೆ. ಅದರ ಅಂಗವಾಗಿ ಹಗ್ ಡೇ, ಪ್ರಾಮಿಸ್ ಡೇ, ಟೆಡ್ಡಿ ಡೇ, ಕಿಸ್ ಡೇ ಹೀಗೆ ಆಚರಿಸಿಕೊಳ್ಳುತ್ತಾರೆ. ಇದೀಗ ವ್ಯಾಲೆಂಟೈನ್ಸ್ ಡೇ ದಿನಂದದು ತನ್ನ ಮಾಜಿ ಪ್ರಿಯಕರನ ವಿರುದ್ದ ಯುವತಿಯೊಬ್ಬಳ ಸೇಡು ತೀರಿಸಿಕೊಳ್ಳಲು ಸಖತ್ ಪ್ಲಾನ್ ಮಾಡಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಗುರುಗ್ರಾಂನ ಸೆಕ್ಟರ್ 23 ರಲ್ಲಿ. ಮಾಜಿ ಪ್ರಿಯತಮನ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದು, ಅದರಂತೆ ಆಕೆ ತನ್ನ ಮಾಜಿ ಪ್ರಿಯಕರನ ಮನೆಯ ವಿಳಾಸಕ್ಕೆ ಬರೊಬ್ಬರಿ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ. ಕ್ಯಾಶ್ ಆನ್ ಡಿಲೆವರಿ ಆಪ್ಷನ್ ಆಯ್ಕೆ ಮಾಡಿ ನೂರು ಪಿಜ್ಜಾಗಳನ್ನು ಬುಕ್ ಮಾಡಿದ್ದಾಳೆ.

ಇನ್ನೂ ಆ ಯುವಕನ ಫ್ಲಾಟ್ ಗೆ ಒಂದಾದರ ಮೇಲೆ ಒಂದರಂತೆ ಯುವತಿ ಆರ್ಡರ್ ಮಾಡಿದ ಪಿಜ್ಜಾಗಳು ಬರಲಾರಂಭಿಸಿದೆ. ಪಿಜ್ಜಾ ಡಿಲಿವರಿ ಮಾಡುವಂತಹ ಡಿಲಿವರಿ ಬಾಯ್ ಗಳು ಹಣ ನೀಡುವಂತೆ ಯುವಕನಲ್ಲಿ ಕೇಳಿದ್ದಾರೆ. ಅತ್ತ ಯುವಕ ನೂರು ಪಿಜ್ಜಾಗಳನ್ನು ಖರೀದಿಸಲಾಗದೆ ವಿಲ ವಿಲ ಒದ್ದಾಡಿದ್ದಾನೆ. ನಾನು ಪಿಜ್ಜಾ ಆರ್ಡರ್ ಮಾಡಿಲ್ಲ. ದಯವಿಟ್ಟು ಅವುಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಎಂದು ಗೋಳಾಡಿದ್ದಾನೆ. ಇತ್ತ ಯುವಕ ಹಣ ನೀಡಲಾಗದೆ ಸಮಸ್ಯೆಗೆ ಸಿಲುಕಿದ್ದರೇ, ಅತ್ತ ಯುವತಿ ಮಾತ್ರ ತನ್ನ ಮಾಜಿ ಪ್ರಿಯಕರನ ಮೇಲೆ ಸೇಡು ತೀರಿಸಿಕೊಂಡು ಸಂಭ್ರಮಿಸಿದ್ದಾಳೆ ಎನ್ನಲಾಗಿದೆ.