UP Viral News: ವರನಿಗೆ ಬಂದ ಒಂದೇ ಪೋನ್ ಕಾಲ್, ಮದುವೆ ಬೇಡ, ಹುಡುಗಿನೂ ಬೇಡ ಎಂದು ರಪ್ಪನೇ ಓಡಿದ ವರ…..!

ಆ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮದುವೆಯ ಸಂಬಂಧ ಎಲ್ಲಾ ಸಿದ್ದತೆಗಳು ಸಂಭ್ರಮದಿಂದ ನಡೆದಿದೆ. ಇನ್ನೇನು ವರ ವಧುವಿನ ಕೊರಳಲ್ಲಿ ತಾಳಿ ಕಟ್ಟಬೇಕು, ಅಷ್ಟರಲ್ಲಿ ವರನಿಗೆ ಬಂದಿತ್ತು ಒಂದು ಪೋನ್ ಕಾಲ್, ಪೋನ್ ನಲ್ಲಿ ಮಾತನಾಡುತ್ತಿದ್ದಂತೆ ಆ ಯುವಕ ಮದುವೆ ಬೇಡ, (UP Viral News) ಹುಡುಗಿನೂ ಬೇಡ ಎಂದು ವಧುವನ್ನು ಬಿಟ್ಟು ಕಲ್ಯಾಣ ಮಂಟಪದಿಂದ ರಪ್ಪನೇ ಓಡಿ ಹೋಗಿದ್ದಾನೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಘಟನೆಯೊಂದು ನಡೆದಿದೆ. ಮದುವೆ ಮಂಟಪದಲ್ಲಿ ಇನ್ನೇನು ವಧುವಿಗೆ ತಾಳಿ ಕಟ್ಟುವಂತಹ ಸಮಯ, ಈ ಸಮಯದಲ್ಲಿ ವಧುವಿನ ಪ್ರಿಯಕರನಿಂದ ಕರೆ ಬಂದಿತ್ತು. ವರನಿಗೆ ತಮ್ಮಿಬ್ಬರ ಪ್ರೇಮ ಕಹಾನಿಯ ಬಗ್ಗೆ ಹೇಳಿದ್ದಾನೆ. ಈ ವೇಳೆ ವರ ನೀವು ಹೇಳಿದ್ದಕ್ಕೆ ನಿಮ್ಮಲ್ಲಿ ಏನು ಸಾಕ್ಷಿಯಿದೆ ಎಂದು ಕೇಳಿದ್ದಾನೆ. ಅದಕ್ಕೆ ಆತ ವಧುವಿನ ಜೊತೆಗಿದ್ದ ಬಹಳಷ್ಟು ಪೊಟೋಗಳು, ವಿಡಿಯೋಗಳನ್ನು ವರನ ಪೋನ್ ಗೆ ಕಳುಹಿಸಿದ್ದಾರೆ. ಈ ಪೊಟೋಗಳಲ್ಲಿ ಅವರಿಬ್ಬರ ನಡುವಣ ಆತ್ಮೀಯತೆಯನ್ನು ಕಂಡು ವರ ಶಾಕ್ ಆಗಿದ್ದಾನೆ. ಕೂಡಲೇ ತಾಳಿ ಕಟ್ಟುವುದನ್ನು ಬಿಟ್ಟು ಮದುವೆ ಮಂಟಪದಿಂದ ಓಡಿ ಹೋಗಿದ್ದಾನೆ (UP Viral News) ಎಂದು ಹೇಳಲಾಗಿದೆ.

Bride grrom ran away from kalyan mantapa

ಇನ್ನೂ ವಧುವಿನ ಪ್ರಿಯಕರನ ಜೊತೆಗೆ ಕೊಠಡಿಯಲ್ಲಿದ್ದ ಖಾಸಗಿ ಪೊಟೋ ಹಾಗೂ ವಿಡಿಯೋಗಳನ್ನು ಸಹ ಕಳುಹಿಸಿದ್ದಾನೆ. ಈ ವಿಡಿಯೋ ಪೊಟೋಗಳನ್ನು ನೋಡಿದ ವರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ (UP Viral News) ಎನ್ನಲಾಗಿದೆ. ಇನ್ನೂ ವಧುವಿನ ಪ್ರಿಯಕರ ಎಂದು ಹೇಳಲಾಗಿರುವ ವ್ಯಕ್ತಿಯನ್ನು ಕಮಲ್ ಸಿಂಗ್ ಎಂದು ಗುರ್ತಿಸಲಾಗಿದೆ. ಇನ್ನೂ ವಧುವಿನ ಕುಟುಂಬಸ್ಥರು ಈ ಸಂಬಂಧ ದೂರು ಸಹ ನೀಡಿದ್ದು, ಅವರು ನೀಡಿದ ದೂರಿನಂತೆ ಪ್ರಕರಣ ಸಹ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top