Udyogini Scheme: ಮಹಿಳೆಯರಿಗೆ ಗುಡ್ ನ್ಯೂಸ್, ಉದ್ಯೋಗಿನಿ ಯೋಜನೆಯಡಿ ಸಿಗಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ?

Udyogini Scheme  – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿರುತ್ತವೆ. ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಪ್ರೇರಿಪಿಸುತ್ತಿರುತ್ತದೆ. ಅಂತಹುದೇ ಯೋಜನೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ. ಉದ್ಯೋಗಿನಿ ಎಂಬ ಯೋಜನೆಯ ಮೂಲಕ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಈ ಯೋಜನೆಯ ಕುರಿತು ಮಾಹಿತಿ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ.

ಮಹಿಳೆಯರು ಸ್ವಂತ ಉದ್ಯಮ ಸ್ಥಾಪಿಸಿಕೊಂಡು, ಆರ್ಥಿಕವಾಗಿ ನೆರವಾಗಲು ಸರ್ಕಾರಿ ಜಾರಿ ಮಾಡಿರುವ ಯೋಜನೆ ಉದ್ಯೋಗಿನಿ (Udyogini Scheme) ಯೋಜನೆಯಾಗಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರ 1997-98 ರಲ್ಲಿ ಜಾರಿಗೆ ತಂದಿತ್ತು. ಬಳಿಕ ಈ ಯೋಜನೆಯನ್ನು ಕೇಂದ್ರ ಸರ್ಕಾರ ಮಹಿಳಾ ಅಭಿವೃದ್ದಿ ನಿಗಮದ ಮೂಲಕ ದೇಶದಾದ್ಯಂತ ಜಾರಿಗೆ ತಂದಿತ್ತು. ಸ್ವಂತ ಉದ್ಯಮ ಪ್ರಾರಂಭಿಸುವ ಗುರಿಯನ್ನು ಹೊಂದಿರುವ ಮಹಿಳೆಯರಿಗೆ ಈ ಉದ್ಯೋಗಿನಿ ಯೋಜನೆ ಒಂದು ವರದಾನ ಎಂದೇ ಹೇಳಬಹುದು. ಈ ಯೋಜನೆಯಡಿ ಮಹಿಳೆಯರಿಗೆ ಸುಮಾರು 3 ಲಕ್ಷದಷ್ಟು ಬಡ್ಡಿ ರಹಿತ ಸಾಲ ಸಿಗಲಿದೆ.

Udyogini scheme details 1

ಉದ್ಯೋಗಿನಿ ಯೋಜನೆಯನ್ನು ಸ್ವಂತ ವ್ಯಾಪಾರ ಉದ್ಯಮ ನಡೆಸಲು ಬಯಸುವಂತಹ ಮಹಿಳೆಯರಿಗಾಗಿ ರೂಪಿಸಲಾಗಿದೆ. ಈ ಯೋಜನೆಯಡಿ ಮಹಿಳೆಯರು ಬ್ಯಾಂಕ್ ಗಳಿಂದ  1 ಲಕ್ಷದಿಂದ 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಶೇ.30 ಸಬ್ಸಿಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ ಶೇ.50 ರಷ್ಟು ಸಹಾಯಧನ ಸಿಗಲಿದೆ. ಈ ಯೋಜನೆಗೆ ಬೇಕಾದ ಅರ್ಹತೆಗಳು, ಅಗತ್ಯ ದಾಖಲೆಗಳ ವಿವರ ಈ ಕೆಳಗೆ ನೀಡಲಾಗಿದೆ.

ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲಕ್ಕೆ ಅಗತ್ಯವಾದ ದಾಖಲೆಗಳು :

  • ಭರ್ತಿ ಮಾಡಿದ ಅರ್ಜಿಯೊಂದಿಗೆ 2 ಪಾಸ್ ಪೋರ್ಟ್ ಸೈಜ್  ಫೋಟೋ
  • ಆಧಾರ್ ಕಾರ್ಡ್ (Aadhar Card)
  • ಜನ್ಮ ಪ್ರಮಾಣ ಪತ್ರ  (Birth certificate)
  • BPL ರೇಷನ್ ಕಾರ್ಡ್ ಪ್ರತಿ
  • ಆದಾಯ ಪ್ರಮಾಣ ಪತ್ರ
  • ಜಾತಿ ದೃಢೀಕರಣ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.
  • ಉದ್ಯೋಗಿನಿ ಯೋಜನೆಯ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು.
  • ಈ ಎಲ್ಲಾ ಯೋಜನೆಗಳಿಗೆ ಅರ್ಜಿಗಳು ಸೇವಾಸಿಂಧು ಪೋರ್ಟಲ್ https://sevasindhu.karnataka. gov.in ನಲ್ಲಿ ಲಭ್ಯವಿರುತ್ತದೆ.
  • ಅರ್ಜಿದಾರರು ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದು.
  • ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿಯ ವೆಬ್ ಸೈಟ್ ಗೆ ಭೇಟಿ ನೀಡಬಹುದು.

Leave a Comment

Your email address will not be published. Required fields are marked *

Scroll to Top