Thursday, November 21, 2024

Tirumala Update: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿ….!

ದೇಶದ ಹಿಂದೂ ದೇವಾಲಯಗಳಲ್ಲಿ ತುಂಬಾನೆ ಪ್ರಖ್ಯಾತಿ ಪಡೆದಿರುವ ಕಲಿಯುಗ ದೈವ ತಿರುಮಲ (Tirumala Update) ತಿರುಪತಿ ವೆಂಕಟೇಶ್ವರನನ್ನು ನೋಡಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿರುತ್ತಾರೆ. ಇದೀಗ ತಿರುಮಲಕ್ಕೆ (Tirumala Update) ಹೋಗುವಂತಹ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ಕೊಟ್ಟಿದೆ. ತಿರುಮಲಕ್ಕೆ (Tirumala Update)  ಭೇಟಿ ನೀಡುವಂತಹ ಭಕ್ತರಿಗೆ ಕೈಗೆಟುಕವ ದರದಲ್ಲಿ ಶುದ್ದ ವಾದ ಹಾಗೂ ಆರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ  ಕ್ರಮ ತೆಗೆದುಕೊಳ್ಳಲಾಗಿದೆ ಎಂದು (TTD) ಟಿಟಿಡಿಯ ಇ.ಒ ಶ್ಯಾಮಾಲಾ ರಾವ್ ತಿಳಿಸಿದ್ದಾರೆ.

TTD meeting about food 1

ಈ ಸಂಬಂಧ ತಿರುಮಲದ ಗೋಕುಲಂ ವಿಶ್ರಾಂತಿ ಗೃಹದ ಮೀಟಿಂಗ್ ಹಾಲ್ ನಲ್ಲಿ ಶುಕ್ರವಾರ ಟಿಟಿಡಿ (Tirumala Update)  ಇಒ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳೊಂದಿಗೆ ಜನತಾ ಕ್ಯಾಂಟೀನ್ ಗಳ ಬಗ್ಗೆ ಚರ್ಚೆ ನಡೆಸಿದರು. ಭಕ್ತರಿಗೆ ಸ್ವಚ್ಚ, ಆರೋಗ್ಯಕರವಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಶೀಘ್ರದಲ್ಲೇ ಅನ್ನಪ್ರಸಾದ ಸಿಬ್ಬಂದಿ ಹಾಗೂ ಜನತಾ ಕ್ಯಾಂಟೀನ್ ಗಳ ಸಂಘಟಕರಿಗೆ ವಿಶೇಷ ತರಬೇತಿ ನೀಡಲಿದೆ. ಪ್ರತಿ ಹೋಟೆಲ್ ನಲ್ಲಿ ಕಡ್ಡಾಯವಾಗಿ ಬೆಲೆ ಫಲಕ ಹಾಕುವುದರ ಜೊತೆಗೆ ಆಹಾರದ ಗುಣಮಟ್ಟವನ್ನು ಸಹ ಸುಧಾರಿಸಬೇಕು ಎಂದು ಆ.5 ರವರೆಗೆ ಸಮಯ ನೀಡಲಾಗಿದೆ ಎಂದು (Tirumala Update) ಟಿಟಿಡಿಯ ಇ.ಒ ಶ್ಯಾಮಾಲಾ ರಾವ್ ತಿಳಿಸಿದ್ದಾರೆ.

TTD meeting about food 0

ಇದೇ (Tirumala Update) ಸಭೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ನಿರ್ದೇಶಕ ಪೂರ್ಣಚಂದ್ರರಾವ್ ರವರು ತಿರುಮಲದಲ್ಲಿರುವ ಎಲ್ಲಾ ರೆಸ್ಟೋರೆಂಟ್ ಗಳು, ತಿಂಡಿ ತಿನಿಸುಗಳನ್ನು ಮಾರಾಟ ಮಾಡುವವರು ಅನುಸರಿಸಬೇಕಾದ ನೈರ್ಮಲ್ಯ ಹಾಗೂ ಪರಿಶುದ್ದತೆಯ ಅಭ್ಯಾಸಗಳನ್ನು ಅನುಸರಿಸಬೇಕು. ಆಹಾರ ಹಾಳಾಗುವುದರಿಂದ ಉಂಟಾಗುವ ಭೌತಿಕ-ರಾಸಾಯನಿಕ-ಜೈವಿಕ ಅಪಾಯಗಳು, ಕಚ್ಚಾ ವಸ್ತುಗಳನ್ನು ಸಂಗ್ರಹಿಸುವ ವಿಧಾನಗಳು, ತ್ಯಾಜ್ಯ ನಿರ್ಮೂಲನಾ ಯೋಜನೆ, ಆಹಾರ ಸುರಕ್ಷತಾ ಕಾನೂನುಗಳು ಮತ್ತು ಕಾನೂನುಗಳ ಉಲ್ಲಂಘನೆಗೆ ಶಿಕ್ಷೆ ಬಗ್ಗೆ ತಿಳಿಸಿದ್ದಾರೆ. ಇನ್ನೂ ಈ ಸಭೆಯಲ್ಲಿ ಜೆಇಒ ವೀರಬ್ರಹ್ಮಂ, ಉಪ ಇಒಗಳಾದ ಆಶಾ ಜ್ಯೋತಿ, ವಿಜಯಲಕ್ಷ್ಮಿ, ಉಸ್ತುವಾರಿ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್, ಅಡುಗೆ ವಿಭಾಗದ ವಿಶೇಷಾಧಿಕಾರಿ ಜಿ.ಎಲ್.ಎನ್.ಶಾಸ್ತ್ರಿ ಸೇರಿದಂತೆ ಹಲವರು ಹಾಜರಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!