Tiktok App – ಭಾರತದಲ್ಲಿ ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದಂತಹ Tiktok ಎಂಬ ಸೋಷಿಯಲ್ ಮಿಡಿಯಾ ಆಪ್ ಸದ್ಯ ಭಾರತದಲ್ಲಿ ನಿಷೇಧವಾಗಿದ್ದರೂ ಸಹ ಕೆಲವೊಂದು ದೇಶಗಳಲ್ಲಿ ಇನ್ನೂ Tiktok ಚಾಲ್ತಿಯಲ್ಲಿದೆ. ಇದೇ Tiktok ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದ ಮಗಳನ್ನೆ ತಂದೆಯೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ತನ್ನ ಮಗಳು ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು ವಿಡಿಯೋ ಮಾಡುತ್ತಿದ್ದನ್ನು ಸಹಿಸದೇ ಆತ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಆರೋಪಿಯನ್ನು ಬಂಧನ ಮಾಡಲಾಗಿದೆ.
ಈ ಘಟನೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ ಎನ್ನಲಾಗಿದೆ. ಆರೋಪಿಯನ್ನು ಸನ್ವರ್ ಉಲ್-ಹಕ್ ಎಂದು ಗುರ್ತಿಸಲಾಗಿದೆ. ಆರೋಪಿಯನ್ನು ವಿಚಾರಣೆ ಮಾಡುವಾಗ ಪೊಲೀಸರನ್ನು ದಾರಿತಪ್ಪಿಸಲು ಕಥೆಯೊಂದನ್ನು ಕಟ್ಟಿದ್ದ. ಅಪರಿಚಿತ ಬಂದೂಕುಧಾರಿ ತನ್ನ ಮಗಳ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಹೇಳಿದ್ದ. ಆದರೆ ತನಿಖೆ ನಡೆಸಿದ ಪೊಲೀಸರು ವಿಚಾರಣೆ ಆರಂಭಿಸಿದಾಗ ಅಮೇರಿಕಾ ಮೂಲದ ಮಗಳನ್ನು ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಂದಹಾಗೆ ಅಮೇರಿಕಾದಲ್ಲಿದ್ದ ಈ ಕುಟುಂಬ ಇತ್ತೀಚಿಗಷ್ಟೆ ಪಾಕಿಸ್ತಾನಕ್ಕೆ ಬಂದಿತ್ತು ಎನ್ನಲಾಗಿದೆ.
ಇನ್ನೂ ಪೊಲೀಸರ ತನಿಖೆಯ ವೇಳೆ ಆರೋಪಿ ಕೆಲವೊಂದು ಪ್ರಮುಖ ವಿಚಾರಗಳನ್ನು ಹೊರಹಾಕಿದ್ದಾರೆ. ಮಗಳು ಧರಿಸುವಂತಹ ಬಟ್ಟೆ ಹಾಗೂ ಜೀವನಶೈಲಿ ಮತ್ತು ಜನರನ್ನು ಭೇಟಿ ಮಾಡುವ ಅಭ್ಯಾಸ ನನಗೆ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಮೃತಳ ಪೋನ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ. ಮಗಳು ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳುವ ವಿಡಿಯೋಗಳ ಕಾರಣದಿಂದ ಆರೋಪಿ ತುಂಬಾ ಕೋಪಗೊಂಡಿರುವುದೇ ಕೊಲೆಗೆ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ. ಇನ್ನೂ ಅಮೇರಿಕಾದಲ್ಲಿ ಸುಮಾರು 25 ವರ್ಷಗಳಿಂದ ವಾಸಿಸುತ್ತಿದ್ದ ಈ ಕುಟುಂಬ ಇತ್ತೀಚಿಗಷ್ಟೆ ಬಲೂಚಿಸ್ತಾನ್ ಗೆ ಬಂದಿತ್ತು. ಆರೋಪಿಯ ಮಗಳು ಅಮೆರಿಕನ್ ಪ್ರಜೆಯಾಗಿದ್ದು, ಆಕೆ Tiktok ನಲ್ಲಿ ನಿರಂತರವಾಗಿ ಕೆಲವೊಂದು ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಳಂತೆ. ಇದು ಆರೋಪಿ ತಂದೆಯನ್ನು ಅಸಮಾಧಾನಗೊಳಿಸಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.