Good News – ರಾಜ್ಯದಲ್ಲಿ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರಿಗೆ ಗೌರವಧನವನ್ನು ಹೆಚ್ಚಳಕ್ಕೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಸಂಕಷ್ಟದಲ್ಲಿದ್ದ ಅತಿಥಿ ಶಿಕ್ಷಕರಿಗೆ ಶುಭಸುದ್ದಿ ಸಿಕ್ಕಂತಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಂತೆ ರಾಜ್ಯದ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಆಡಳಿತ ಇಲಾಖಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ.
ಈ ಕುರಿತು ರಾಜ್ಯ ಆರ್ಥಿಕ ಇಲಾಖೆ ಮಾಹಿತಿ ನೀಡಿದ್ದು, ಅದರಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಗೌರವಧವನ್ನು ಹೆಚ್ಚಿಸಲು ಆರ್ಥಿಕ ಇಲಾಖೆ ಸಹಮಿತಿಸಿದೆ ಎಂಬುದಾಗಿ ತಿಳಿಸಿದ್ದಾರೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅತಿಥಿ ಶಿಕ್ಷಕರ ಪ್ರಸ್ತುತ ಗೌರವಧನ ರೂ.10,500ರ ಜೊತೆಗೆ ಮಾಸ್ಟರ್ ಆನ್ ಡ್ಯೂಟಿ ಭತ್ಯೆ ರೂ.3,150 ಹಾಗೂ ಪ್ರಯಾಣ ಭತ್ಯೆ ರೂ.3000 ಸೇರಿದಂತೆ ಒಟ್ಟು ರೂ.16,650ಕ್ಕೆ ಗೌರವಧನ ಏರಿಕೆ ಮಾಡಲಾಗಿದೆ.
ಇನ್ನೂ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಪಾವತಿಸುತ್ತಿರುವ ಗೌರವಧನ ರೂ.12,000, ಮಾಸ್ಟರ್ ಆನ್ ಡ್ಯೂಟಿ ಭತ್ಯೆ ರೂ.3150 ಹಾಗೂ ಪ್ರಯಾಣ ಭತ್ಯೆ ರೂ.3000 ಸೇರಿದಂತೆ ಒಟ್ಟು ಗೌರವಧನವನ್ನು ರೂ.18,150ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯದ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಇದನ್ನು ಭವಿಷ್ಯವರ್ತಿಯಾಗಿ ಜಾರಿಗೊಳಿಸುವಂತೆ ಹಾಗೂ ಪ್ರಸಕ್ತ ಸಾಲಿನಲ್ಲಿ ಒದಗಿಸಿರುವ ಅನುದಾನಕ್ಕೆ ಸೀಮಿತಗೊಳಿಸಿ ಯಾವುದೇ ಹೆಚ್ಚುವರಿ ಅನುದಾನ ಕೋರತಕ್ಕದ್ದಲ್ಲ ಎಂಬ ಷರತ್ತಿಗೊಳಪಟ್ಟು ಅನುಮೋದಿಸಿ ಸರ್ಕಾರ ಆದೇಶ ಹೊರಡಿಸಿದೆ.